ಹೆಂಡತಿ ಜತೆ ಗಂಡನ ಬಲವಂತದ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ ಎಂಬ ಕೋರ್ಟ್​ ಆದೇಶಕ್ಕೆ ತಾಪ್ಸೀ ಪನ್ನು ಖಡಕ್​ ಪ್ರತಿಕ್ರಿಯೆ

ಪತಿ ತನ್ನ ಜತೆ ಒತ್ತಾಯ ಪೂರ್ವಕವಾಗಿ ಲೈಂಗಿಕ ಸಂಪರ್ಕ ಹೊಂದಿದ್ದಾನೆ. ಆತ ನನ್ನ ಮೆಲೆ ಮಾಡಿರುವುದು ಅತ್ಯಾಚಾರ ಎಂದು ಪತಿ ವಿರುದ್ಧ ಹೆಂಡತಿಯೇ ದೂರು ದಾಖಲಿಸಿದ್ದಳು.

ಹೆಂಡತಿ ಜತೆ ಗಂಡನ ಬಲವಂತದ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ ಎಂಬ ಕೋರ್ಟ್​ ಆದೇಶಕ್ಕೆ ತಾಪ್ಸೀ ಪನ್ನು ಖಡಕ್​ ಪ್ರತಿಕ್ರಿಯೆ
Follow us
| Updated By: ರಾಜೇಶ್ ದುಗ್ಗುಮನೆ

Updated on: Aug 27, 2021 | 5:01 PM

ಮದುವೆ ನಂತರದಲ್ಲಿ ಹೆಂಡತಿ ಜತೆ ಪತಿ ಒತ್ತಾಯ ಪೂರ್ವಕವಾಗಿ ಲೈಂಗಿಕ ಕ್ರಿಯೆ ನಡೆಸಿದರೆ ಅದನ್ನು ರೇಪ್​ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಬಿಲಾಸ್​ಪುರ್​ (ಛತ್ತೀಸ್‌ಗಡ್‌) ಹೈಕೋರ್ಟ್​ ತೀರ್ಪು ನೀಡಿದೆ. ಈ ತೀರ್ಪಿನ ಬಗ್ಗೆ ಎಲ್ಲ ಕಡೆಗಳಲ್ಲೂ ಚರ್ಚೆ ಆಗುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ತಾಪ್ಸೀ ಪನ್ನು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಪತಿ ತನ್ನ ಜತೆ ಒತ್ತಾಯ ಪೂರ್ವಕವಾಗಿ ಲೈಂಗಿಕ ಸಂಪರ್ಕ ಹೊಂದಿದ್ದಾನೆ. ಆತ ನನ್ನ ಮೇಲೆ ಮಾಡಿರುವುದು ಅತ್ಯಾಚಾರ ಎಂದು ಪತಿ ವಿರುದ್ಧ ಹೆಂಡತಿಯೇ ದೂರು ದಾಖಲಿಸಿದ್ದಳು. ಇಬ್ಬರೂ ಕಾನೂನು ಬದ್ಧವಾಗಿ ಮದುವೆ ಆಗಿದ್ದರು. ಈ ಕಾರಣಕ್ಕೆ ಕಾನೂನುಬದ್ಧವಾಗಿ ಮದುವೆಯಾದ ಪತ್ನಿಯೊಂದಿಗೆ ಪತಿ ಲೈಂಗಿಕ ಕ್ರಿಯೆ ನಡೆಸಿದರೆ ಅದು ಅತ್ಯಾಚಾರವಲ್ಲ. ಲೈಂಗಿಕ ಕ್ರಿಯೆ ಬಲವಂತವಾಗಿದ್ದರೂ ಅಥವಾ ಆಕೆಯ ಇಚ್ಛೆಗೆ ವಿರುದ್ಧವಾಗಿದ್ದರೂ ಸಹ ಅದನ್ನು ರೇಪ್​ ಎಂದು ಕರೆಯಲು ಸಾಧ್ಯವಿಲ್ಲ ಎಂದು ಕೋರ್ಟ್​ ತೀರ್ಪು ನೀಡಿತ್ತು.

ಈ ಬಗ್ಗೆ ಮಾಡಲಾದ ಟ್ವೀಟ್​ ರೀ ಟ್ವೀಟ್​ ಮಾಡಿಕೊಂಡಿರುವ ತಾಪ್ಸೀ, ‘ಇದೊಂದು ಕೇಳುವುದು ಬಾಕಿ ಇತ್ತು’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಕೋರ್ಟ್​ ಆದೇಶದ ಬಗ್ಗೆ ತೀವ್ರ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ತಾಪ್ಸೀ ಅವರು ‘ಪಿಂಕ್’​ ಸಿನಿಮಾದಲ್ಲಿ ನಟಿಸಿದ್ದರು. ಯಾವುದೇ ಹೆಣ್ಣಾಗಿರಲಿ ಅವಳು ಒಮ್ಮೆ ಒಪ್ಪಿಗೆ ಸೂಚಿಸಿಲ್ಲ ಎಂದರೆ ಅದರ ಅರ್ಥ ಬೇಡ ಎಂದೇ ಆಗಿರುತ್ತದೆ. ಆಕೆ ನೋ ಹೇಳಿದ ವಿಚಾರದಲ್ಲಿ ಮುಂದುವರಿಯಲೇ ಬಾರದು ಎಂಬುದು ಪಿಂಕ್​ ಸಿನಿಮಾ ಸಾರಾಂಶ. ಇಡೀ ಚಿತ್ರದಲ್ಲಿ ಹೆಣ್ಣಿನ ಹಕ್ಕಿನ ರಕ್ಷಣೆ ಬಗ್ಗೆ ಸಾಕಷ್ಟು ವಿವರವಾಗಿ ಹೇಳಲಾಗಿತ್ತು.

ಕಳೆದ ತಿಂಗಳು ತಾಪ್ಸೀ ಪನ್ನು ನಟನೆಯ ‘ಹಸೀನ್​ ದಿಲ್​ರುಬಾ’ ಸಿನಿಮಾ ರಿಲೀಸ್​ ಆಗಿತ್ತು. ತಾಪ್ಸೀ ಪನ್ನು ಸದಾ ಒಂದಿಲ್ಲೊಂದು ಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ಎದುರಾಗುತ್ತಾರೆ. ಈ ಬಾರಿ ಅವರು ‘ಹಸೀನ್​ ದಿಲ್​ರುಬಾ’ ಚಿತ್ರಕ್ಕಾಗಿ ಹಾಟ್​ ಅವತಾರ ತಾಳಿದ್ದರು. ಈ ಚಿತ್ರ ಚಿಕ್ಕ ನಗರದಲ್ಲಿ ನಡೆಯುವ ಕಥೆ. ಗಂಡನನ್ನು ಹತ್ಯೆ ಮಾಡಿದ ಆರೋಪ ಕಥಾ ನಾಯಕಿ ವಿರುದ್ಧ ಕೇಳಿಬರುತ್ತದೆ. ಕಥಾ ನಾಯಕಿ ಗಂಡನ ಸಾವಿನ ನಂತರ, ಆಕೆಯ ಪ್ರಿಯಕರ ಕೂಡ ಕಾಣೆ ಆಗುತ್ತಾನೆ. ಕಥಾ ನಾಯಕಿ ಕಟಕಟೆ ಏರುವ ಪರಿಸ್ಥಿತಿ ಬಂದೊದಗುತ್ತದೆ. ಮುಂದೇನಾಗುತ್ತದೆ ಎನ್ನುವುದೇ ಸಿನಿಮಾದ ಕುತೂಹಲ.

ಇದನ್ನೂ ಓದಿ: ನಟಿ ತಾಪ್ಸೀ ಪನ್ನು ಡೇಟ್​ ಮಾಡುವ ಹುಡುಗನಿಗೆ ಈ ಗುಣ ಇರಲೇಬೇಕು

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ