ನಟಿ ತಾಪ್ಸೀ ಪನ್ನು ಡೇಟ್​ ಮಾಡುವ ಹುಡುಗನಿಗೆ ಈ ಗುಣ ಇರಲೇಬೇಕು

ಕುಟುಂಬದವರ ಒಪ್ಪಿಗೆ ಇದ್ದರೆ ಮಾತ್ರ ಮದುವೆ ಆಗಬೇಕು ಎಂಬುದು ಅನೇಕರ ಆಸೆ ಆಗಿರುತ್ತದೆ. ಇದಕ್ಕೆ, ತಾಪ್ಸೀ ಕೂಡ ಹೊರತಾಗಿಲ್ಲ.

ನಟಿ ತಾಪ್ಸೀ ಪನ್ನು ಡೇಟ್​ ಮಾಡುವ ಹುಡುಗನಿಗೆ ಈ ಗುಣ ಇರಲೇಬೇಕು

ಚಿತ್ರರಂಗದಲ್ಲಿ ಸ್ಟಾರ್​ ನಟಿಯರು ಆಗಾಗ ತಮ್ಮ ಡೇಟಿಂಗ್​, ಮದುವೆ ವಿಚಾರದ ಬಗ್ಗೆ ಹೇಳಿಕೊಳ್ಳುತ್ತಾರೆ. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ, ತಾವು ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ಹೇಳಿಕೊಂಡಿದ್ದಿದೆ. ಈಗ ಬಾಲಿವುಡ್​ ಸ್ಟಾರ್​ ನಟಿ ತಾಪ್ಸೀ ಪನ್ನು ಡೇಟಿಂಗ್​ ಮಾಡುವ ಹುಡುಗ ಹೇಗಿರಬೇಕು ಎನ್ನುವ ವಿಚಾರದ ಬಗ್ಗೆ ಮೌನ ಮುರಿದಿದ್ದಾರೆ.  

ಕುಟುಂಬದವರ ಒಪ್ಪಿಗೆ ಇದ್ದರೆ ಮಾತ್ರ ಮದುವೆ ಆಗಬೇಕು ಎಂಬುದು ಅನೇಕರ ಆಸೆ ಆಗಿರುತ್ತದೆ. ಇದಕ್ಕೆ, ತಾಪ್ಸೀ ಕೂಡ ಹೊರತಾಗಿಲ್ಲ. ತಂದೆ-ತಾಯಿ ಮದುವೆಗೆ ಒಪ್ಪಿದರೆ ಮಾತ್ರ ತಾಪ್ಸೀ ಮದುವೆ ಆಗುತ್ತಾರಂತೆ. ‘ನನ್ನ ಕುಟುಂಬದವರಿಗೆ ಒಪ್ಪಿಗೆ ಇಲ್ಲದ ಹುಡುಗನನ್ನು ನಾನು ಮದುವೆ ಆಗುವುದಿಲ್ಲ.  ಮದುವೆ ಆಗುವ ಸಾಧ್ಯತೆ ಇದ್ದರೆ ಮಾತ್ರ ಅಂತಹ ವ್ಯಕ್ತಿ ಮೇಲೆ ನಾನು ಸಮಯ ಹಾಗೂ ಶಕ್ತಿಯನ್ನು ವ್ಯಯಿಸಬೇಕು. ಟೈಮ್​ ಪಾಸ್​ ಮಾಡೋಕೆ ನಂಗೆ ಇಷ್ಟವಿಲ್ಲ. ಒಂದೊಮ್ಮೆ ಮದುವೆ ಆಗುವ ಸಾಧ್ಯತೆ ಕಡಿಮೆ ಇದ್ದರೆ ನಾನು ಅಂಥವರನ್ನು ಹೋಗೋಕೆ ಬಿಡುತ್ತೇನೆ. ಡೇಟ್​ ಮಾಡುವ ಹುಡುಗನಿಗೆ ಮದುವೆ ಆಗುವ ಗುಣ ಇರಲೇಬೇಕು’ ಎಂದಿದ್ದಾರೆ ಅವರು.

ಇತ್ತೀಚೆಗೆ ತಾಪ್ಸೀ ಪನ್ನು ನಟನೆಯ ‘ಹಸೀನ್​ ದಿಲ್​ರುಬಾ’ ಸಿನಿಮಾ ರಿಲೀಸ್​ ಆಗಿತ್ತು. ತಾಪ್ಸೀ ಪನ್ನು ಸದಾ ಒಂದಿಲ್ಲೊಂದು ಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ಎದುರಾಗುತ್ತಾರೆ. ಈ ಬಾರಿ ಅವರು ‘ಹಸೀನ್​ ದಿಲ್​ರುಬಾ’ ಚಿತ್ರಕ್ಕಾಗಿ ಹಾಟ್​ ಅವತಾರ ತಾಳಿದ್ದರು. ಈ ಚಿತ್ರ ಚಿಕ್ಕ ನಗರದಲ್ಲಿ ನಡೆಯುವ ಕಥೆ. ಗಂಡನನ್ನು ಹತ್ಯೆ ಮಾಡಿದ ಆರೋಪ ತಾಪ್ಸಿ ವಿರುದ್ಧ ಕೇಳಿಬರುತ್ತದೆ. ತಾಪ್ಸಿ ಗಂಡನ ಸಾವಿನ ನಂತರ, ಆಕೆಯ ಪ್ರಿಯಕರ ಕೂಡ ಕಾಣೆ ಆಗುತ್ತಾನೆ. ತಾಪ್ಸೀ ಕಟಕಟೆ ಏರುವ ಪರಿಸ್ಥಿತಿ ಬಂದೊದಗುತ್ತದೆ. ಮುಂದೇನಾಗುತ್ತದೆ ಎನ್ನುವುದೇ ಕುತೂಹಲ.

ಇದನ್ನೂ ಓದಿ: Haseen Dillruba Trailer: ಬದಲಾಯ್ತು ತಾಪ್ಸಿ ಪನ್ನು ಅವತಾರ; ಬೋಲ್ಡ್ ಲುಕ್​ ನೋಡಿ ಫ್ಯಾನ್ಸ್​ ಫಿದಾ

ಕಂಗನಾ ರಣಾವತ್​-ತಾಪ್ಸೀ ಪನ್ನು ಈಗ ಫ್ರೆಂಡ್ಸ್​! ಜಗಳ ಅಂತ್ಯ ಆಗಿದ್ದಕ್ಕೆ ಕಾರಣ ಏನು?

Click on your DTH Provider to Add TV9 Kannada