AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Haseen Dillruba Trailer: ಬದಲಾಯ್ತು ತಾಪ್ಸಿ ಪನ್ನು ಅವತಾರ; ಬೋಲ್ಡ್ ಲುಕ್​ ನೋಡಿ ಫ್ಯಾನ್ಸ್​ ಫಿದಾ

ತಾಪ್ಸಿ ಈ ಚಿತ್ರಕ್ಕಾಗಿ ಹಾಟ್​ ಅವತಾರ ತಾಳಿದ್ದಾರೆ. ಅಷ್ಟೇ ಅಲ್ಲ, ಅದನ್ನು ಅವರು ಸೂಕ್ತವಾಗಿ ನಿರ್ವಹಿಸಿದ್ದಾರೆ ಎಂಬುದು ಟ್ರೇಲರ್​ನಲ್ಲಿ ಗೊತ್ತಾಗುತ್ತದೆ. ‘ಮನ್​ಮರ್ಜಿಯಾ’​ ಸಿನಿಮಾದಲ್ಲಿಯೂ ತಾಪ್ಸಿ ಇದೇ ರೀತಿಯ ಬೋಲ್ಡ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Haseen Dillruba Trailer: ಬದಲಾಯ್ತು ತಾಪ್ಸಿ ಪನ್ನು ಅವತಾರ; ಬೋಲ್ಡ್ ಲುಕ್​ ನೋಡಿ ಫ್ಯಾನ್ಸ್​ ಫಿದಾ
ಬದಲಾಯ್ತು ತಾಪ್ಸಿ ಪನ್ನು ಅವತಾರ; ಬೋಲ್ಡ್ ಲುಕ್​ ನೋಡಿ ಫ್ಯಾನ್ಸ್​ ಫಿದಾ
TV9 Web
| Edited By: |

Updated on:Jun 11, 2021 | 7:43 PM

Share

ನಟಿ ತಾಪ್ಸಿ ಪನ್ನು ಸದಾ ಒಂದಿಲ್ಲೊಂದು ಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ಎದುರಾಗುತ್ತಾರೆ. ಈ ಬಾರಿ ಅವರು ಹಸೀನ್​ ದಿಲ್​ರುಬಾ ಚಿತ್ರಕ್ಕಾಗಿ ಹಾಟ್​ ಅವತಾರ ತಾಳಿದ್ದಾರೆ. ಇಂದು ಚಿತ್ರದ ಟ್ರೇಲರ್ ರಿಲೀಸ್​ ಆಗಿದ್ದು, ಸಾಕಷ್ಟು ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

‘ಹಸೀನ್​ ದಿಲ್​ರುಬಾ’ ಚಿಕ್ಕ ನಗರದಲ್ಲಿ ನಡೆಯುವ ಕಥೆ. ಗಂಡನನ್ನು ಹತ್ಯೆ ಮಾಡಿದ ಆರೋಪ ತಾಪ್ಸಿ ವಿರುದ್ಧ ಕೇಳಿಬರುತ್ತದೆ. ತಾಪ್ಸಿ ಗಂಡನನ್ನು ಹತ್ಯೆ ಮಾಡಲು ಪಕ್ಕದ ಮನೆಯವನ ಜತೆ ಇಟ್ಟುಕೊಂಡ ಸಂಬಂಧ ಕಾರಣವೇ? ಎನ್ನುವ ಅನುಮಾನ ಬರುವ ರೀತಿಯಲ್ಲಿ ಟ್ರೇಲರ್​ ಹೆಣೆಯಲಾಗಿದೆ. ತಾಪ್ಸಿ ಗಂಡನ ಸಾವಿನ ನಂತರ, ಆಕೆಯ ಪ್ರಿಯಕರ ಕೂಡ ಕಾಣೆ ಆಗುತ್ತಾನೆ. ಇದಿಷ್ಟು ವಿಚಾರಗಳನ್ನು ಟ್ರೇಲರ್​ನಲ್ಲಿ ಹೇಳಲಾಗಿದ್ದು, ಪ್ರೇಕ್ಷಕರಿಗೆ ಸಾಕಷ್ಟು ನಿಗೂಢವಾಗಿ ಕಾಣುತ್ತದೆ.

ತಾಪ್ಸಿ ಈ ಚಿತ್ರಕ್ಕಾಗಿ ಹಾಟ್​ ಅವತಾರ ತಾಳಿದ್ದಾರೆ. ಅಷ್ಟೇ ಅಲ್ಲ, ಅದನ್ನು ಅವರು ಸೂಕ್ತವಾಗಿ ನಿರ್ವಹಿಸಿದ್ದಾರೆ ಎಂಬುದು ಟ್ರೇಲರ್​ನಲ್ಲಿ ಗೊತ್ತಾಗುತ್ತದೆ. ‘ಮನ್​ಮರ್ಜಿಯಾ’​ ಸಿನಿಮಾದಲ್ಲಿಯೂ ತಾಪ್ಸಿ ಇದೇ ರೀತಿಯ ಬೋಲ್ಡ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಟ್ರೆಲರ್​ ನೋಡಿದ ನಂತರದಲ್ಲಿ ಈ ಸಿನಿಮಾದಲ್ಲಿ ಸಾಕಷ್ಟು ಟ್ವಿಸ್ಟ್​ ಇರೋದು ಸ್ಪಷ್ಟವಾಗುತ್ತದೆ. ವಿಕ್ರಾಂತ್​ ಮಾಸ್ಸಿ, ಹರ್ಷವರ್ಧನ್​ ರಾಣೆ ಕೂಡ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ.

‘ಮನ್​ಮರ್ಜಿಯಾ’​, ‘ಮೆಂಟಲ್​ ಹೈ ಕ್ಯಾ’ ಚಿತ್ರಕ್ಕೆ ಕಥೆ ಬರೆದ ಕನಿಕಾ ದಿಲ್ಲೋನ್​ ಈ ಚಿತ್ರಕ್ಕೂ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ‘ಹಸೀ ತೋ ಪಸೀ’ ಖ್ಯಾತಿ ವಿನಿಲ್​ ಮ್ಯಾಥೀವ್​ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಜುಲೈ 12ರಂದು ಸಿನಿಮಾ ನೆಟ್​ಫ್ಲಿಕ್ಸ್​ನಲ್ಲಿ ಪ್ರೀಮಿಯರ್​ ಆಗುತ್ತಿದೆ.

ಇದನ್ನೂ ಓದಿ: Taapsee Pannu: 66ನೇ ಫಿಲ್ಮ್​ ಫೇರ್​ ಪ್ರಶಸ್ತಿ; ಇರ್ಫಾನ್​ ಖಾನ್-ತಾಪ್ಸಿ ಪನ್ನು​ ಅತ್ಯುತ್ತಮ ನಟ-ನಟಿ!

Published On - 7:35 pm, Fri, 11 June 21

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್