ಹೊಸ ಉದ್ಯಮಕ್ಕೆ ಕೈ ಹಾಕಿದ ‘ರಾಬರ್ಟ್’​ ವಿಲನ್ ಜಗಪತಿ ಬಾಬು; ಏನದು?

ಹೊಸ ಉದ್ಯಮಕ್ಕೆ ಕೈ ಹಾಕಿದ ‘ರಾಬರ್ಟ್’​ ವಿಲನ್ ಜಗಪತಿ ಬಾಬು; ಏನದು?
ಸಿನಿಮಾ ಬಿಟ್ಟು ಹೊಸ ಉದ್ಯಮಕ್ಕೆ ಕೈ ಹಾಕಿದ ‘ರಾಬರ್ಟ್’​ ವಿಲನ್ ಜಗಪತಿ ಬಾಬು

ಕೆಲವರ ಜತೆಗೂಡಿ ಜಗಪತಿ ಬಾಬು ಆಯುರ್ವೇದ ಉದ್ಯಮಕ್ಕೆ ಇಳಿಯುತ್ತಿದ್ದಾರೆ. ಹೈದರಾಬಾದ್​ನ ಜುಬ್ಲಿ ಹಿಲ್ಸ್​ನಲ್ಲಿ ಅವರು ಆಸ್ಪತ್ರೆಯನ್ನು ಕೂಡ ನಿರ್ಮಾಣ ಮಾಡುತ್ತಿದ್ದಾರೆ.

Rajesh Duggumane

|

Jun 11, 2021 | 9:42 PM

ಸ್ಟಾರ್​ ಕಲಾವಿದರು ಸಿನಿಮಾ ಜತೆ ಜತೆಗೆ ಬೇರೆ ಉದ್ಯಮಗಳಲ್ಲೂ ತೊಡಗಿಕೊಂಡಿರುತ್ತಾರೆ. ಈಗಾಗಲೇ ಸಾಕಷ್ಟು ಹೀರೋಗಳು ತಮ್ಮದೇ ಉದ್ಯಮ ಆರಂಭಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಖಳ ಪಾತ್ರಗಳ ಮೂಲಕ ಹೆಚ್ಚು ಗುರುತಿಸಿಕೊಂಡಿರುವ ನಟ ಜಗಪತಿ ಬಾಬು ಕೂಡ ಈಗ ಉದ್ಯಮವೊಂದಕ್ಕೆ ಕೈ ಹಾಕುತ್ತಿದ್ದಾರೆ.  

ಹೌದು, ಇತ್ತೀಚೆಗೆ ಜಗಪತಿ ಬಾಬು ಆನಂದಯ್ಯ ಮೆಡಿಸಿನ್​ಗೆ ಬೆಂಬಲ ನೀಡಿದ್ದರು. ಅಷ್ಟೇ ಅಲ್ಲ, ಇದನ್ನು ಬೆಂಬಲಿಸುವಂತೆ ಕರೆ ನೀಡಿದ್ದರು. ಈ ವಿಚಾರ ಸಾಕಷ್ಟು ಜನರಲ್ಲಿ ಅಚ್ಚರಿ ಮೂಡಿಸಿತ್ತು. ಜಗಪತಿ ಬಾಬು ಈ ರೀತಿ ಮಾಡುವುದಕ್ಕೂ ಒಂದು ಕಾರಣವಿದೆ.  ಜಗಪತಿ ಬಾಬು ಶೀಘ್ರವೇ  ಆಯುರ್ವೇದ ಉದ್ಯಮದಲ್ಲಿ ತೊಡಗಿಕೊಳ್ಳಲಿದ್ದಾರಂತೆ. ಈ ಕಾರಣಕ್ಕೆ ಜಗಪತಿ ಬಾಬು ಈ ರೀತಿಯ ಹೇಳಿಕೆ ನೀಡಿದ್ದರು.

ಕೆಲವರ ಜತೆಗೂಡಿ ಜಗಪತಿ ಬಾಬು ಆಯುರ್ವೇದ ಉದ್ಯಮಕ್ಕೆ ಇಳಿಯುತ್ತಿದ್ದಾರೆ. ಹೈದರಾಬಾದ್​ನ ಜುಬ್ಲಿ ಹಿಲ್ಸ್​ನಲ್ಲಿ ಅವರು ಆಸ್ಪತ್ರೆಯನ್ನು ಕೂಡ ನಿರ್ಮಾಣ ಮಾಡುತ್ತಿದ್ದಾರೆ. ಕೆಲವೇ ತಿಂಗಳಲ್ಲಿ ಆಸ್ಪತ್ರೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, ಜಗಪತಿ ಬಾಬು ಇದರ ನಿರ್ದೇಶಕರಾಗಲಿದ್ದಾರೆ.

ಹಾಗಾದರೆ, ಜಗಪತಿ ಬಾಬು ನಟನೆಯಿಂದ ದೂರ ಉಳಿಯುತ್ತಾರಾ? ಖಂಡಿತವಾಗಿಯೂ ಇಲ್ಲ. ಜಗಪತಿ ಬಾಬು ನಟನೆ ಜತೆಗೆ ಬೇರೆ ಬೇರೆ ಉದ್ಯಮಗಳಲ್ಲೂ ತೊಡಗಿಕೊಳ್ಳಬೇಕು ಎನ್ನುವ ಇಚ್ಛೆ ಹೊಂದಿದ್ದಾರೆ. ಈ ಕಾರಣಕ್ಕೆ ಅವರು ಬೇರೆ ಬೇರೆ ಉದ್ಯಮಗಳಿಗೆ ಕೈಹಾಕುತ್ತಿದ್ದಾರೆ.

ಈ ವರ್ಷ ತೆರೆಗೆ ಬಂದ ರಾಬರ್ಟ್​ ಸಿನಿಮಾದಲ್ಲಿ ಜಗಪತಿ ಬಾಬು ವಿಲನ್​ ಆಗಿ ಕಾಣಿಸಿಕೊಂಡಿದ್ದರು. ಈ ಮೂಲಕ ದರ್ಶನ್​ ಎದುರು ಖಡಕ್​ ಆಗಿ ಕಾಣಿಸಿಕೊಂಡಿದ್ದರು. ಅವರ ನಟನೆಗೆ ಎಲ್ಲ ಕಡೆಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು.

ಇದನ್ನೂ ಓದಿ: Darshan: ದರ್ಶನ್​ ಹೇಳಿದ ಒಂದೇ ಮಾತಿಗೆ 6 ದಿನದಲ್ಲಿ ಹರಿದು ಬಂತು 1 ಕೋಟಿ ರೂ.! ಯಾವ ಮೃಗಾಲಯಕ್ಕೆ ಎಷ್ಟು ಲಕ್ಷ?

Follow us on

Related Stories

Most Read Stories

Click on your DTH Provider to Add TV9 Kannada