ನಟ ದುನಿಯಾ ವಿಜಯ್ಗೆ ಮಾತೃವಿಯೋಗ
ಅಮ್ಮನಿಗೆ ಆಸ್ಪತ್ರೆಗೆ ಹೋಗಲು ಇಷ್ಟವಿರಲಿಲ್ಲ. ಹೀಗಾಗಿ ಮನೆಯಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ತಾಯಿ ಮತ್ತೆ ಸಿಗಲ್ಲ, ಅವರು ಇರುವವರೆಗೂ ಚೆನ್ನಾಗಿ ನೋಡಿಕೊಳ್ಳಬೇಕು ಅನ್ನೋದಷ್ಟೇ ನನ್ನ ಆಸೆ ಎಂದು ಅವರು ಹೇಳಿದ್ದರು.
ಇತ್ತೀಚೆಗೆ ಕೊವಿಡ್ನಿಂದ ದುನಿಯಾ ವಿಜಯ್ ಪೋಷಕರು ಚೇತರಿಸಿಕೊಂಡಿದ್ದರು. ಇನ್ನೇನು ಸಮಸ್ಯೆ ಬಗೆಹರಿಯಿತು ಎನ್ನುತ್ತಿರುವಾಗಲೇ ಮತ್ತೆ ತಾಯಿಯ ಆರೋಗ್ಯ ಹದಗೆಟ್ಟಿತ್ತು. ಬ್ರೇನ್ ಸ್ಟ್ರೋಕ್ ಆದ ಕಾರಣ ನಾರಾಯಣಮ್ಮ ಆರೋಗ್ಯ ಗಂಭೀರವಾಗಿತ್ತು. ಈಗ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆನೇಕಲ್ ತಾಲೂಕಿನ ಕುಂಬಾರ ಹಳ್ಳಿಯಲ್ಲಿ ನಾಳೆ ಮಧ್ಯಾಹ್ನ ದುನಿಯಾ ವಿಜಿ ತಾಯಿ ಅಂತ್ಯಕ್ರಿಯೆ ನಡೆಯಲಿದೆ.
ಇತ್ತೀಚೆಗೆ ಟಿವಿ9 ಜತೆ ಮಾತನಾಡಿದ್ದ ವಿಜಯ್, ‘ಅಮ್ಮನಿಗೆ ಆಸ್ಪತ್ರೆಗೆ ಹೋಗಲು ಇಷ್ಟವಿರಲಿಲ್ಲ. ಹೀಗಾಗಿ ಮನೆಯಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ತಾಯಿ ಮತ್ತೆ ಸಿಗಲ್ಲ, ಅವರು ಇರುವವರೆಗೂ ಚೆನ್ನಾಗಿ ನೋಡಿಕೊಳ್ಳಬೇಕು ಅನ್ನೋದಷ್ಟೇ ನನ್ನ ಆಸೆ. ಪ್ರತಿದಿನ ಅವರ ಆರೋಗ್ಯ ಕ್ಷೀಣಿಸುತ್ತಿದೆ. ಆದರೆ ಮತ್ತೆ ಆರೋಗ್ಯ ಸರಿಯಾಗುತ್ತೆ ಎಂಬ ವಿಶ್ವಾಸವಿದೆ’ ಎಂದು ದುನಿಯಾ ವಿಜಯ್ ಹೇಳಿದ್ದರು. ಆದರೆ, ಹಾಗಾಗಲೇ ಇಲ್ಲ.
Latest Videos