AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಟೀಸರ್ ನೋಡಿ ಆ ತಮಿಳು ಸಿನಿಮಾ ನೆನಪಿಸಿಕೊಳ್ಳುತ್ತಿರುವುದೇಕೆ?

Toxic movie: ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿದೆ. ಟೀಸರ್​​ನಲ್ಲಿ ಯಶ್ ಅವರ ಎರಡು ಭಿನ್ನ ಲುಕ್​​ಗಳನ್ನು ತೋರಿಸಲಾಗಿದ್ದು, ಅಭಿಮಾನಿಗಳು ಯಶ್ ಅವರ ಲುಕ್​​ಗಳಿಗೆ ಮಾಸ್ ಅಪೀಲ್​​ಗೆ ಉಘೆ ಎಂದಿದ್ದಾರೆ. ಆದರೆ ಟೀಸರ್ ನೋಡಿದ ಕೆಲವರಿಗೆ ತಮಿಳಿನ ಒಂದು ಸಿನಿಮಾ ನೆನಪಾಗುತ್ತಿದೆಯಂತೆ.

‘ಟಾಕ್ಸಿಕ್’ ಟೀಸರ್ ನೋಡಿ ಆ ತಮಿಳು ಸಿನಿಮಾ ನೆನಪಿಸಿಕೊಳ್ಳುತ್ತಿರುವುದೇಕೆ?
Toxic Movie
ಮಂಜುನಾಥ ಸಿ.
|

Updated on: Feb 20, 2026 | 3:58 PM

Share

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ಇಂದು (ಫೆಬ್ರವರಿ 20) ಬಿಡುಗಡೆ ಆಗಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಟೀಸರ್ ಬಿಡುಗಡೆ ಆಗಿದ್ದು, ಕೆಲವೇ ಗಂಟೆಗಳಲ್ಲಿ ಕೋಟ್ಯಂತರ ವೀವ್ಸ್​ಗಳನ್ನು ಪಡೆದುಕೊಂಡಿದೆ. ಈ ಹಿಂದೆ ಬಿಡುಗಡೆ ಆಗಿದ್ದ ಯಶ್ ಅವರ ಕ್ಯಾರೆಕ್ಟರ್ ಟೀಸರ್ ರೀತಿಯೇ ಈ ಟೀಸರ್ ಸಹ ಮಾಸ್ ಆಗಿ ಮೂಡಿಬಂದಿದೆ. ಟೀಸರ್​​ನಲ್ಲಿ ಯಶ್ ಅವರ ಎರಡು ಭಿನ್ನ ಲುಕ್​​ಗಳನ್ನು ತೋರಿಸಲಾಗಿದ್ದು, ಅಭಿಮಾನಿಗಳು ಯಶ್ ಅವರ ಲುಕ್​​ಗಳಿಗೆ ಮಾಸ್ ಅಪೀಲ್​​ಗೆ ಉಘೆ ಎಂದಿದ್ದಾರೆ. ಆದರೆ ಟೀಸರ್ ನೋಡಿದ ಕೆಲವರಿಗೆ ತಮಿಳಿನ ಒಂದು ಸಿನಿಮಾ ನೆನಪಾಗುತ್ತಿದೆಯಂತೆ.

‘ಟಾಕ್ಸಿಕ್’ ಟೀಸರ್​​ನ ಕೊನೆಯಲ್ಲಿ ಯಶ್ ಅವರು ಯಂಗ್ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಟೀಸರ್​​ನ ಕೊನೆಯಲ್ಲಿ ‘ಐ ಆಮ್ ಹೋಮ್ ಡ್ಯಾಡಿ’ ಎಂಬ ಡೈಲಾಗ್, ಇದು ಅಪ್ಪ ಮತ್ತು ಮಗನ ನಡುವಿನ ಕಿತ್ತಾಟದ ಕತೆಯೆಂಬ ಅನುಮಾನವನ್ನು ಹುಟ್ಟಿಸುತ್ತಿದೆ. ಟೀಸರ್​​ನ ಕೊನೆಯ ಕೆಲವು ಸೆಕೆಂಡುಗಳು ನೋಡಿದ ಕೆಲವೇ ಕೆಲವು ಸಿನಿಮಾ ಪ್ರೇಮಿಗಳು ತಮಿಳಿನ ಒಂದು ಸಿನಿಮಾವನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ.

ತಮಿಳಿನ ಸ್ಟಾರ್ ನಟ ಚಿಯಾನ್ ವಿಕ್ರಂ ನಟಿಸಿದ್ದ ‘ಮಹಾನ್’ ಸಿನಿಮಾಕ್ಕೂ ‘ಟಾಕ್ಸಿಕ್’ ಸಿನಿಮಾಕ್ಕೂ ಹೋಲಿಕೆ ಇರಬಹುದಾ ಎಂಬ ಚರ್ಚೆ ಸಣ್ಣದಾಗಿ ನಡೆಯುತ್ತಿದೆ. ‘ಮಹಾನ್’ ಸಿನಿಮಾನಲ್ಲಿ ಚಿಯಾನ್ ವಿಕ್ರಂ ಮಗ (ನಟಿಸಿರುವುದು ಸಹ ಚಿಯಾನ್ ವಿಕ್ರಂ ಮಗ ಧ್ರುವ್) ಮತ್ತು ಪತ್ನಿಯನ್ನು ತ್ಯಜಿಸಿ ಲಿಕ್ಕರ್ ಮಾಫಿಯಾ ಸೇರಿಕೊಳ್ಳುತ್ತಾನೆ. ದೊಡ್ಡ ಡಾನ್ ಆಗಿ ಬೆಳೆಯುತ್ತಾನೆ. ಕೊನೆಗೆ ಅವನ ಮಗನೇ ಅವನಿಗೆ ಎದುರಾಗಿ ನಿಂತು ಆತನ ಸಾಮ್ರಾಜ್ಯವನ್ನು ನೆಲಸಮಗೊಳಿಸುತ್ತಾನೆ.

ಇದನ್ನೂ ಓದಿ:‘ವಿಂಟೇಜ್ ಯಶ್ ಈಸ್ ಬ್ಯಾಕ್’; ‘ಟಾಕ್ಸಿಕ್ ಟೀಸರ್ ನೋಡಿ ಯಶ್ ಫ್ಯಾನ್ಸ್ ಖುಷ್

‘ಟಾಕ್ಸಿಕ್’ನಂತೆಯೇ ‘ಮಹಾನ್’ ಸಿನಿಮಾನಲ್ಲಿ ಸಹ ಮಗನ ಪಾತ್ರಧಾರಿ ಸಖತ್ ವೈಲೆಂಟ್ ಆಗಿರುತ್ತಾನೆ. ಆತನ ಲುಕ್ ಸಹ ‘ಟಾಕ್ಸಿಕ್’ ಟೀಸರ್​​ನ ಕೊನೆಯಲ್ಲಿ ಬರುವ ಯಶ್ ಅವರ ಲುಕ್ ಅನ್ನು ತುಸು ಹೋಲುತ್ತಿದೆ. ‘ಮಹಾನ್’ ಸಿನಿಮಾನಲ್ಲಿ ಅಪ್ಪ-ಮಗನ ನಡುವೆ ಕಿತ್ತಾಟ ಏರ್ಪಡುತ್ತದೆ. ಅಪ್ಪನ ಹತ್ತಿರದವರನ್ನು ಕೊಂದು ಹಾಕುತ್ತಾನೆ ಮಗ, ಅಪ್ಪನ ಲಿಕ್ಕರ್ ಸಾಮ್ರಾಜ್ಯವನ್ನು ದೂಳಿಪಟ ಮಾಡುತ್ತಾನೆ. ‘ಟಾಕ್ಸಿಕ್’ನಲ್ಲಿ ಸಹ ಯಶ್ ಅವರ ಸಾಮ್ರಾಜ್ಯವನ್ನು ಧ್ವಂಸ ಮಾಡಲೆಂದು ಮಗ ಪ್ರಯತ್ನಿಸುವಂತಿದೆ. ಏನೇ ಆಗಲಿ ಸಿನಿಮಾದ ಕತೆ ಸಿನಿಮಾ ಬಿಡುಗಡೆ ಆದ ಬಳಿಕವಷ್ಟೆ ತಿಳಿಯಲಿದೆ.

‘ಟಾಕ್ಸಿಕ್’ ಸಿನಿಮಾವನ್ನು ಗೀತು ಮೋಹನ್​​ದಾಸ್ ನಿರ್ದೇಶನ ಮಾಡಿದ್ದು, ಸಿನಿಮಾಕ್ಕೆ ಕೆವಿಎನ್ ಮತ್ತು ಯಶ್ ಅವರ ಮಾನ್​​ಸ್ಟರ್ ಮೈಂಡ್ಸ್ ಬಂಡವಾಳ ಹೂಡಿದೆ. ಸಿನಿಮಾನಲ್ಲಿ ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ನಯನತಾರ, ಹುಮಾ ಖುರೇಷಿ, ತಾರಾ ಸುತಾರಿಯಾ ಅವರುಗಳು ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ಮಾರ್ಚ್ 19ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ