ಸಮಂತಾ ಇಂದು (ಸೆಪ್ಟೆಂಬರ್ 18) ಮುಂಜಾನೆ ತಿರುಪತಿಗೆ ತೆರಳಿದ್ದಾರೆ. ಈ ವೇಳೆ ಅವರು ದೇವರ ದರ್ಶನ ಪಡೆದಿದ್ದಾರೆ. ಸಮಂತಾ ದೇವಸ್ಥಾನಕ್ಕೆ ಬರುತ್ತಾರೆ ಎನ್ನುವ ವಿಚಾರ ತಿಳಿದ ಅಭಿಮಾನಿಗಳು ಹಾಗೂ ಮಾಧ್ಯಮದವರು ಅಲ್ಲಿ ಅದಾಗಲೇ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಸಮಂತಾ ಜತೆ ಸೆಲ್ಫಿ ತೆಗೆದುಕೊಳ್ಳೋಕೆ ಅಭಿಮಾನಿಗಳು ಮುಗಿಬಿದ್ದರೆ, ಸಮಂತಾ ಅವರಿಂದ ಸಂಸಾರದ ವಿಚಾರ ಬಾಯಿಬಿಡಸೋಕೆ ಮಾಧ್ಯಮದವರು ಪ್ರಯತ್ನಿಸಿದರು. ಆದರೆ, ಇದೆರಡೂ ಸಾಧ್ಯವಾಗಿಲ್ಲ.
ದೇವಸ್ಥಾನದ ಆವರಣದಲ್ಲಿ ಸಮಂತಾ ನಡೆದು ಹೋಗುವಾಗ ಪತ್ರಕರ್ತನೋರ್ವ ಸಂಸಾರದ ಬಗ್ಗೆ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಸಮಂತಾ ಸಿಟ್ಟು ನೆತ್ತಿಗೇರಿದೆ. ‘ದೇವಸ್ಥಾನಕ್ಕೆ ಬಂದು..’ ಎಂದು ಮಾತು ಕತ್ತರಿಸಿದ ಸಮಂತಾ ‘ನಿಮಗೆ ಬುದ್ಧಿ ಇದೆಯಾ’ ಎಂದು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ದೇವಸ್ಥಾನಕ್ಕೆ ಬಂದರೂ ಈ ರೀತಿ ಪ್ರಶ್ನೆ ಮಾಡುತ್ತೀರಲ್ಲಾ ಎಂದು ಹೇಳಿದ್ದಾರೆ.
ಸದ್ಯ, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಮಂತಾ ಅವರ ರಿಯಾಕ್ಷನ್ ನೋಡಿ ಫ್ಯಾನ್ಸ್ ಸಾಕಷ್ಟು ಖುಷಿ ಆಗಿದ್ದಾರೆ. ವಿಡಿಯೋ ಹಂಚಿಕೊಂಡವರ ಕಮೆಂಟ್ ಬಾಕ್ಸ್ನಲ್ಲಿ ಚಪ್ಪಾಳೆ ಹೊಡೆಯುವ ಸಿಂಬಲ್ ಪೋಸ್ಟ್ ಮಾಡುತ್ತಿದ್ದಾರೆ. ಸಮಂತಾ ಹಾಗೂ ನಾಗ ಚೈತನ್ಯ ಬೇರೆ ಆಗುತ್ತಿದ್ದಾರೆ ಎನ್ನುವ ಮಾತನ್ನು ನಂಬೋಕೆ ಅವರ ಅಭಿಮಾನಿಗಳು ರೆಡಿ ಇಲ್ಲ. ಇದು ಕೇವಲ ವದಂತಿ ಆಗಿರಲಿ ಎಂದು ಸಾಕಷ್ಟು ಜನರು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಸಮಂತಾ ವಿಚ್ಛೇದನದ ನಂತರ ಪತಿಯಿಂದ 250 ಕೋಟಿ ರೂಪಾಯಿ ಜೀವನಾಂಶ ಕೇಳುತ್ತಿದ್ದಾರೆ ಎನ್ನುವ ಹೊಸ ವದಂತಿಯೂ ಈಗ ಹುಟ್ಟಿಕೊಂಡಿದೆ.
ಇದನ್ನೂ ಓದಿ: ಸಮಂತಾ-ನಾಗ ಚೈತನ್ಯ ನಡುವೆ ಎಷ್ಟೊಂದು ಅಗಾಧ ಪ್ರೀತಿ ಇದೆ ಗೊತ್ತಾ? ಇಲ್ಲಿದೆ ಸಾಕ್ಷ್ಯ
ಸಮಂತಾ-ನಾಗ ಚೈತನ್ಯ ಫ್ಯಾಮಿಲಿಯ ಇನ್ನೊಂದು ಗುಟ್ಟು ಬಯಲು; ಮಗನ ಸಿನಿಮಾಗೆ ನಾಗಾರ್ಜುನ ತಲೆ ಹಾಕುತ್ತಿಲ್ಲ