AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮಂತಾ-ನಾಗ ಚೈತನ್ಯ ಫ್ಯಾಮಿಲಿಯ ಇನ್ನೊಂದು ಗುಟ್ಟು ಬಯಲು; ಮಗನ ಸಿನಿಮಾಗೆ ನಾಗಾರ್ಜುನ ತಲೆ ಹಾಕುತ್ತಿಲ್ಲ

ತಮ್ಮದೇ ರೀತಿಯ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನದಲ್ಲಿ ನಾಗ ಚೈತನ್ಯ ಜಾಗ ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಾಗಾರ್ಜುನ ಅವರು ಮಗನ ಸಿನಿಮಾಗಳ ವಿಚಾರದಲ್ಲಿ ತಲೆ ಹಾಕುವುದನ್ನೇ ಬಿಟ್ಟಿದ್ದಾರೆ.

ಸಮಂತಾ-ನಾಗ ಚೈತನ್ಯ ಫ್ಯಾಮಿಲಿಯ ಇನ್ನೊಂದು ಗುಟ್ಟು ಬಯಲು; ಮಗನ ಸಿನಿಮಾಗೆ ನಾಗಾರ್ಜುನ ತಲೆ ಹಾಕುತ್ತಿಲ್ಲ
ಸಮಂತಾ, ನಾಗಾರ್ಜುನ, ನಾಗ ಚೈತನ್ಯ
TV9 Web
| Edited By: |

Updated on: Sep 17, 2021 | 9:39 AM

Share

ತೆಲುಗು ಚಿತ್ರರಂಗದ ಸ್ಟಾರ್​ ದಂಪತಿಗಳಾದ ಅಕ್ಕಿನೇನಿ ನಾಗ ಚೈತನ್ಯ ಮತ್ತು ಸಮಂತಾ ಅಕ್ಕಿನೇನಿ ಬಗ್ಗೆ ಹತ್ತು ಹಲವು ಸುದ್ದಿಗಳು ಹರಿದಾಡುತ್ತಿವೆ. ಅವರ ಸಂಸಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಅನೇಕ ಸಾಕ್ಷಿಗಳು ಸಿಗುತ್ತಿವೆ. ಅದನ್ನು ಮುಚ್ಚಿಡಲು ಸಮಂತಾ ಮತ್ತು ನಾಗ ಚೈತನ್ಯ ಪ್ರಯತ್ನ ಮಾಡುತ್ತಿದ್ದಾರಾದರೂ ಗಾಸಿಪ್​ ಪ್ರಿಯರ ಬಾಯಿ ಮುಚ್ಚಿಸಲು ಸಾಧ್ಯವಾಗುತ್ತಿಲ್ಲ. ಈ ನಡುವೆ ಅಕ್ಕಿನೇನಿ ಕುಟುಂಬದ ಮತ್ತೊಂದು ಸೀಕ್ರೆಟ್​ ಬಯಲಾಗಿದೆ. ಆದರೆ ಇದು ಗಾಸಿಪ್ ಅಲ್ಲ. ಸ್ವತಃ ನಾಗ ಚೈತನ್ಯ ಅವರೇ ಈ ಬಗ್ಗೆ ಮಾತನಾಡಿದ್ದಾರೆ. ತಮ್ಮ ಸಿನಿಮಾಗಳ ವಿಚಾರದಲ್ಲಿ ತಂದೆ ನಾಗಾರ್ಜುನ ತಲೆ ಹಾಕುತ್ತಿಲ್ಲ ಎಂಬುದನ್ನು ಅವರು ಬಾಯಿ ಬಿಟ್ಟಿದ್ದಾರೆ.

ಅಂದಹಾಗೆ ಈ ವಿಚಾರ ಚರ್ಚೆಗೆ ಬಂದಿರುವುದು ನೆಪೋಟಿಸಂ ಹಿನ್ನೆಲೆಯಲ್ಲಿ. ಸ್ಟಾರ್​ ಕುಟುಂಬದಿಂದ ಬಂದಿರುವ ನಾಗ ಚೈತನ್ಯ ಈಗಲೂ ತಂದೆಯ ಹೆಸರು ಹೇಳಿಕೊಂಡೇ ಬದುಕುತ್ತಿದ್ದಾರಾ? ಖಂಡಿತಾ ಇಲ್ಲ. ಆರಂಭದಲ್ಲಿ ಅವರಿಗೆ ನೇರ ಎಂಟ್ರಿ ಸಿಕ್ಕಿದ್ದು ನಿಜ. ಆದರೆ ಅವರು ಈಗ ತಮ್ಮ ಪರಿಶ್ರಮದಿಂದ ಬೆಳೆದಿದ್ದಾರೆ. ತಮ್ಮದೇ ರೀತಿಯ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನದಲ್ಲಿ ಜಾಗ ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಾಗಾರ್ಜುನ ಅವರು ಮಗನ ಸಿನಿಮಾಗಳ ವಿಚಾರದಲ್ಲಿ ತಲೆ ಹಾಕುವುದನ್ನೇ ಬಿಟ್ಟಿದ್ದಾರೆ.

‘ನನ್ನ ವೃತ್ತಿಜೀವನದ ಆರಂಭದ ದಿನಗಳಲ್ಲಿ ಅಪ್ಪನೇ ನನ್ನ ಸಿನಿಮಾಗಳ ವಿಚಾರವನ್ನು ನೋಡಿಕೊಳ್ಳುತ್ತಿದ್ದರು. ದಿನಗಳು ಕಳೆದಂತೆ ಅವರು ನಮಗೆ ಸ್ವತಂತ್ರ ನೀಡಿದರು. ನಾನು ಮತ್ತು ನನ್ನ ತಮ್ಮ ಅಖಿಲ್​ ದೊಡ್ಡವರಾದ ಬಳಿಕ ನಮ್ಮ ನಿರ್ಧಾರವನ್ನು ನಾವೇ ತೆಗೆದುಕೊಳ್ಳಲು ಅಪ್ಪ ಅವಕಾಶ ನೀಡಿದರು. ನಮ್ಮ ತಪ್ಪುಗಳಿಂದಲೇ ನಾವು ಕಲಿಯಬೇಕು ಅಂತ ಅವರು ತಿಳಿಸಿಹೇಳಿದರು’ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಾಗ ಚೈತನ್ಯ ಹೇಳಿದ್ದಾರೆ.

ಸದ್ಯ ನಾಗಚೈತನ್ಯ ನಟನೆಯ ‘ಲವ್​ ಸ್ಟೋರಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ಅವರಿಗೆ ಜೋಡಿಯಾಗಿ ಸಾಯಿ ಪಲ್ಲವಿ ಅಭಿನಯಿಸಿದ್ದಾರೆ. ಇತ್ತೀಚೆಗೆ ‘ಲವ್​ ಸ್ಟೋರಿ’ ಟ್ರೇಲರ್​ ಬಿಡುಗಡೆ ಆಯಿತು. ಆ ಬಗ್ಗೆ ನಾಗ ಚೈತನ್ಯ ಮಾಡಿದ್ದ ಟ್ವೀಟ್​ ಅನ್ನು ರೀಟ್ವೀಟ್​ ಮಾಡಿಕೊಳ್ಳುವ ಮೂಲಕ ಸಮಂತಾ ಅವರು ತಮ್ಮ ಪತಿಯ ಸಿನಿಮಾಗೆ ಬೆನ್ನು ತಟ್ಟಿದ್ದಾರೆ. ಸೆ.24ರಂದು ಆ ಸಿನಿಮಾ ಬಿಡುಗಡೆ ಆಗಲಿದೆ. ಶೇಖರ್​ ಕಮ್ಮುಲ ನಿರ್ದೇಶನ ಮಾಡಿದ್ದು, ಮಧ್ಯಮವರ್ಗದ ಫ್ಯಾಮಿಲಿಯ ಹುಡುಗನ ಪಾತ್ರದಲ್ಲಿ ನಾಗ ಚೈತನ್ಯ ನಟಿಸಿದ್ದಾರೆ.​ ಸಾಯಿ ಪಲ್ಲವಿಗೆ ಡ್ಯಾನ್ಸರ್ ಪಾತ್ರ ನೀಡಲಾಗಿದೆ.

ಇದನ್ನೂ ಓದಿ:

ಸಾಯಿ ಪಲ್ಲವಿ-ನಾಗ ಚೈತನ್ಯ ಲವ್​ ಸ್ಟೋರಿ ಬಗ್ಗೆ ಮೌನ ಮುರಿದ ಸಮಂತಾ; ಡಿವೋರ್ಸ್​ ವದಂತಿಗೆ ಬ್ರೇಕ್​

ಸಮಂತಾ-ನಾಗ ಚೈತನ್ಯ ನಡುವೆ ಎಷ್ಟೊಂದು ಅಗಾಧ ಪ್ರೀತಿ ಇದೆ ಗೊತ್ತಾ? ಇಲ್ಲಿದೆ ಸಾಕ್ಷ್ಯ