ಪ್ರಭಾಸ್​ಗೆ ವಿದೇಶದಲ್ಲಿ ಚಿಕಿತ್ಸೆ ಕೊಡಿಸಲಿರುವ ನಿರ್ದೇಶಕ; ‘ಬಾಹುಬಲಿ’ ನಟನಿಗೆ ಅಂಥದ್ದೇನಾಗಿದೆ?

ಇತ್ತೀಚಿನ ದಿನಗಳಲ್ಲಿ ಪ್ರಭಾಸ್​ ಅವರ ದೇಹದ ತೂಕ ಏಕಾಏಕಿ ಹೆಚ್ಚಾಗಿದೆ. ‘ಆದಿಪುರುಷ್​’ ಚಿತ್ರದಲ್ಲಿ ರಾಮನ ಪಾತ್ರ ಮಾಡುತ್ತಿರುವ ಅವರು ತೂಕ ಕಡಿಮೆ ಮಾಡಿಕೊಳ್ಳಬೇಕಿರುವುದು ತುಂಬ ಅನಿವಾರ್ಯ ಆಗಿದೆ.

ಪ್ರಭಾಸ್​ಗೆ ವಿದೇಶದಲ್ಲಿ ಚಿಕಿತ್ಸೆ ಕೊಡಿಸಲಿರುವ ನಿರ್ದೇಶಕ; ‘ಬಾಹುಬಲಿ’ ನಟನಿಗೆ ಅಂಥದ್ದೇನಾಗಿದೆ?
ಪ್ರಭಾಸ್​

ನಟ ಪ್ರಭಾಸ್​ ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಅವರು ಏನೇ ಮಾಡಿದರೂ ಅದು ಈಗ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಆಗುತ್ತದೆ. ಅಷ್ಟರಮಟ್ಟಿಗೆ ಅವರ ಜನಪ್ರಿಯತೆ ಹೆಚ್ಚಿದೆ. ಅಷ್ಟೇ ಅಲ್ಲ, ಅವರನ್ನು ಟ್ರೋಲ್​ ಮಾಡುವವರ ಸಂಖ್ಯೆ ಕೂಡ ದೊಡ್ಡದಿದೆ. ಇತ್ತೀಚೆಗೆ ಅವರ ಒಂದು ಫೋಟೋ ವೈರಲ್​ ಆಗಿತ್ತು. ಅದನ್ನು ಕಂಡ ಬಳಿಕ ಅವರನ್ನು ಅಂಕಲ್​ ಎಂದು ಅನೇಕರು ಹೀಯಾಳಿಸಿದ್ದರು. ಇದರಿಂದ ಹೆಚ್ಚು ಚಿಂತೆಗೆ ಒಳಗಾಗಿರುವುದು ‘ಆದಿಪುರುಷ್​’ ಸಿನಿಮಾ ನಿರ್ದೇಶಕ ಓಂ ರಾವುತ್​! ಪ್ರಭಾಸ್​ ಟ್ರೋಲ್​ ಆಗುವುದಕ್ಕೂ, ಓಂ ರಾವುತ್​ ಟೆನ್ಷನ್​ ಮಾಡಿಕೊಳ್ಳುವುದಕ್ಕೂ ಏನು ಸಂಬಂಧ? ಅದಕ್ಕಿದೆ ಒಂದು ಲಿಂಕ್.

ರಾಮಾಯಣದ ಕಥೆಯನ್ನು ಆಧರಿಸಿ ‘ಆದಿಪುರುಷ್​’ ಸಿನಿಮಾ ತಯಾರಾಗುತ್ತಿದೆ. ಅದರಲ್ಲಿ ಪ್ರಭಾಸ್​ಗೆ ರಾಮನ ಪಾತ್ರ ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರಭಾಸ್​ ಅವರ ದೇಹದ ತೂಕ ಏಕಾಏಕಿ ಹೆಚ್ಚಾಗಿದೆ. ಇಂಥ ಫ್ಯಾಟ್​ ಅವತಾರದಲ್ಲಿ ರಾಮನನ್ನು ನೋಡಲು ಜನರು ಇಷ್ಟಪಡುವುದಿಲ್ಲ ಎಂಬುದು ಖಚಿತ. ಹಾಗಾಗಿ ಪ್ರಭಾಸ್​ ತೂಕ ಕಡಿಮೆ ಮಾಡಿಕೊಳ್ಳಬೇಕಿರುವುದು ತುಂಬ ಅನಿವಾರ್ಯ ಆಗಿದೆ. ಅದಕ್ಕಾಗಿ ಈ ಚಿತ್ರದ ನಿರ್ದೇಶಕ ಓಂ ರಾವುತ್​ ಒಂದು ಪ್ಲ್ಯಾನ್​ ಮಾಡಿದ್ದಾರೆ.

ಪ್ರಭಾಸ್​ಗೆ ವಿದೇಶದಲ್ಲಿ ಚಿಕಿತ್ಸೆ ಕೊಡಿಸಲು ನಿರ್ಧರಿಸಲಾಗಿದೆ ಎಂಬ ಸುದ್ದಿ ಈಗ ಕೇಳಿಬರುತ್ತಿದೆ. ಹೀಗೆ ಏಕಾಏಕಿ ದೇಹದ ತೂಕ ಹೆಚ್ಚಲು ಕಾರಣ ಏನು ಎಂಬುದನ್ನು ತಿಳಿದುಕೊಳ್ಳಲು ಅವರಿಗೆ ಇಂಗ್ಲೆಂಡ್​ನಲ್ಲಿ ಆರೋಗ್ಯ ತಪಾಸಣೆ ಮಾಡಿಸಲಾಗುವುದು. ಅಲ್ಲಿಯೇ ಚಿಕಿತ್ಸೆ ಕೊಡಿಸಿ, ಆದಷ್ಟು ಬೇಗ ಅವರನ್ನು ಮೊದಲಿನ ಗೆಟಪ್​ಗೆ ಮರಳಿಸಲು ನಿರ್ದೇಶಕರು ತೀರ್ಮಾನ ತೆಗೆದುಕೊಂಡಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಆದರೆ ಈ ಸುದ್ದಿ ಕುರಿತಂತೆ ಚಿತ್ರತಂಡದ ಯಾರೊಬ್ಬರೂ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ.

‘ಬಾಹುಬಲಿ’ ಸರಣಿ ಸಿನಿಮಾಗಳ ಬಳಿಕ ಪ್ರಭಾಸ್​ ‘ಸಾಹೋ’ ಸಿನಿಮಾ ಒಪ್ಪಿಕೊಂಡಿದ್ದರು. ಹಿಂದಿಯಲ್ಲೂ ಆ ಚಿತ್ರ ತೆರೆಕಂಡಿತ್ತು. ಆದರೆ ಹೇಳಿಕೊಳ್ಳುವ ಮಟ್ಟಕ್ಕೆ ಬಾಕ್ಸ್​ ಆಫೀಸ್​ನಲ್ಲಿ ಹಣ ಗಳಿಸಲಿಲ್ಲ. ಆಗಲೇ ಉತ್ತರ ಭಾರತದ ಹಲವು ಮಂದಿಗೆ ಪ್ರಭಾಸ್​ ಮೇಲಿದ್ದ ಕ್ರೇಜ್​ ಕಮ್ಮಿ ಆಗಿತ್ತು. ಈ ನಡುವೆ ಪ್ರಭಾಸ್​ ಫಿಟ್ನೆಸ್​ ಕೂಡ ಕಳೆದುಕೊಂಡರೆ ಅದು ‘ಆದಿಪುರುಷ್​’ ಚಿತ್ರದ ಮೇಲೆ ಖಂಡಿತ ಕೆಟ್ಟ ಪರಿಣಾಮ ಬೀರಲಿದೆ ಎಂಬುದು ನಿರ್ದೇಶಕ ಓಂ ರಾವುತ್​ ಅವರಿಗೆ ಖಚಿತ ಆದಂತಾಗಿದೆ. ಹಾಗಾಗಿ ಪ್ರಭಾಸ್​ ಆದಷ್ಟು ಬೇಗ ಮೊದಲಿನ ಲುಕ್​ಗೆ ಮರಳಬೇಕು ಎಂದು ಓಂ ರಾವುತ್​ ಒತ್ತಾಯ ಹೇರುತ್ತಿದ್ದಾರೆ.

ಇದನ್ನೂ ಓದಿ:

Prabhas: ಡೇಟಿಂಗ್​ ವಿಚಾರಕ್ಕೆ ಜಾಗತಿಕ ಮಟ್ಟದಲ್ಲಿ ಪ್ರಭಾಸ್​ ಸುದ್ದಿ; ಇದೆಲ್ಲ ಯಾರ ಜೊತೆ, ಏನು ಕಥೆ?

ಪ್ರಶಾಂತ್​ ನೀಲ್​ ಕಣ್ಣು ತಪ್ಪಿಸಿ ಪ್ರಭಾಸ್​ ವಿಡಿಯೋ ಲೀಕ್​? ಸಲಾರ್​ ಸೆಟ್​​ನಲ್ಲಿ ಕಿತಾಪತಿ

Read Full Article

Click on your DTH Provider to Add TV9 Kannada