AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Prabhas: ಡೇಟಿಂಗ್​ ವಿಚಾರಕ್ಕೆ ಜಾಗತಿಕ ಮಟ್ಟದಲ್ಲಿ ಪ್ರಭಾಸ್​ ಸುದ್ದಿ; ಇದೆಲ್ಲ ಯಾರ ಜೊತೆ, ಏನು ಕಥೆ?

ಡೇಟಿಂಗ್​ ಆ್ಯಪ್​ ಎಂದರೆ ಕೊಂಚ ಹುಷಾರಾಗಿ ಇರಲೇಬೇಕು. ಅದರಿಂದ ಅನುಕೂಲ ಮತ್ತು ಅಪಾಯ ಎರಡೂ ಇದೆ. ಆ್ಯಪ್​ ಬಳಸುತ್ತಿರುವವರ ಮೇಲೆ ಅದೆಲ್ಲವೂ ಅವಲಂಬಿಸಿದೆ. ಹಾಗಾಗಿ ಅಂತಿಮವಾಗಿ ಪ್ರಭಾಸ್​ ನಿರ್ಧಾರ ಏನು ಎಂಬ ಬಗ್ಗೆ ಕೌತುಕ ಮೂಡಿದೆ.

Prabhas: ಡೇಟಿಂಗ್​ ವಿಚಾರಕ್ಕೆ ಜಾಗತಿಕ ಮಟ್ಟದಲ್ಲಿ ಪ್ರಭಾಸ್​ ಸುದ್ದಿ; ಇದೆಲ್ಲ ಯಾರ ಜೊತೆ, ಏನು ಕಥೆ?
ಪ್ರಭಾಸ್​
TV9 Web
| Edited By: |

Updated on: Aug 14, 2021 | 9:03 AM

Share

ನಟ ಪ್ರಭಾಸ್ (Prabhas)​ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಡಾರ್ಲಿಂಗ್​ ಎನ್ನುತ್ತಾರೆ. ಅವರಿಗೆ ಮಹಿಳಾ ಅಭಿಮಾನಿಗಳ ಬಳಗ ದೊಡ್ಡದಿದೆ. ‘ಬಾಹುಬಲಿ’, ‘ಸಾಹೋ’ ಸಿನಿಮಾಗಳಲ್ಲಿ ಆ್ಯಕ್ಷನ್​ ಅವತಾರವೆತ್ತಿದ್ದ ಅವರು ಈಗ ‘ರಾಧೆ ಶ್ಯಾಮ್​’ ಚಿತ್ರದಲ್ಲಿ ಪಕ್ಕಾ ಲವರ್​ ಬಾಯ್​ ಆಗಿ ಕಾಣಿಸಿಕೊಳ್ಳಲಿದೆ. ಈ ಸಿನಿಮಾ 2022ರ ಸಂಕ್ರಾಂತಿ ವೇಳೆಗೆ ಬಿಡುಗಡೆ ಆಗಲಿದೆ. ಪ್ರಭಾಸ್​ಗೆ ಇರುವ ಲವರ್​ ಬಾಯ್​ ಇಮೇಜ್​ ಅನ್ನು ಎನ್​ಕ್ಯಾಶ್​ ಮಾಡಿಕೊಳ್ಳಲು ಒಂದು ಡೇಟಿಂಗ್​ (Dating App) ಕಂಪನಿ ಉಪಾಯ ಮಾಡಿದೆ. ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಆ ಕಂಪನಿಯ ಆ್ಯಪ್​ಗೆ ಪ್ರಭಾಸ್​ ಅವರನ್ನು ರಾಯಭಾರಿಯಾಗಿ ನೇಮಿಸಿಕೊಳ್ಳಲು ಆಲೋಚಿಸಲಾಗಿದೆ ಎಂಬ ಸುದ್ದಿ ಕೇಳಿಬರುತ್ತಿದೆ.

ನಟನೆ ಜೊತೆಗೆ ಹಲವು ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ​ ರಾಯಭಾರಿ ಆಗಿಯೂ ಪ್ರಭಾಸ್ ಫೇಮಸ್​ ಆಗಿದ್ದಾರೆ. ಅನೇಕ ಜಾಹೀರಾತುಗಳಲ್ಲಿ ಅವರು ನಟಿಸಿದ್ದಾರೆ. ಬಾಹುಬಲಿ ಸಿನಿಮಾ ಬಳಿಕ ಅವರಿಗೆ ಪ್ಯಾನ್​ ಇಂಡಿಯಾ ಸ್ಟಾರ್​ ಎಂಬ ಪಟ್ಟ ಕೂಡ ಸಿಕ್ಕಿದೆ. ಅವರನ್ನು ರಾಯಭಾರಿಯಾಗಿ ಮಾಡಿಕೊಂಡರೆ ಇಡೀ ದೇಶದಲ್ಲಿ ಇರುವ ಯುವಜನತೆಯನ್ನು ಸೆಳೆಯಬಹುದು ಎಂಬುದು ಆ ಡೇಟಿಂಗ್​ ಕಂಪನಿಯ ಪ್ಲ್ಯಾನ್​. ಹಾಗಾಗಿ ಪ್ರಭಾಸ್​ಗೆ ಹೀಗೊಂದು ಆಫರ್​ ನೀಡಲಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ.

ಡೇಟಿಂಗ್​ ಆ್ಯಪ್​ ಎಂದರೆ ಕೊಂಚ ಹುಷಾರಾಗಿ ಇರಲೇಬೇಕು. ಅದರಿಂದ ಅನುಕೂಲ ಮತ್ತು ಅಪಾಯ ಎರಡೂ ಇದೆ. ಆ್ಯಪ್​ ಬಳಸುತ್ತಿರುವವರ ಮೇಲೆ ಅದೆಲ್ಲವೂ ಅವಲಂಬಿಸಿದೆ. ಹಾಗಾಗಿ ಇಂಥ ಆ್ಯಪ್​ಗೆ ರಾಯಭಾರಿ ಆಗಲು ಪ್ರಭಾಸ್​ ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬ ಕುತೂಹಲ ನಿರ್ಮಾಣ ಆಗಿದೆ. ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರಿದರೂ ಪ್ರಭಾಸ್​ ಮದುವೆ ಬಗ್ಗೆ ಆಲೋಚನೆ ಮಾಡಿಲ್ಲ. ಮೋಸ್ಟ್​ ಎಲಿಜೆಬಲ್​ ಬ್ಯಾಚುಲರ್​ ಎಂಬ ಪಟ್ಟವನ್ನು ಜೊತೆಗಿಟ್ಟುಕೊಂಡು ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

ಪ್ರಭಾಸ್​ ಕೈಯಲ್ಲಿ ಹಲವು ಸಿನಿಮಾಗಳಿವೆ. ‘ಕೆಜಿಎಫ್​’ ನಿರ್ದೇಶಕ ಪ್ರಶಾಂತ್​ ನೀಲ್ ಆ್ಯಕ್ಷನ್​-ಕಟ್​ ಹೇಳುತ್ತಿರುವ ‘ಸಲಾರ್​’ ಸಿನಿಮಾದಲ್ಲಿ ಪ್ರಭಾಸ್​ ನಟಿಸುತ್ತಿದ್ದು, ಅದರ ಕೆಲಸಗಳು ಭರದಿಂದ ಸಾಗಿವೆ. ಇತ್ತೀಚೆಗೆ ಈ ಸಿನಿಮಾ ಸೆಟ್​ನಿಂದ ಚಿಕ್ಕದೊಂದು ವಿಡಿಯೋ ತುಣುಕು ಲೀಕ್​ ಆಗಿ ದೊಡ್ಡ ಸುದ್ದಿ ಆಗಿತ್ತು. ಬಾಲಿವುಡ್​ನಲ್ಲಿ ಓಂ ರಾವುತ್​ ನಿರ್ದೇಶನ ಮಾಡುತ್ತಿರುವ ‘ಆದಿಪುರುಷ್​’ ಚಿತ್ರದಲ್ಲಿ ರಾಮನ ಪಾತ್ರಕ್ಕೆ ಪ್ರಭಾಸ್​ ಬಣ್ಣ ಹಚ್ಚುತ್ತಿದ್ದಾರೆ. ರಾವಣನಾಗಿ ಸೈಫ್​ ಅಲಿ ಖಾನ್​ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಹಲವು ಪ್ರಾಜೆಕ್ಟ್​ಗಳಿಗೆ ಪ್ರಭಾಸ್​ ಸಹಿ ಹಾಕುತ್ತಿದ್ದಾರೆ.

ಇದನ್ನೂ ಓದಿ:

ಪ್ರಶಾಂತ್​ ನೀಲ್​ ಕಣ್ಣು ತಪ್ಪಿಸಿ ಪ್ರಭಾಸ್​ ವಿಡಿಯೋ ಲೀಕ್​? ಸಲಾರ್​ ಸೆಟ್​​ನಲ್ಲಿ ಕಿತಾಪತಿ

Prabhas: ಫೇಸ್​​ಬುಕ್​ನಲ್ಲಿ ಪ್ರಭಾಸ್​ಗೆ ಎಷ್ಟನೇ ಸ್ಥಾನ? ಬಾಲಿವುಡ್​ ಮಂದಿ ಜೊತೆ ಪೈಪೋಟಿಗೆ ಇಳಿದ ಸೌತ್​ ಸ್ಟಾರ್​

Follow Us
TV9 Web
TV9 Web

TV9 Kannada

Read More
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ