ಡಿವೋರ್ಸ್ ವದಂತಿ ಸುಳ್ಳು ಮಾಡಲು ಮುಂದಾದ ಸಮಂತಾ; ಅಭಿಮಾನಿಗಳಿಗೆ ಬೇಸರ ತರಿಸಲಿದ ಈ ನಿರ್ಧಾರ
ಮದುವೆ ಆದ ನಂತರದಲ್ಲಿ ಆಫರ್ಗಳ ಸಂಖ್ಯೆ ಕಡಿಮೆ ಆಗುತ್ತದೆ. ಆದರೆ, ಸಮಂತಾಗೆ ಮದುವೆ ನಂತರವೂ ಆಫರ್ ಕಡಿಮೆ ಆಗಿಲ್ಲ. ಅವರು ಪಾತ್ರಗಳ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ.
ನಟಿ ಸಮಂತಾ ಅಕ್ಕಿನೇನಿ ವಿಚ್ಛೇದನ ವದಂತಿ ಇತ್ತೀಚಿಗೆ ಹಾಟ್ ಟಾಪಿಕ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಲೇ ಇದೆ. ಸಮಂತಾ ಕಡೆಯಿಂದ ಈ ಬಗ್ಗೆ ನೇರವಾಗಿ ಸ್ಪಷ್ಟನೆ ಸಿಗದೆ ಇದ್ದರೂ ಅಭಿಮಾನಿಗಳು ಪಾಸಿಟಿವ್ ವಿಚಾರಗಳನ್ನು ಹಬ್ಬಿಸಲು ಪ್ರಯತ್ನಿಸುತ್ತಿದ್ದಾರೆ. ಈ ಮಧ್ಯೆ ಸಮಂತಾ ವಿಚ್ಛೇದನ ವದಂತಿಗೆ ಸಂಪೂರ್ಣವಾಗಿ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಆದರೆ, ಈ ವಿಚಾರದಿಂದ ಅಭಿಮಾನಿಗಳಿಗೆ ಕೊಂಚ ಬೇಸರ ಉಂಟಾದರೂ ಅಚ್ಚರಿ ಇಲ್ಲ.
ಮದುವೆ ಆದ ನಂತರದಲ್ಲಿ ಆಫರ್ಗಳ ಸಂಖ್ಯೆ ಕಡಿಮೆ ಆಗುತ್ತದೆ. ಆದರೆ, ಸಮಂತಾಗೆ ವಿವಾಹದ ನಂತರವೂ ಆಫರ್ ಕಡಿಮೆ ಆಗಿಲ್ಲ. ಅವರು ಪಾತ್ರಗಳ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಆಯ್ದ ಸಿನಿಮಾಗಳಿಗೆ ಮಾತ್ರ ಅವರು ಹಸಿರು ನಿಶಾನೆ ತೋರುತ್ತಿದ್ದಾರೆ. ಆದರೆ, ಈಗ ಅವರು ನಟನೆಯಿಂದ ಕೊಂಚ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಸಮಂತಾ ಕೈಯಲ್ಲಿ ಇರುವ ಚಿತ್ರಗಳ ಶೂಟಿಂಗ್ ಬಹುತೇಕ ಪೂರ್ಣಗೊಂಡಿದೆ. ಸದ್ಯ, ಅವರು ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಕುಟುಂಬದ ಜತೆ ಹೆಚ್ಚು ಸಮಯ ಕಳೆಯಬೇಕು ಎನ್ನುವ ನಿರ್ಧಾರಕ್ಕೆ ಬಂದಿರುವ ಅವರು ನಟನೆಯಿಂದ ಒಂದು ಬ್ರೇಕ್ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ಇನ್ನು, ಸಮಂತಾ ಮಗು ಪಡೆಯೋಕೂ ಯೋಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಸಮಂತಾ ಮದುವೆ ಆಗಿ ನಾಲ್ಕು ವರ್ಷ ಕಳೆದಿದೆ. ತಾಯಿ ಆಗೋದು ಯಾವಾಗ ಎಂದು ಅವರಿಗೆ ಸಾಕಷ್ಟು ಬಾರಿ ಪ್ರಶ್ನೆಗಳು ಎದುರಾಗಿದ್ದವು. ಈಗ ಸಮಂತಾ ಮಗು ಹೊಂದೋಕೆ ನಿರ್ಧರಿಸಿದ್ದಾರೆ ಎಂದು ಕೆಲ ಮೂಲಗಳು ಹೇಳುತ್ತಿವೆ. ಇದು ನಿಜವಾದಲ್ಲಿ ಅವರ ಅಭಿಮಾನಿಗಳು ಖುಷಿಪಡಬಹುದು.
ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಕ್ಕಿನೇನಿ ಸರ್ನೇಮ್ಅನ್ನು ಸಮಂತಾ ತೆಗೆದು ಹಾಕಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ಅವರ ಸಂಸಾರದಲ್ಲಿ ಯಾವುದೂ ಸರಿ ಇಲ್ಲ ಎನ್ನುವ ವದಂತಿ ಜೋರಾಗಿತ್ತು. ಇದಾದ ನಂತರದಲ್ಲಿ ಸಾಕಷ್ಟು ಸುದ್ದಿಗಳು ಹುಟ್ಟಿಕೊಂಡಿವೆ. ಆ ಬಗ್ಗೆ ಯಾವುದನ್ನು ನಂಬಬೇಕು, ಯಾವುದನ್ನು ಬಿಡಬೇಕು ಎನ್ನುವ ಬಗ್ಗೆ ಅಭಿಮಾನಿಗಳು ಇನ್ನೂ ಗೊಂದಲದಲ್ಲಿದ್ದಾರೆ.
ಇದನ್ನೂ ಓದಿ:
ಸಮಂತಾ ಬಗ್ಗೆ ಏನೂ ಪ್ರಶ್ನಿಸಬೇಡಿ; ಮಾಧ್ಯಮಗಳಿಗೆ ನಾಗ ಚೈತನ್ಯ ಖಡಕ್ ಎಚ್ಚರಿಕೆ?
ಸಮಂತಾ-ನಾಗ ಚೈತನ್ಯ ನಡುವೆ ಎಷ್ಟೊಂದು ಅಗಾಧ ಪ್ರೀತಿ ಇದೆ ಗೊತ್ತಾ? ಇಲ್ಲಿದೆ ಸಾಕ್ಷ್ಯ