ಬಿಳಿ ಕಟೌಟ್ ಡ್ರೆಸ್​​​​ನಲ್ಲಿ ನೋರಾ ಫತೇಹಿ ಮುಂಬೈ ಮಹಾನಗರದ ತಾಪಮಾನವನ್ನು ಗುರುವಾರ ಹೆಚ್ಚಿಸಿದಳು!

ಡಿಸೈನರ್​ಗಳು ಸೃಷ್ಟಿಸುವ ಫ್ಯಾಶನ್ ಗಳಿಗೆ ಈ ಮೋಹಕ ನಟಿಯರು ತಮ್ಮ ಮಾದಕ ಸೌಂದರ್ಯ ಹಾಗೂ ಸೊಗಸಾದ ಮೈಮಾಟದಿಂದ ಜೀವ ತುಂಬಿ ಪಡ್ಡೆಗಳ ಜೀವ ತೆಗೆಯುತ್ತಾರೆ!

ಬಿಳಿ ಕಟೌಟ್ ಡ್ರೆಸ್​​​​ನಲ್ಲಿ ನೋರಾ ಫತೇಹಿ ಮುಂಬೈ ಮಹಾನಗರದ ತಾಪಮಾನವನ್ನು ಗುರುವಾರ ಹೆಚ್ಚಿಸಿದಳು!
ನೊರಾ ಫತೇಹಿ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 16, 2021 | 9:17 PM

ಬಾಲಿವುಡ್​ನಲ್ಲಿ ಅತ್ಯಂತ ಫ್ಯಾಶನೇಬಲ್ ನಟಿ ಇವಳೇ ಅಂತ ಯಾರನ್ನೂ ಬೊಟ್ಟು ಮಾಡಿ ತೋರಿಸಲಾಗದು ಮಾರಾಯ್ರೇ. ಯಾಕೆ ಅಂತೀರಾ? ಅಲ್ಲಿರುವ ಸುಂದರಿಯರೆಲ್ಲ ಫ್ಯಾಶನೇಬಲ್ ಮಹಿಳೆಯರೇ ಅನ್ನೋದು ಸುಳ್ಳಲ್ಲ. ಪ್ರತಿಯೊಬ್ಬರದೂ ಅವರದ್ದೇ ಆದ ವಿಶಿಷ್ಟ ಸ್ಟೈಲ್ ಸ್ಟೇಟ್​ಮೆಂಟ್​ ಮತ್ತು ಫ್ಯಾಶನ್ ಸ್ಟೇಟ್​ಮೆಂಟ್​. ಡಿಸೈನರ್​ಗಳು ಸೃಷ್ಟಿಸುವ ಫ್ಯಾಶನ್ ಗಳಿಗೆ ಈ ಮೋಹಕ ನಟಿಯರು ತಮ್ಮ ಮಾದಕ ಸೌಂದರ್ಯ ಹಾಗೂ ಸೊಗಸಾದ ಮೈಮಾಟದಿಂದ ಜೀವ ತುಂಬಿ ಪಡ್ಡೆಗಳ ಜೀವ ತೆಗೆಯುತ್ತಾರೆ!

ಬಾಲಿವುಡ್ ನಟಿ ಮತ್ತು ನೃತ್ಯಗಾತಿ ನೋರಾ ಫತೇಹಿ (ಅಸಲಿಗೆ ಈಕೆ ಕೆನಡಾದವರು) ಗುರುವಾರದಂದು ತನ್ನ ಬಿಳಿಯುಡುಗೆಯಲ್ಲಿ ಮುಂಬೈ ನಗರದ ತಾಪಮಾನವನ್ನು ಹೆಚ್ಚಿಸಿದರೆಂದರೆ ನೀವು ನಂಬಲೇ ಬೇಕು. ಇಲ್ಲಿರುವ ಆಕೆಯ ಚಿತ್ರಗಳನ್ನು ನೋಡಿ. ನಾವು ಹೇಳದೇ ಹೋದರೂ ನೀವು ಅದನ್ನು ಒಪ್ಪಿಕೊಳ್ಳುತ್ತೀರಿ. ಅಂದಹಾಗೆ, ಆಕೆ ಉಟ್ಟಿರುವ ಈ ಡ್ರೆಸ್​ಗೆ ಕಟೌಟ್ ಡ್ರೆಸ್ ಅಂತಾರಂತೆ. ಸಿನಿಮಾ ಥೇಟರ್ ಗಳ ಮುಂದೆ ನಮ್ಮ ನೆಚ್ಚಿನ ನಟರ ಕಟೌಟ್​ಗಳನ್ನು ನಿಲ್ಲಿಸೋದು ಮಾತ್ರ ನಮಗೆ ಗೊತ್ತು. ಡ್ರೆಸ್ಗಳಲ್ಲೂ ಕಟೌಟ್ ಡ್ರೆಸ್ ಗಳಿರುತ್ತವೆ ಅಂತ ಗೊತ್ತಾಗಿದ್ದು ಈಗಲೇ. ನೋರಾ ತೊಟ್ಟಿರುವ ಕಟೌಟ್ ಡ್ರೆಸ್ ನಲ್ಲಿ ಆಕೆಯದ್ದೇ ದೊಡ್ಡ ಕಟೌಟ್ ಮಾಡಿ ಯಾವುದಾದರೂ ಥೇಟರ್ ಮುಂದೆ ನಿಲ್ಲಿಸಿದರೆ ಅಲ್ಲಿ ಟ್ರಾಫಿಕ್ ಜಾಮ್ ಆಗಲಾರದು ಅಂತೀರಾ?

Nora getting into her car

ಕಾರು ಹತ್ತುತ್ತಿರುವ ನೋತಾ ಫತೇಹಿ

ಕೆಳಗೆ ಜಾರುವ ನೆಕ್ಲೈನ್ ನಲ್ಲಿ ಕಟೌಟ್, ಪಾರ್ಶ್ವ ಭಾಗದಲ್ಲಿ ಮತ್ತು ಮುಂಭಾಗದಲ್ಲಿ ಕಟೌಟ್ಗಳಿರುವುದರಿಂದಲೇ ಇದನ್ನು ಕಟೌಟ್ ಡ್ರೆಸ್ ಅನ್ನುತ್ತಾರಂತೆ. ಡ್ರೆಸ್ ಕೆಳಭಾಗದಲ್ಲಿ ಸೀಳು ಇರೋದು ಸಹ ಕಟೌಟ್ ಡ್ರೆಸ್ ನ ಒಂದು ಫೀಚರ್. ನಿಮಗೆ ನೆನೆಪಿರಬಹುದು, ಆಕೆ ಹಳದಿ ಬಣ್ಣದ ಬಾಡಿಕಾನ್ ಡ್ರೆಸ್ ಧರಿಸಿ ಕೆನಡಾದಲ್ಲಿ ಸ್ವಿಮ್ಮಿಂಗ್ ಪೂಲ್ ಒಂದರ ಪಕ್ಕ ನಿಂತು ಪೋಸ್ ಕೊಟ್ಟ ಪೋಟೋಗಳನ್ನು ನಾವು ನಿಮಗೆ ತೋರಿಸಿದ್ದೆವು. ಆ ಬಾಡಿಕಾನ್ ಡ್ರೆಸ್ ಹಾಗೆಯೇ, ಈ ಕಟೌಟ್ ಡ್ರೆಸ್ ನಲ್ಲೂ ನೋರಾಳ ಮೈಮಾಟ ಅದ್ಭುತವಾಗಿ ಕಾಣುತ್ತದೆ.

ನೋರಾಳ ಸಿನಿಮಾಗಳ ಬಗ್ಗೆ ಮಾತಾಡುವುದಾದರೆ ಆಕೆ ನಟಿಸಿದ ಭುಜ್: ದಿ ಪ್ರೈಡ್ ಆಫ್ ಇಂಡಿಯ ಇತ್ತೀಚಿಗಷ್ಟೇ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ, ಅಜಯ್ ದೇವಗನ್, ಸೋನಾಕ್ಷಿ ಸಿನ್ಹಾ, ಶರದ್ ಕೇಲ್ಕರ್ ಮತ್ತು ಬೇರೆ ನಟ-ನಟಿಯರಿದ್ದರು.

ಇದನ್ನೂ ಓದಿ:  ಬಾಡಿಕಾನ್ ಉಡುಪಿನಲ್ಲಿರುವ ತನ್ನ ಫೋಟೋಗಳನ್ನು ಪೋಸ್ಟ್ ಮಾಡಿ ಪಡ್ಡೆಗಳ ಹೃದಯಬಡಿತ ತಪ್ಪಿಸಿದ್ದಾರೆ ನೊರಾ ಫತೇಹಿ!

ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ