ಮುಂಬೈ ಅಪಾರ್ಟ್​ಮೆಂಟ್​ನಲ್ಲಿ ಹೇಮಾ ಮಾಲಿನಿಗೆ ಆಗಿತ್ತು ಭಯಾನಕ ಅನುಭವ

ಹೇಮಾ ಮಾಲಿನಿ ಚಿತ್ರರಂಗಕ್ಕೆ ಬಂದ ಆರಂಭದ ದಿನಗಳು ಅವು. ಅವರು ಬಾಂದ್ರಾದ ಫ್ಲ್ಯಾಟ್​ ಒಂದರಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಆದ  ಘಟನೆ ಬಗ್ಗೆ ಕೆಲ ವರ್ಷಗಳ ಹಿಂದೆ ಹೇಳಿಕೊಂಡಿದ್ದರು. ‘

ಮುಂಬೈ ಅಪಾರ್ಟ್​ಮೆಂಟ್​ನಲ್ಲಿ ಹೇಮಾ ಮಾಲಿನಿಗೆ ಆಗಿತ್ತು ಭಯಾನಕ ಅನುಭವ
ಮುಂಬೈ ಅಪಾರ್ಟ್​ಮೆಂಟ್​ನಲ್ಲಿ ಹೇಮಾ ಮಾಲಿನಿಗೆ ಆಗಿತ್ತು ಭಯಾನಕ ಅನುಭವ

ಭೂತಪ್ರೇತಗಳು ಇವೆ ಎನ್ನುವುದನ್ನು ಅನೇಕರು ನಂಬುತ್ತಾರೆ. ಇನ್ನೂ ಕೆಲವರು ನಂಬುವುದಿಲ್ಲ. ಕೆಲವರಿಗೆ ಈ ಬಗ್ಗೆ ಅನುಭವ ಕೂಡ ಆಗಿರುತ್ತದೆ. ಬಾಲಿವುಡ್ ಖ್ಯಾತ ನಟಿ ಹೇಮಾ ಮಾಲಿನಿಗೆ ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಹಿಂಗೊಂದು ಭಯಾನಕ ಅನುಭವ ಆಗಿತ್ತು. ಈ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಅಚ್ಚರಿ ಹೊರ ಹಾಕಿದ್ದಾರೆ.

ಹೇಮಾ ಮಾಲಿನಿ ಚಿತ್ರರಂಗಕ್ಕೆ ಬಂದ ಆರಂಭದ ದಿನಗಳು ಅವು. ಅವರು ಬಾಂದ್ರಾದ ಫ್ಲ್ಯಾಟ್​ ಒಂದರಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಆದ  ಘಟನೆ ಬಗ್ಗೆ ಕೆಲ ವರ್ಷಗಳ ಹಿಂದೆ ಹೇಳಿಕೊಂಡಿದ್ದರು. ‘ನಾನು ‘ಸಪ್ನೋಂ ಕಾ ಸೌದಾಗರ್​’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದೆ. ಆಗಲೇ ‘ಅಭಿನೇತ್ರಿ’ ಸಿನಿಮಾ ನನಗೆ ಸಿಕ್ಕಿತ್ತು. ನಾನು ಆಗ ಬಾಂದ್ರಾ ಅಪಾರ್ಟ್​ಮೆಂಟ್​ನಲ್ಲಿದ್ದೆ. ಅಲ್ಲಿಂದ, ನಾವು ಜುಹುಗೆ ಶಿಫ್ಟ್​ ಆದೆವು. ಆಗ ನಮಗೆ ವಿಚಿತ್ರ ಅನುಭವ ಆಗೋಕೆ ಆರಂಭವಾಯ್ತು’ ಎಂದಿದ್ದಾರೆ ಹೇಮಾ.

‘ಪ್ರತಿ ದಿನ ರಾತ್ರಿ ಯಾರೋ ನನ್ನನ್ನು ಉಸಿರುಗಟ್ಟಿಸುತ್ತಿದ್ದಾರೆ ಅನಿಸುತ್ತಿತ್ತು. ಉಸಿರಾಡಲು ಕಷ್ಟಪಡುತ್ತಿದೆ. ಒಂದೆರಡು ರಾತ್ರಿ ಈ ರೀತಿ ಆಗಿದ್ದರೆ ನಾವು ಹೇಗೋ ನಿರ್ಲಕ್ಷ್ಯ ಮಾಡಬಹುದಿತ್ತು. ಆದರೆ, ನಿತ್ಯ ರಾತ್ರಿ ಇದೇ ರೀತಿ ಆಗುತ್ತಿತ್ತು. ಈ ಕಾರಣಕ್ಕೆ ನಾವು ನಮ್ಮದೇ ಅಪಾರ್ಟ್​ಮೆಂಟ್​ ಕೊಂಡುಕೊಳ್ಳಲು ನಿರ್ಧರಿಸಿದೆವು’ ಎಂದು ಭಯಾನಕ ಅನುಭವ ಬಿಚ್ಚಿಟ್ಟಿದ್ದಾರೆ ಅವರು.

ನಂತರ ಹೇಮಾ ಮಾಲಿನಿ ಬೇರೆ ಮನೆಗೆ ಸ್ಥಳಾಂತರಗೊಂಡರು. ಆ ಸಮಯದಲ್ಲಿ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಡೇಟ್​ ಮಾಡುತ್ತಿದ್ದಾರೆ ಎನ್ನುವ ವಿಚಾರ ಸಾಕಷ್ಟು ಚರ್ಚೆ ಆಗಿತ್ತು. 1970ರಲ್ಲಿ ಮೊದಲ ಬಾರಿಗೆ ಇವರು ಒಂದೇ ಸಿನಿಮಾದಲ್ಲಿ ನಟಿಸಿದ್ದರು. ‘ತುಮ್​ ಹಸೀನ್​ ಮೈ ಜವಾನ್’​ ಸಿನಿಮಾದಲ್ಲಿ ಹೇಮಾ ಮಾಲಿನಿ ಹಾಗೂ ಧರ್ಮೇಂದ್ರ ಒಟ್ಟಾಗಿ ಕೆಲಸ ಮಾಡಿದ್ದರು. ನಂತರ ಇಬ್ಬರೂ ಪ್ರೀತಿಯಲ್ಲಿ ಬಿದ್ದರು. ಆಗಲೇ ಧರ್ಮೇಂದ್ರ ಅವರಿಗೆ ಮದುವೆ ಆಗಿತ್ತು. 1980ರಲ್ಲಿ ಹೇಮಾ ಅವರನ್ನು ಧರ್ಮೇಂದ್ರ ಮದುವೆ ಆದರು.

ಇದನ್ನೂ ಓದಿ: ಬಾಲಿವುಡ್​ನ ಯಾವೆಲ್ಲಾ ಖ್ಯಾತ ನಟರು ಕೂದಲು ಕಸಿ ಮಾಡಿಸಿಕೊಂಡಿದ್ದಾರೆ?; ಇಲ್ಲಿದೆ ಅಚ್ಚರಿಯ ಮಾಹಿತಿ

ಹೇಮಾ ಮಾಲಿನಿ-ಧರ್ಮೆಂದ್ರಗೆ ಅವಳಿ ಮೊಮ್ಮಕ್ಕಳು! ಮನೆಯಲ್ಲಿ ಸಂಭ್ರಮ

Read Full Article

Click on your DTH Provider to Add TV9 Kannada