ಪ್ರಿಯಾಂಕಾ ಚೋಪ್ರಾ ಪತಿ ನಿಕ್​ ಜೋನಸ್​ಗೆ 29ನೇ ಜನ್ಮದಿನ; ಸರ್ಪ್ರೈಸ್​ ನೀಡಿದ ಪತ್ನಿಗೆ ನಿಕ್ ಧನ್ಯವಾದ​

ನಿಕ್​ ಜೋನಸ್​ ಹುಟ್ಟುಹಬ್ಬವನ್ನು ಆಚರಿಸುವ ಸಲುವಾಗಿ ಪ್ರಿಯಾಂಕಾ ಚೋಪ್ರಾ ಅವರು ಇಂಗ್ಲೆಂಡ್​ನಿಂದ ಅಮೆರಿಕದ ವಿಮಾನ ಹತ್ತಿದ್ದಾರೆ. ಸಂಜೆ ಆಗುವುದರೊಳಗೆ ಪತಿಯನ್ನು ಬಂದು ಸೇರಿಕೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಪತಿ ನಿಕ್​ ಜೋನಸ್​ಗೆ 29ನೇ ಜನ್ಮದಿನ; ಸರ್ಪ್ರೈಸ್​ ನೀಡಿದ ಪತ್ನಿಗೆ ನಿಕ್ ಧನ್ಯವಾದ​
ಪ್ರಿಯಾಂಕಾ ಚೋಪ್ರಾ, ನಿಕ್​ ಜೋನಸ್​

ಎರಡು ಹೃದಯಗಳ ನಡುವೆ ನಿಜವಾಗಿ ಪ್ರೀತಿ ಚಿಗುರಿದರೆ ಅಲ್ಲಿ ಬೇರೆ ಯಾವುದೇ ನೆಪಗಳಿಗೆ ಜಾಗವೇ ಇರುವುದಿಲ್ಲ ಎಂಬುದಕ್ಕೆ ಬೆಸ್ಟ್​ ಉದಾಹರಣೆ ಎಂದರೆ ನಿಕ್​ ಜೋನಸ್​ ಮತ್ತು ಪ್ರಿಯಾಂಕಾ ಚೋಪ್ರಾ ಪ್ರೀತಿ. ಭಿನ್ನ ದೇಶ, ಭಿನ್ನ ಜನಾಂಗ, ಭಿನ್ನ ಧರ್ಮದವರಾದ ಈ ದಂಪತಿ ನಡುವೆ ವಯಸ್ಸಿನ ಅಂತರ ಕೂಡ ದೊಡ್ಡದಿದೆ. ಪ್ರಿಯಾಂಕಾಗೆ 39ರ ಪ್ರಾಯ. ಆದರೆ ಅವರ ಪತಿ ನಿಕ್​ ಜೋನಸ್​ಗೆ ಈಗಿನ್ನೂ 29 ವರ್ಷ. 29ನೇ ವಸಂತಕ್ಕೆ ಕಾಲಿಟ್ಟಿರುವ ಪತಿಗೆ ಪ್ರಿಯಾಂಕಾ ಚೋಪ್ರಾ ಮನಸಾರೆ ವಿಶ್​ ಮಾಡಿದ್ದಾರೆ. ಸೆ.16ರಂದು ನಿಕ್​ ಜನ್ಮದಿನವನ್ನು ಅವರು ಆಪ್ತವಾಗಿ ಸೆಲೆಬ್ರೇಟ್​ ಮಾಡಿದ್ದಾರೆ.

ಶೂಟಿಂಗ್​ ಕಾರಣದಿಂದ ಪ್ರಿಯಾಂಕಾ ಚೋಪ್ರಾ ಇಂಗ್ಲೆಂಡ್​ಗೆ ತೆರಳಿದ್ದರು. ನಿಕ್​ ಜೋನಸ್​ ಹುಟ್ಟುಹಬ್ಬವನ್ನು ಆಚರಿಸುವ ಸಲುವಾಗಿ ಅವರು ಅಲ್ಲಿಂದ ಅಮೆರಿಕದ ವಿಮಾನ ಹತ್ತಿದ್ದಾರೆ. ಸಂಜೆ ಆಗುವುದರೊಳಗೆ ಪತಿಯನ್ನು ಬಂದು ಸೇರಿಕೊಂಡಿದ್ದಾರೆ. ಅಲ್ಲಿಂದ ಬಂದು ತಮ್ಮ ಬರ್ತ್​ಡೇ ಆಚರಿಸಿರುವುದು ನಿಕ್​ಗೆ ಅಚ್ಚರಿ ನೀಡಿದೆ. ಹಾಗಾಗಿ ಅದನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘ನನ್ನ ಜನ್ಮದಿನಕ್ಕೆ ಪ್ರಿಯಾಂಕಾ ಸರ್ಪ್ರೈಸ್​ ನೀಡಿದಳು. ಅವಳೇ ಬೆಸ್ಟ್. ಪ್ರೀತಿ ತೋರಿಸಿದ ಎಲ್ಲರಿಗೂ ಧನ್ಯವಾದಗಳು’ ಎಂದು ನಿಕ್​ ಜೋನಸ್​ ಪೋಸ್ಟ್ ಮಾಡಿದ್ದಾರೆ. ಪತಿಯ ಫೋಟೋ ಹಂಚಿಕೊಂಡಿರುವ ಪ್ರಿಯಾಂಕಾ ಅವರು ಪ್ರೀತಿಯಿಂದ ವಿಶ್​ ಮಾಡಿದ್ದಾರೆ. ‘ನನ್ನ ಜೀವನದ ಪ್ರೀತಿ ನೀನು. ನಾನು ಕಂಡ ಅತ್ಯಂತ ಪ್ರೀತಿಪೂರ್ವಕ ವ್ಯಕ್ತಿಯಾದ ನಿನಗೆ ಜನ್ಮದಿನದ ಶುಭಾಶಯಗಳು. ಲವ್​ ಯೂ ಬೇಬಿ. ನೀನು ನೀನಾಗಿರುವುದಕ್ಕೆ ಧನ್ಯವಾದಗಳು’ ಎಂದು ಪ್ರಿಯಾಂಕಾ ಚೋಪ್ರಾ ಬರೆದುಕೊಂಡಿದ್ದಾರೆ.

ತಮ್ಮಿಬ್ಬರ ನಡುವೆ ಇರುವ ಪ್ರೀತಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಪ್ರಿಯಾಂಕಾ ಮತ್ತು ನಿಕ್ ಜೋನಸ್​ ಎಂದಿಗೂ ಮುಜುಗರ ಪಟ್ಟುಕೊಂಡಿಲ್ಲ. ಇಬ್ಬರೂ ಆಗಾಗಾ ತಮ್ಮ ಆತ್ಮೀಯ ಕ್ಷಣಗಳ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಅವು ಕೆಲವೊಮ್ಮೆ ಅತಿ ಎನಿಸುವುದು ಕೂಡ ಉಂಟು. ಟ್ರೋಲ್​ ಆದ ಉದಾಹರಣೆ ಸಹ ಸಾಕಷ್ಟಿದೆ. ಹಾಗಿದ್ದರೂ ಅವರು ತಲೆಕೆಡಿಸಿಕೊಂಡಿಲ್ಲ. ಸಂಸಾರದ ಕೆಲವು ಖಾಸಗಿ ವಿಚಾರಗಳನ್ನು ಕೂಡ ಪ್ರಿಯಾಂಕಾ ಈ ಹಿಂದೆ ಹಂಚಿಕೊಂಡಿದ್ದರು.

ಬಾಲಿವುಡ್​ನಿಂದ ಕೊಂಚ ಅಂತರ ಕಾಯ್ದುಕೊಂಡಿರುವ ಪ್ರಿಯಾಂಕಾ ಚೋಪ್ರಾ ಅವರು ಈಗ ಹಾಲಿವುಡ್​ ಪ್ರಾಜೆಕ್ಟ್​ಗಳಲ್ಲಿ ಹೆಚ್ಚು ಬ್ಯುಸಿ ಆಗಿದ್ದಾರೆ. ಹಲವು ವೆಬ್​ ಸರಣಿಗಳಲ್ಲಿ ನಟಿಸುತ್ತಿದ್ದಾರೆ. ಮತ್ತೆ ಅವರು ಯಾವಾಗ ಬಾಲಿವುಡ್​ ಸಿನಿಮಾ ಒಪ್ಪಿಕೊಳ್ಳುತ್ತಾರೆ ಎಂಬ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳಿದ್ದಾರೆ.

ಇದನ್ನೂ ಓದಿ:

‘ಪ್ರಿಯಾಂಕಾ ಚೋಪ್ರಾ ದಾಂಪತ್ಯ ಜೀವನ ಹತ್ತು ವರ್ಷಗಳಲ್ಲಿ ಕೊನೆಯಾಗಲಿದೆ’; ಭವಿಷ್ಯ ನುಡಿದ ವಿವಾದಿತ ನಟ

ಸೆಟ್​ನಲ್ಲಿ ಗಾಯಗೊಂಡ ಪ್ರಿಯಾಂಕಾ ಚೋಪ್ರಾ; ರಕ್ತದಲ್ಲಿ ತೊಯ್ದ ಹಣೆ, ನಿಜ ಯಾವುದು ಎಂದು ಕೇಳಿದ ನಟಿ

Read Full Article

Click on your DTH Provider to Add TV9 Kannada