ಪ್ರಧಾನಿ ನರೇಂದ್ರ ಮೋದಿ ಕುರಿತು ಸಿದ್ಧಗೊಂಡ ಈ ಸಿನಿಮಾ, ವೆಬ್​ ಸೀರಿಸ್​ಗಳನ್ನು ನೋಡಿದ್ದೀರಾ?

ದೇಶಾದ್ಯಂತ ಕೋಟ್ಯಂತರ ಮಂದಿ ಮೋದಿ ಅವರನ್ನು ಆರಾಧಿಸುತ್ತಿದ್ದಾರೆ. ಅವರೆಲ್ಲರೂ ಮೋದಿಗೆ ಜನ್ಮದಿನದ ವಿಶ್​ ಮಾಡಿದ್ದಾರೆ. ಈ ವಿಶೇಷ ದಿನದಂದು ಅವರ ಬಗ್ಗೆ ಸಿದ್ಧವಾದ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.

ಪ್ರಧಾನಿ ನರೇಂದ್ರ ಮೋದಿ ಕುರಿತು ಸಿದ್ಧಗೊಂಡ ಈ ಸಿನಿಮಾ, ವೆಬ್​ ಸೀರಿಸ್​ಗಳನ್ನು ನೋಡಿದ್ದೀರಾ?
ಪ್ರಧಾನಿ ನರೇಂದ್ರ ಮೋದಿ ಕುರಿತು ಸಿದ್ಧಗೊಂಡ ಈ ಸಿನಿಮಾ, ವೆಬ್​ ಸೀರಿಸ್​ಗಳನ್ನು ನೋಡಿದ್ದೀರಾ?
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 17, 2021 | 3:13 PM

ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು (ಸೆಪ್ಟೆಂಬರ್​ 17) 71ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಸೋಶಿಯಲ್​ ಮೀಡಿಯಾದಲ್ಲಿ ಶುಭಾಶಯಗಳು ಬಂದಿವೆ. ದೇಶಾದ್ಯಂತ ಕೋಟ್ಯಂತರ ಮಂದಿ ಮೋದಿ ಅವರನ್ನು ಆರಾಧಿಸುತ್ತಿದ್ದಾರೆ. ಅವರೆಲ್ಲರೂ ಮೋದಿಗೆ ಜನ್ಮದಿನದ ವಿಶ್​ ಮಾಡಿದ್ದಾರೆ. ಈ ವಿಶೇಷ ದಿನದಂದು ಅವರ ಬಗ್ಗೆ ಸಿದ್ಧವಾದ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.

‘ಪಿಎಂ ನರೇಂದ್ರ ಮೋದಿ’

ಮೋದಿ ಜೀವನ ಆಧರಿಸಿ ಸಾಕಷ್ಟು ಸಿನಿಮಾ, ಸಾಕ್ಷ್ಯಚಿತ್ರಗಳು ಮತ್ತು ಸರಣಿಗಳನ್ನು ಮಾಡಲಾಗಿದೆ. ಆದರೆ ವಿವೇಕ್ ಒಬೆರಾಯ್ ನಟಿಸಿದ ‘ಪಿಎಂ ನರೇಂದ್ರ ಮೋದಿ’ ಸಿನಿಮಾ ಹೆಚ್ಚು ಫೇಮಸ್ ಆಗಿತ್ತು. 2019ರಲ್ಲಿ ಈ ಸಿನಿಮಾ ತೆರೆಗೆ ಬಂದಿತ್ತು. ಲೋಕಸಭಾ ಚುನಾವಣೆ ಸಂದರ್ಭದಲ್ಲೇ ಈ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ, ಇದಕ್ಕೆ ಅವಕಾಶ ಸಿಗಲಿಲ್ಲ. ಈ ಕಾರಣಕ್ಕೆ ಸಿನಿಮಾ 2019ರ ಮೇ 24ರಂದು ತೆರೆಗೆ ಬಂದಿತ್ತು.

‘ಮೋದಿ: ಜರ್ನಿ ಆಫ್​ ಕಾಮನ್​ ಮ್ಯಾನ್​’

ಪ್ರಧಾನಿ ಮೋದಿ ಜೀವನ ಆಧರಿಸಿ ‘ಮೋದಿ: ಜರ್ನಿ ಆಫ್ ಎ ಕಾಮನ್ ಮ್ಯಾನ್’ ವೆಬ್​ ಸೀರಿಸ್​ ಸಿದ್ಧಗೊಂಡಿದೆ. ಇದರ ಕಥೆಯನ್ನು ಮಿಹಿರ್ ಭೂತಾ ಮತ್ತು ರಾಧಿಕಾ ಆನಂದ್ ಬರೆದಿದ್ದಾರೆ. ಇದರಲ್ಲಿ, ಮೋದಿಯವರ ಜೀವನದ ವಿವಿಧ ಮಜಲುಗಳನ್ನು ಫೈಜಲ್ ಖಾನ್, ಆಶಿಶ್ ಶರ್ಮಾ ಮತ್ತು ಮಹೇಶ್ ಠಾಕೂರ್ ಅವರು ಪ್ರಸ್ತುತಪಡಿಸಿದ್ದಾರೆ. ಈ ಸರಣಿಯ ಪ್ರತಿ ಸಂಚಿಕೆಯು 35 ರಿಂದ 40 ನಿಮಿಷಗಳವರೆಗೆ ಇದೆ. ಎರೋಸ್ ನೌ ವೆಬ್‌ಸೀರಿಸ್​ಗೆ ಬಂಡವಾಳ ಹೂಡಿದೆ. ಈ ಸರಣಿಯಲ್ಲಿ, ಪಿಎಂ ಯೌವನದಿಂದ ಭಾರತದ ಪ್ರಧಾನಿಯಾಗುವ ಪ್ರಯಾಣವನ್ನು ತೋರಿಸಲಾಗಿದೆ. ಈ ಸರಣಿಯು ಸಾಕಷ್ಟು ಖ್ಯಾತಿಯನ್ನು ಗಳಿಸಿತ್ತು.

‘ಏಕ್​ ಔರ್​ ನರೇನ್​​’

ಮೋದಿ ಕುರಿತ ಈ ಬಯೋಪಿಕ್​ ಈಗತಾನೇ ಸಿದ್ಧಗೊಳ್ಳುತ್ತಿದೆ. ಗಜೇಂದ್ರ ಚೌಹಾಣ್ ‘ಏಕ್ ಔರ್ ನರೇನ್’ ಚಿತ್ರದಲ್ಲಿ ಪಿಎಂ ಮೋದಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗಜೇಂದ್ರ ಚೌಹಾಣ್ ಹಲವು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಮಹಾಭಾರತದಲ್ಲಿ ಯುಧಿಷ್ಠಿರನ ಪಾತ್ರ ಮಾಡಿ ಹೆಚ್ಚು ಮನ್ನಣೆ ಪಡೆದರು. ಈ ಚಿತ್ರದಲ್ಲಿ, ಮೋದಿ ಬಾಲ್ಯದಿಂದ ಪಿಎಂ ಆಗುವವರೆಗಿನ ಪ್ರಯಾಣವನ್ನು ಹೊಸ ರೂಪದಲ್ಲಿ ಪ್ರಸ್ತುತಪಡಿಸಲಾಗುತ್ತಿದೆ.

ಇದನ್ನೂಓದಿ: ಪ್ರಧಾನಿ ಮೋದಿ 71ನೇ ಹುಟ್ಟು ಹಬ್ಬಕ್ಕೆ 2035 ಸಮುದ್ರ ಚಿಪ್ಪುಗಳನ್ನು ಬಳಸಿ ಮರಳು ಶಿಲ್ಪ ರಚಿಸಿದ ಕಲಾವಿದ ಸುದರ್ಶನ್ ಪಟ್ನಾಯಕ್ 

Narendra Modi Birthday: 71ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ನರೇಂದ್ರ ಮೋದಿ; ಶುಭಕೋರಿದ ಕ್ರೀಡಾ ತಾರೆಯರು