ಪ್ರಧಾನಿ ಮೋದಿ 71ನೇ ಹುಟ್ಟು ಹಬ್ಬಕ್ಕೆ 2035 ಸಮುದ್ರ ಚಿಪ್ಪುಗಳನ್ನು ಬಳಸಿ ಮರಳು ಶಿಲ್ಪ ರಚಿಸಿದ ಕಲಾವಿದ ಸುದರ್ಶನ್ ಪಟ್ನಾಯಕ್
Narendra Modi birthday: ಮರಳು ಕಲೆಯಲ್ಲಿ 2035 ಸಮುದ್ರ ಚಿಪ್ಪುಗಳನ್ನು ಬಳಸಲಾಗಿದೆ. ಆರೋಗ್ಯಕರ ಜೀವನ ನಿಮ್ಮದಾಗಲಿ, ಜನ್ಮ ದಿನದ ಶುಭಾಶಯಗಳು ಮೋದಿಜಿ ಎಂಬ ಹಾರೈಕೆಯೊಂದಿಗೆ ಸುದರ್ಶನ್ ಪಟ್ನಾಯಕ್ ಶುಭಾಶಯ ತಿಳಿಸಿದ್ದಾರೆ.
ಇಂದು (ಸೆ.17) ಪ್ರಧಾನಿ ನರೇಂದ್ರ ಮೋದಿ 71ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ದೇಶಾದ್ಯಂತ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಈ ಸಂದರ್ಭದಲ್ಲಿ ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಪ್ರಧಾನಿ ಮೋದಿಯವರ ಮರಳು ಶಿಲ್ಪ ರಸಿಸುವ ಮೂಲಕ ಶುಭಾಶಯ ಹೇಳಿದ್ದಾರೆ. ಒಡಿಶಾದ ಪುರಿ ಬೀಚ್ನಲ್ಲಿ ಅದ್ಭುತವಾದ ಮರಳು ಶಿಲ್ಪವನ್ನು ರಚಿಸಲಾಗಿದೆ. ತಾವು ರಚಿಸಿದ ಶಿಲ್ಪದ ಚಿತ್ರವನ್ನು ಕಲಾವಿದ ಸುದರ್ಶನ್ ಪಟ್ನಾಯಕ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಮರಳು ಕಲೆಯಲ್ಲಿ 2035 ಸಮುದ್ರ ಚಿಪ್ಪುಗಳನ್ನು ಬಳಸಲಾಗಿದೆ. ಆರೋಗ್ಯಕರ ಜೀವನ ನಿಮ್ಮದಾಗಲಿ, ಜನ್ಮ ದಿನದ ಶುಭಾಶಯಗಳು ಮೋದಿಜಿ ಎಂಬ ಹಾರೈಕೆಯೊಂದಿಗೆ ಸುದರ್ಶನ್ ಪಟ್ನಾಯಕ್ ಶುಭಾಶಯ ತಿಳಿಸಿದ್ದಾರೆ.
Wishing Our Hon’ble Prime Minister @narendramodi ji on his birthday. May Mahaprabhu Jagannatha bless him with long and healthy life to serve mother India. I’ve created a SandArt installation used 2035 sea shells with message #HappyBirthdayModiJi at Puri beach , Odisha . pic.twitter.com/uDTJGOLCFk
— Sudarsan Pattnaik (@sudarsansand) September 17, 2021
ಟ್ವೀಟ್ನಲ್ಲಿ ಸುದರ್ಶನ್ ಪಟ್ನಾಯಕ್, ಗೌರವಾನ್ವಿತ ಪಧಾನಿ ನರೇಂದ್ರ ಮೋದಿಜಿ ಅವರಿಗೆ ಜನ್ಮ ದಿನದ ಶುಭಾಶಯಗಳು. ಪುರಿಯ ಜಗನ್ನಾಥ ದೇವರು ಅವರಿಗೆ ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನೀಡಲಿ. ಒಡಿಶಾ ಪುರಿ ಬೀಚ್ನಲ್ಲಿ ನಾನು 2035 ಸಮುದ್ರ ಚಿಪ್ಪುಗಳನ್ನು ಬಳಸಿ ಸ್ಯಾಂಡ್ ಆರ್ಟ್ ರಚಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:
Puri Ratha Yatra 2021: ಪುರಿ ಬೀಚ್ನಲ್ಲಿ ಅರಳಿದ ಮರಳು ಕಲೆ! ಜಗನ್ನಾಥ ದೇವರನ್ನು ಚಿತ್ರಿಸಿದ ಕಲಾವಿದ
ಮರಳಲ್ಲಿ ಅರಳಿದ ಕಲಾಕೃತಿಗಳು: ಕೊನಾರ್ಕ್ ಬೀಚ್ನಲ್ಲಿ ಅಂತಾರಾಷ್ಟ್ರೀಯ ಮರಳು ಕಲಾ ಉತ್ಸವ
(Sudarsan pattnaik creates sand art for wish to pm Narendra modi 71th birthday)
Published On - 11:41 am, Fri, 17 September 21