ರಾಜ್ ಕುಂದ್ರಾಗೆ ಡಿವೋರ್ಸ್​ ಕೊಡುವ ಬಗ್ಗೆ ಶಿಲ್ಪಾ ಶೆಟ್ಟಿ ಸುಳಿವು? ಇಲ್ಲಿದೆ ಹೊಸ ಅಂತ್ಯದ ಬಗ್ಗೆ ಮಾತು

‘ಹಿಂದೆ ಮಾಡಿದ ಕೆಲಸಗಳಿಂದಲೇ ನಾನು ಗುರುತಿಸಿಕೊಳ್ಳಬೇಕಿಲ್ಲ. ನನಗೆ ಬೇಕಾದ ಭವಿಷ್ಯವನ್ನು ನಾನು ಸೃಷ್ಟಿ ಮಾಡಿಕೊಳ್ಳಬಹುದು’ ಎಂಬ ಸಾಲುಗಳು ಶಿಲ್ಪಾ ಶೆಟ್ಟಿಯ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಗಮನ ಸೆಳೆಯುತ್ತಿವೆ.

ರಾಜ್ ಕುಂದ್ರಾಗೆ ಡಿವೋರ್ಸ್​ ಕೊಡುವ ಬಗ್ಗೆ ಶಿಲ್ಪಾ ಶೆಟ್ಟಿ ಸುಳಿವು? ಇಲ್ಲಿದೆ ಹೊಸ ಅಂತ್ಯದ ಬಗ್ಗೆ ಮಾತು
ರಾಜ್​ ಕುಂದ್ರಾ, ಶಿಲ್ಪಾ ಶೆಟ್ಟಿ
TV9kannada Web Team

| Edited By: Madan Kumar

Sep 18, 2021 | 12:06 PM

ಇಷ್ಟು ವರ್ಷಗಳ ಕಾಲ ನಟಿ ಶಿಲ್ಪಾ ಶೆಟ್ಟಿ ಅವರು ಕಷ್ಟಪಟ್ಟು ಸಂಪಾದಿಸಿದ್ದ ಪ್ರತಿಷ್ಠೆಗೆ ಅವರ ಗಂಡನಿಂದಲೇ ಧಕ್ಕೆ ಆಗಿದೆ. ಪತಿ ರಾಜ್​ ಕುಂದ್ರಾ ಅಶ್ಲೀಲ ಸಿನಿಮಾ ನಿರ್ಮಾಣಗಳ ದಂಧೆಯಲ್ಲಿ ಮುಖ್ಯ ಆರೋಪಿಯಾಗಿ ಜೈಲು ಸೇರಿದ ಬಳಿಕ ಶಿಲ್ಪಾ ಶೆಟ್ಟಿಗೆ ತೀವ್ರ ಮುಜುಗರ ಆಗಿದೆ. ಈ ನಡುವೆಯೂ ಅವರು ಎಷ್ಟು ಸಾಧ್ಯವೋ ಅಷ್ಟು ಪಾಸಿಟಿವ್​ ಆಗಿರಲು ಪ್ರಯತ್ನಿಸುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರು ಹೆಚ್ಚು ಆ್ಯಕ್ಟೀವ್​ ಆಗಿದ್ದಾರೆ. ರಿಯಾಲಿಟಿ ಶೋನಲ್ಲಿ ಜಡ್ಜ್​ ಆಗಿ ಪಾಲ್ಗೊಳ್ಳುತ್ತ ಸಮಯ ಕಳೆಯುತ್ತಿದ್ದಾರೆ. ಈಗ ಶಿಲ್ಪಾ ಶೆಟ್ಟಿ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಶೇರ್​ ಮಾಡಿರುವ ಕೆಲವು ಸಾಲುಗಳು ಅಭಿಮಾನಿಗಳ ಮನದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ರಾಜ್​ ಕುಂದ್ರಾ ಕಾಮಕಾಂಡ ಬಯಲಾದಾಗಿನಿಂದ ವಿಚ್ಛೇದನ ಕುರಿತ ಸುದ್ದಿ ಕೇಳಿಬರುತ್ತಲೇ ಇದೆ. ರಾಜ್​ ಕುಂದ್ರಾ ಜೊತೆಗಿನ ತಮ್ಮ ದಾಂಪತ್ಯಕ್ಕೆ ಅಂತ್ಯಹಾಡಲು ಶಿಲ್ಪಾ ನಿರ್ಧರಿಸುತ್ತಿದ್ದಾರೆ ಎಂಬ ಗುಸುಗುಸು ಹಬ್ಬಿದೆ. ಈಗ ಅವರು ಒಂದು ಪುಸ್ತಕದಲ್ಲಿನ ‘ಹೊಸ ಅಂತ್ಯ’ ಎಂಬ ಚಾಪ್ಟರ್​ನ ಕೆಲವು ತುಣುಕುಗಳನ್ನು ಹಂಚಿಕೊಂಡಿದ್ದು, ಸೂಚ್ಯವಾಗಿ ಏನೋ ಸಂದೇಶ ರವಾನಿಸಿದ್ದಾರೆ. ಇದನ್ನು ನೋಡಿದರೆ ವಿಚ್ಛೇದನದ ಸುಳಿವು ಇರಬಹುದು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

‘ಯಾರೂ ಸಹ ಹಿಂದಕ್ಕೆ ಹೋಗಿ ಮತ್ತೆ ಹೊಸದಾಗಿ ಏನನ್ನೂ ಶುರುಮಾಡಲು ಸಾಧ್ಯವಿಲ್ಲ. ಆದರೆ ಈಗಿನಿಂದ ಬೇರೆ ಏನನ್ನಾದರೂ ಶುರುಮಾಡಿ ಹೊಸ ಅಂತ್ಯ ಹಾಡಬಹುದು’ ಎಂಬ ಸಾಲನ್ನು ಶಿಲ್ಪಾ ಶೇರ್​ ಮಾಡಿಕೊಂಡಿದ್ದಾರೆ. ‘ನಾವು ತೆಗೆದುಕೊಂಡ ಕೆಟ್ಟ ನಿರ್ಧಾರಗಳ ಬಗ್ಗೆ ಹೆಚ್ಚು ವಿಶ್ಲೇಷಣೆ ಮಾಡಬಹುದು. ಆದರೆ ಎಷ್ಟೇ ವಿಶ್ಲೇಷಣೆ ಮಾಡಿದರೂ ಆಗಿ ಹೋಗಿದ್ದನ್ನು ನಾವು ಬದಲಾಯಿಸಲು ಸಾಧ್ಯವಿಲ್ಲ. ಮುಂದಕ್ಕೆ ಹೋಗಿ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಹಳೇ ತಪ್ಪುಗಳನ್ನು ಮತ್ತೆ ಮಾಡಬಾರದು. ನಮ್ಮ ಸುತ್ತಮುತ್ತ ಇನ್ನೂ ಸಾಕಷ್ಟು ಅವಕಾಶಗಳಿವೆ’ ಎಂಬ ಮಾತನ್ನು ಶಿಲ್ಪಾ ಹಂಚಿಕೊಂಡಿದ್ದಾರೆ.

‘ಹಿಂದೆ ಮಾಡಿದ ಕೆಲಸಗಳಿಂದಲೇ ನಾನು ಗುರುತಿಸಿಕೊಳ್ಳಬೇಕಿಲ್ಲ. ನನಗೆ ಬೇಕಾದ ಭವಿಷ್ಯವನ್ನು ನಾನು ಸೃಷ್ಟಿ ಮಾಡಿಕೊಳ್ಳಬಹುದು’ ಎಂಬ ಸಾಲುಗಳು ಶಿಲ್ಪಾ ಅವರ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಗಮನ ಸೆಳೆಯುತ್ತಿವೆ.

ಇದನ್ನೂ ಓದಿ:

ಶಮಿತಾ ಶೆಟ್ಟಿ-ರಾಕೇಶ್​ ಬಾಪಟ್​​ ಸಂಬಂಧಕ್ಕೆ ಮನೆಯವರ ಒಪ್ಪಿಗೆ? ಶಿಲ್ಪಾ ಶೆಟ್ಟಿ ತಾಯಿಯಿಂದ ಹೊಗಳಿಕೆ​

Shilpa Shetty: ರಾಜ್​ ಕುಂದ್ರಾ ಪೋರ್ನ್​ ದಂಧೆಯಲ್ಲಿ ಶಿಲ್ಪಾ ಶೆಟ್ಟಿ ತಪ್ಪು ಒಪ್ಪಿಕೊಳ್ಳಲಿ ಎಂದು ಹಠ ಹಿಡಿದ ಶೆರ್ಲಿನ್​ ಚೋಪ್ರಾ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada