ಶಾರುಖ್ ಖಾನ್-ಅಟ್ಲೀ ಸಿನಿಮಾಗೆ ಜನಪ್ರಿಯ ವೆಬ್ ಸೀರಿಸ್ ‘ಮನಿ ಹೈಸ್ಟ್’ ಕಥೆ?
ಶಾರುಖ್ ಸಿನಿಮಾಗಾಗಿ ಅಟ್ಲೀ ಬರೋಬ್ಬರಿ ಎರಡು ವರ್ಷ ಸ್ಕ್ರಿಪ್ಟ್ ವರ್ಕ್ ಮಾಡಿದ್ದಾರೆ. ಎಲ್ಲವೂ ಅಚ್ಚುಕಟ್ಟಾಗಿ ಮೂಡಿಬರಬೇಕು ಎನ್ನುವ ಆಲೋಚನೆ ನಿರ್ದೇಶಕರದ್ದು
ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಸಿನಿಮಾ ಬಗ್ಗೆ ಸೃಷ್ಟಿ ಆಗಿರುವ ಹೈಪ್ ಅಷ್ಟಿಷ್ಟಲ್ಲ. ಸಾಲುಸಾಲು ಹಿಟ್ ಸಿನಿಮಾ ಕೊಟ್ಟಿರುವ ಅಟ್ಲೀ ಅವರು ಸೋತು ಸುಣ್ಣವಾಗಿರುವ ಶಾರುಖ್ಗೆ ಗೆಲುವು ಕೊಡುತ್ತಾರೆ ಎನ್ನುವ ನಂಬಿಕೆಯಲ್ಲಿ ಅಭಿಮಾನಿಗಳಿದ್ದಾರೆ. ಶಾರುಖ್ ಮುಖದಲ್ಲಿ ಮತ್ತೆ ಗೆಲುವು ನೋಡೋಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಹೀಗಿರುವಾಗಲೇ ಬಾಲಿವುಡ್ ಅಂಗಳದಲ್ಲಿ ಹೊಸ ವದಂತಿ ಒಂದು ಹುಟ್ಟಿಕೊಂಡಿದೆ. ಅಟ್ಲೀ-ಶಾರುಖ್ ಸಿನಿಮಾ ಖ್ಯಾತ ವೆಬ್ ಸೀರಿಸ್ ಕಥೆಯನ್ನು ಆಧರಿಸಿ ಸಿದ್ಧಗೊಳ್ಳುತ್ತಿದೆ ಎನ್ನಲಾಗಿದೆ.
ಶಾರುಖ್ ಸಿನಿಮಾಗಾಗಿ ಅಟ್ಲೀ ಬರೋಬ್ಬರಿ ಎರಡು ವರ್ಷ ಸ್ಕ್ರಿಪ್ಟ್ ವರ್ಕ್ ಮಾಡಿದ್ದಾರೆ. ಎಲ್ಲವೂ ಅಚ್ಚುಕಟ್ಟಾಗಿ ಮೂಡಿಬರಬೇಕು ಎನ್ನುವ ಆಲೋಚನೆ ನಿರ್ದೇಶಕರದ್ದು. ಈ ಕಾರಣಕ್ಕೆ ಅಟ್ಲೀ ಇಷ್ಟು ಶ್ರಮ ಹಾಕಿದ್ದಾರೆ. ಇನ್ನು, ಈ ಸಿನಿಮಾಗೆ ಕಥೆ ನೀಡಿದ್ದು ಶಾರುಖ್ ಎನ್ನಲಾಗುತ್ತಿದೆ. ಬಾಲಿವುಡ್ ಕಿಂಗ್ ಖಾನ್ ಈಗಾಗಲೇ ಸ್ಪ್ಯಾನಿಶ್ ವೆಬ್ ಸೀರಿಸ್ ‘ಮನಿ ಹೈಸ್ಟ್’ ಭಾರತದ ಹಕ್ಕನ್ನು ಕೊಂಡುಕೊಂಡಿದ್ದಾರೆ. ‘ಮನಿ ಹೈಸ್ಟ್’ ವೆಬ್ ಸೀರಿಸ್ಅನ್ನು ಹಿಂದಿಗೆ ಮಾಡುತ್ತೇನೆ ಎಂದರೆ ಅದು ಸಾಧ್ಯವಿಲ್ಲ. ಏಕೆಂದರೆ ಅದಕ್ಕೆ ತುಂಬಾನೇ ಸಮಯ ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಭಾರತದಲ್ಲಿ ಸಾಕಷ್ಟು ಮಂದಿ ಈಗಾಗಲೇ ‘ಮನಿ ಹೈಸ್ಟ್’ ವೀಕ್ಷಣೆ ಮಾಡಿದ್ದಾರೆ. ಹೀಗಾಗಿ, ಮತ್ತೆ ಇದನ್ನು ಹಿಂದಿಯಲ್ಲಿ ಮಾಡಿದರೆ ಶ್ರಮ ವ್ಯರ್ಥ ಆಗಲಿದೆ. ಈ ಕಾರಣಕ್ಕೆ ಈ ವೆಬ್ ಸೀರಿಸ್ ಕಥೆಯ ಒಂದೆಳೆ ಇಟ್ಟುಕೊಂಡ ಸಿನಿಮಾ ಮಾಡಲು ಶಾರುಖ್ ನಿರ್ಧರಿಸಿದ್ದಾರಂತೆ.
ಶಾರುಖ್ ನಟನೆಯ ‘ಡಾನ್’ ಸಿನಿಮಾ ಹೆಚ್ಚು ಖ್ಯಾತಿ ಪಡೆದುಕೊಂಡಿತ್ತು. ಈ ಚಿತ್ರದಲ್ಲೂ ದರೋಡೆ ಮಾಡುವುದೇ ಹೈಲೈಟ್. ಶಾರುಖ್ ಅವರು ಸ್ಟೈಲಿಶ್ ಡಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ‘ಮನಿ ಹೈಸ್ಟ್’ ಕೂಡ ಕಳ್ಳತನದ ಕಥೆಯನ್ನೇ ಹೊಂದಿದೆ. ಈ ಕಾರಣಕ್ಕೆ ಜನರಿಗೆ ಹೆಚ್ಚು ಕನೆಕ್ಟ್ ಆಗಬಹುದು ಎನ್ನುವ ಆಲೋಚನೆ ಶಾರುಖ್ ಅವರದ್ದು. ಹೀಗಾಗಿ, ಅಟ್ಲೀ ಸಿನಿಮಾಗೆ ಈ ಸ್ಟೋರಿ ಲೈನ್ ನೀಡಲಾಗಿದೆ ಎನ್ನುವ ಮಾತು ಜೋರಾಗಿದೆ.
ಈಗಾಗಲೇ ಸಿನಿಮಾದ ಶೂಟಿಂಗ್ ಆರಂಭಗೊಂಡಿದೆ. ಇತ್ತೀಚೆಗೆ ಚಿತ್ರದ ಸೆಟ್ನ ಫೋಟೋ ಲೀಕ್ ಆಗಿತ್ತು. ನಯನತಾರಾ ಹಾಗೂ ಶಾರುಖ್ ಸೆಟ್ನಲ್ಲಿರುವ ಫೋಟೋ ನೋಡಿ ಅಭಿಮಾನಿಗಳು ಖುಷಿ ಆಗಿದ್ದರು.
ಇದನ್ನೂ ಓದಿ: ಸಲ್ಮಾನ್ ಖಾನ್ ಮಾಡಿದ 30 ಸೆಕೆಂಡ್ ಕೆಲಸಕ್ಕೆ 50 ಲಕ್ಷ ರೂ. ಸಂಬಳ; ಸಲ್ಲು ಬರೆದಿದ್ದು ಒಂದೇ ವಾಕ್ಯ
Money Heist 5: ‘ಮನಿ ಹೈಸ್ಟ್ 5’ ಮೋಡಿಗೆ ಸಿಲುಕಿದ ನಟಿ ಕೀರ್ತಿ ಸುರೇಶ್: ನಾಯಿ ಜೊತೆಗಿನ ವಿಡಿಯೋ ವೈರಲ್