ವೈರಲ್ ಆಯ್ತು ಅಭಿಷೇಕ್ ಬಚ್ಚನ್- ಐಶ್ವರ್ಯಾ ರೈ ಮದುವೆಯ ಚಿತ್ರ; ಫೋಟೋದ ಅಸಲಿಯತ್ತನ್ನು ತೆರೆದಿಟ್ಟ ನಟ

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ಮದುವೆಯ ಸಂದರ್ಭದ ಫೋಟೋವೊಮದು ಅಂತರ್ಜಾಲದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಕುರಿತಂತೆ ಅಭಿಷೇಕ್ ಬಚ್ಚನ್ ಪ್ರತಿಕ್ರಿಯೆ ನೀಡಿದ್ದಾರೆ.

ವೈರಲ್ ಆಯ್ತು ಅಭಿಷೇಕ್ ಬಚ್ಚನ್- ಐಶ್ವರ್ಯಾ ರೈ ಮದುವೆಯ ಚಿತ್ರ; ಫೋಟೋದ ಅಸಲಿಯತ್ತನ್ನು ತೆರೆದಿಟ್ಟ ನಟ
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ(ಎಡ), ವೈರಲ್ ಆದ ಚಿತ್ರ(ಬಲ)
TV9kannada Web Team

| Edited By: shivaprasad.hs

Sep 16, 2021 | 5:38 PM

ಬಾಲಿವುಡ್​ನ ಖ್ಯಾತ ತಾರಾ ಜೋಡಿಗಳಲ್ಲಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಜೋಡಿಯೂ ಒಂದು. ಇಂದಿಗೂ ಈ ಜೋಡಿಯ ಮದುವೆಯ ಸಂದರ್ಭದ ಚಿತ್ರಗಳನ್ನು ಹಂಚಿಕೊಂಡು ಅಭಿಮಾನಿಗಳು ಸಂಭ್ರಮಿಸುತ್ತಾರೆ. ಇಷ್ಟೇ ಅಲ್ಲದೇ ಐಶ್ವರ್ಯಾ ಹಾಗೂ ಅಭಿಷೇಕ್ ಕೂಡ ಕುಟುಂಬದೊಂದಿಗಿನ ಸಂತಸದ ಕ್ಷಣಗಳನ್ನು ಆನ್​ಲೈನ್​ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅವುಗಳನ್ನು ಫಾಲೋ ಮಾಡುವ ಅಭಿಮಾನಿ ಬಳಗವೂ ದೊಡ್ಡದಿದೆ. ಆದರೆ ಕೆಲವೊಮ್ಮೆ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ತಾರೆಯರನ್ನು ಮತ್ತಷ್ಟು ಖುಷಿಯಿಂದ ಕಾಣಬೇಕು ಎಂಬ ಆಸೆ ಇರುತ್ತದೆ. ಅದಕ್ಕೆ ನಾನಾ ವಿಧದ ಪ್ರಯತ್ನಗಳನ್ನೂ ನಡೆಸುತ್ತಾರೆ. ಒಬ್ಬ ಅನಾಮಿಕ ಅಭಿಮಾನಿ ಅಂಥದ್ದೊಂದು ಪ್ರಯತ್ನವನ್ನು ನಡೆಸಿದ್ದಾನೆ.

ಹೌದು. ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ಮದುವೆಯ ಸಂದರ್ಭದಲ್ಲಿ ಸಂತಸದಿಂದ ನಗುತ್ತಿರುವ ಫೊಟೊವೊಂದು ವೈರಲ್ ಆಗಿತ್ತು. ಅದರಲ್ಲಿ ಅಭಿಷೇಕ್ ಮುಗುಳ್ನಗುತ್ತಿದ್ದರೆ, ಐಶ್ವರ್ಯಾ ಜೋರಾಗಿ ನಗುತ್ತಿದ್ದರು. ಅವರ ಸಂಭ್ರಮ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿತ್ತು. ಐಶ್ವರ್ಯಾ ಮುಖದಲ್ಲಿರುವ ನಗು ನೋಡಿ ಎಂದು ಬಹಳಷ್ಟು ಅಭಿಮಾನಿಗಳು ಫೋಟೋ ಹಂಚಿಕೊಂಡಿದ್ದರು. ಆದರೆ, ಅವರ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. ಕಾರಣ, ಇದಕ್ಕೆ ಸ್ವತಃ ಅಭಿಷೇಕ್ ಬಚ್ಚನ್ ತಣ್ಣೀರೆರಚಿದ್ದಾರೆ.

ಅಭಿಮಾನಿಗಳು ಹಂಚಿಕೊಳ್ಳುತ್ತಿರುವ ಚಿತ್ರವನ್ನು ಉಲ್ಲೇಖಿಸಿ ಅಭಿಷೇಕ್ ಬಚ್ಚನ್, ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಈ ಫೊಟೊ ನಿಜವಲ್ಲ ಎಂದು ಮಾಹಿತಿ ಬಿಟ್ಟುಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಅದು ಫೋಟೋಶಾಪ್ಡ್ ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ. ಆದರೆ ಅಭಿಮಾನಿಗಳು ಫೋಟೋ ನಕಲಿಯಾದರೂ ಐಶ್ವರ್ಯಾ ಮತ್ತು ಅಭಿಷೇಕ್ ನಗುತ್ತಿರುವುದು ಚೆನ್ನಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ನೈಜ ಫೋಟೋಗಳನ್ನು ಹಂಚಿಕೊಳ್ಳಿ ಎಂದು ಅಭಿಷೇಕ್​ಗೆ ದುಂಬಾಲು ಬಿದ್ದಿದ್ದಾರೆ.

ಅಭಿಷೇಕ್ ಹಂಚಿಕೊಂಡ ಟ್ವೀಟ್ ಇಲ್ಲಿದೆ:

ಅಭಿಷೇಕ್ ಹಾಗೂ ಐಶ್ವರ್ಯಾ 2007ರಲ್ಲಿ ವಿವಾಹವಾಗಿದ್ದರು. ಪುತ್ರಿ ಆರಾಧ್ಯಾ 2011ರಲ್ಲಿ ಜನಿಸಿದ್ದಾಳೆ. ಚಿತ್ರಗಳ ವಿಷಯಕ್ಕೆ ಬರುವುದಾದರೆ, ಅಭಿಷೇಕ್ ಕೊನೆಯದಾಗಿ ‘ಬಿಗ್ ಬುಲ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ‘ಬಾಬ್ ಬಿಸ್ವಾಸ್’ ಹಾಗೂ ‘ಧಸ್ವಿ’ ಚಿತ್ರಗಳು ಅವರ ಬತ್ತಳಿಕೆಯಲ್ಲಿವೆ. ಐಶ್ವರ್ಯಾ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ಬಹು ನಿರೀಕ್ಷಿತ ‘ಪೊನ್ನಿಯಿನ್ ಸೆಲ್ವನ್’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

ನಟಿ ಕಾಜಲ್ ಅಗರ್​ವಾಲ್​ ಪ್ರೆಗ್ನೆಂಟ್​? ಗುಡ್​ನ್ಯೂಸ್​ ಕೇಳಿ ಹಿರಿಹಿರಿ ಹಿಗ್ಗಿದ ಫ್ಯಾನ್ಸ್

Alizeh Agnihotri: ಬಾಲಿವುಡ್ ಪ್ರವೇಶಕ್ಕೂ ಮುನ್ನವೇ ಎಲ್ಲರ ಗಮನ ಸೆಳೆದ ಸಲ್ಮಾನ್ ಖಾನ್ ಸೊಸೆ ಅಲಿಜೇಹ್ ಅಗ್ನಿಹೋತ್ರಿ

(Abhishek Bachchan reacts on Viral photo of their wedding)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada