AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Alizeh Agnihotri: ಬಾಲಿವುಡ್ ಪ್ರವೇಶಕ್ಕೂ ಮುನ್ನವೇ ಎಲ್ಲರ ಗಮನ ಸೆಳೆದ ಸಲ್ಮಾನ್ ಖಾನ್ ಸೊಸೆ ಅಲಿಜೇಹ್ ಅಗ್ನಿಹೋತ್ರಿ

ಬಾಲಿವುಡ್​ನ ಖ್ಯಾತ ನಟ ಸಲ್ಮಾನ್ ಖಾನ್ ಸೊಸೆ, ಅಲಿಜೇಹ್ ಅಗ್ನಿಹೋತ್ರಿ ಈಗ ಸಖತ್ ಸುದ್ದಿಯಲ್ಲಿದ್ದಾರೆ. ಜಾಹಿರಾತೊಂದರಲ್ಲಿ ಮಿಂಚಿರುವ ಅವರು, ಬಾಲಿವುಡ್ ಪ್ರವೇಶಕ್ಕೂ ಮುನ್ನವೇ ಎಲ್ಲರ ಗಮನ ಸೆಳೆದಿದ್ದಾರೆ.

Alizeh Agnihotri: ಬಾಲಿವುಡ್ ಪ್ರವೇಶಕ್ಕೂ ಮುನ್ನವೇ ಎಲ್ಲರ ಗಮನ ಸೆಳೆದ ಸಲ್ಮಾನ್ ಖಾನ್ ಸೊಸೆ ಅಲಿಜೇಹ್ ಅಗ್ನಿಹೋತ್ರಿ
ಅಲಿಜೇಹ್ ಅಗ್ನಿಹೋತ್ರಿ, ಸಲ್ಮಾನ್ ಖಾನ್
TV9 Web
| Updated By: shivaprasad.hs|

Updated on: Sep 16, 2021 | 4:36 PM

Share

ಬಾಲಿವುಡ್​ನಲ್ಲಿ ಖ್ಯಾತ ತಾರೆಯರ ಕುಟುಂಬದವರು ಚಿತ್ರರಂಗ ಪ್ರವೇಶಿಸುವುದು ಮಾಮೂಲು. ಆದರೆ ಸಲ್ಮಾನ್ ಖಾನ್ ಸಹೋದರಿ ಅಲ್ವಿರಾ ಖಾನ್ ಪುತ್ರಿ, ಚಿತ್ರರಂಗ ಪ್ರವೇಶಿಸದೆಯೇ ಸಖತ್ ಸುದ್ದಿಯಲ್ಲಿದ್ದಾರೆ. ಅದೂ ಕೂಡ ಒಂದು ಜಾಹಿರಾತಿನಲ್ಲಿ ಕಾಣಿಸಿಕೊಳ್ಳುವ ಮೂಲಕ. ಹೌದು. ಅಲ್ವಿರಾ ಖಾನ್ ಹಾಗೂ ಖ್ಯಾತ ನಿರ್ಮಾಪಕ ಅತುಲ್ ಅಗ್ನಿಹೋತ್ರಿ ಪುತ್ರಿಯಾಗಿರುವ ಅಲಿಜೇಹ್ ಅಗ್ನಿಹೋತ್ರಿ(Alizeh Agnihotri) ಜಾಹಿರಾತೊಂದರಲ್ಲಿ ಕಾಣಿಸಿಕೊಂಡು ಎಲ್ಲೆಡೆ ಸುದ್ದಿಯಾಗಿದ್ದಾರೆ.

ಆಭರಣಗಳ ಜಾಹಿರಾತೊಂದರಲ್ಲಿ ಕಾಣಿಸಿಕೊಂಡಿರುವ ಅಲಿಜೇಹ್, ತಮ್ಮ ಮಾದಕ ನೋಟದಿಂದ ವೀಕ್ಷಕರ ಮನಸೆಳೆದಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ವಿಡಿಯೊ ಪ್ರಸ್ತುತ ವೈರಲ್ ಆಗಿದ್ದು, ಸಹಜ ಸೌಂದರ್ಯದಿಂದ ಗಮನ ಸೆಳೆಯುತ್ತಿರುವ ಅವರ ಆತ್ಮವಿಶ್ವಾಸವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ವಿಡಿಯೊಕ್ಕೆ ತಮ್ಮ ಅನುಭವಗಳನ್ನಾಧರಿಸಿ ಒಂದು ಸುಂದರ ಕ್ಯಾಪ್ಶನ್​ಅನ್ನು ಕೂಡ ಅವರು ನೀಡಿದ್ದಾರೆ.

ವಿಡಿಯೊದೊಂದಿಗೆ ಹಂಚಿಕೊಂಡಿರುವ ಅಡಿಬರಹದಲ್ಲಿ, ಪ್ರತಿ ಹೆಣ್ಣು ಮಕ್ಕಳು ಜೀವನದಲ್ಲಿ ಮೊದಲು ಧರಿಸಬಹುದಾದ ಆಭರಣವೆಂದರೆ ಅದು ಕಿವಿಯೋಲೆ. ಆದರೆ ತಾನು ಅದನ್ನು ಧರಿಸುತ್ತಿರಲಿಲ್ಲ ಎಂದು ಬರೆದುಕೊಂಡಿದ್ದಾರೆ. ‘‘ಹೆಣ್ಣು ಮಕ್ಕಳು ಜೀವನದಲ್ಲಿ ಮೊದಲು ಧರಿಸುವ ಆಭರಣವೆಂದರೆ ಅದು ಬಹುಶಃ ಕಿವಿಯೋಲೆ. ಕೆಲವರಿಗೆ ಅದು ಬಹಳ ಸಹಜವಾಗಿರುತ್ತದೆ. ಆದರೆ ಏಕೋ ಗೊತ್ತಿಲ್ಲ. ನಾನು ಸಣ್ಣ ವಯಸ್ಸಿನಿಂದಲೂ ಕಿವಿಯೋಲೆ ಧರಿಸುತ್ತಿರಲಿಲ್ಲ. ಬಹಳಷ್ಟು ಜನಕ್ಕೆ ಇದು ವಿಚಿತ್ರವಾಗಿ ಕಾಣಬಹುದು. ಆದರೆ ನನಗೆ ಮಾತ್ರ ಧರಿಸಬೇಕು ಎಂದು ಅನಿಸುತ್ತಲೇ ಇರಲಿಲ್ಲ. ಆದರೆ ಈಗ, ನಾನು ನನ್ನ ಉಡುಪನ್ನು ನಿರ್ಧರಿಸುವ ಮೊದಲೇ, ಆಭರಣಗಳನ್ನು ನಿರ್ಧರಿಸಿರುತ್ತೇನೆ. ಆಭರಣಗಳು ನನ್ನನ್ನು ನಾನು ಅಭಿವ್ಯಕ್ತಪಡಿಸಲು ಇರುವ ಒಂದು ಮಾರ್ಗ ಎಂದು ಭಾವಿಸುತ್ತೇನೆ’’ ಎಂದು ಅವರು ಬರೆದುಕೊಂಡಿದ್ದಾರೆ.

ಅಲಿಜೇಹ್ ರೂಪದರ್ಶಿಯಾಗಿರುವ ವಿಡಿಯೊ ಇಲ್ಲಿದೆ:

View this post on Instagram

A post shared by ZAAVORR (@zaavorr)

ಅಲಿಜೇಹ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಆಗಾಗ ವಿಭಿನ್ನ ಶೈಲಿಯ ಫೋಟೋಗಳಿಗೆ ಪೋಸ್ ನೀಡಿ ಗಮನ ಸೆಳೆಯುತ್ತಿರುತ್ತಾರೆ. ಅಂತಹ ಕೆಲವು ಚಿತ್ರಗಳು ಇಲ್ಲಿವೆ.

View this post on Instagram

A post shared by ali (@alizehagnihotri)

View this post on Instagram

A post shared by ali (@alizehagnihotri)

ಕೆಲವು ಮೂಲಗಳ ಪ್ರಕಾರ, ಅಲಿಜೇಹ್ ಬಾಲಿವುಡ್​ಗೆ ಪ್ರವೇಶಿಸಲು ಸಿದ್ಧತೆ ನಡೆಸಿದ್ದಾರೆ. ಅದಕ್ಕಾಗಿ ಅವರು ನೃತ್ಯದ ಅಭ್ಯಾಸದಲ್ಲೂ ತೊಡಗಿದ್ದಾರೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಆದರೆ ಈ ಕುರಿತು ಇನ್ನಷ್ಟೇ ಮಾಹಿತಿ ತಿಳಿದುಬರಬೇಕಿದೆ.

ಇದನ್ನೂ ಓದಿ:

ಗೀತ ಗೋವಿಂದಂ ರೀತಿಯಲ್ಲೇ ಚಲಿಸುತ್ತಿರುವ ಬಸ್ಸಲ್ಲಿ ಯುವತಿಯನ್ನು ಚುಂಬಿಸಿದ ಯುವಕ; ಕೇಸ್ ದಾಖಲು

‘ನಾನು ಬ್ಯುಸಿಯಾಗಿರುತ್ತಿದ್ದೆ, ರಾಜ್ ಕುಂದ್ರಾ ಏನು ಮಾಡುತ್ತಿದ್ದರು ಎಂಬುದು ತಿಳಿದಿರಲಿಲ್ಲ’; ಪೊಲೀಸರ ಎದುರು ಶಿಲ್ಪಾ ಹೇಳಿಕೆ

(Salman Khan niece Alizeh Agnihotri took netizens attention after featuring in a jewelry commercial)

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ