AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಡಿಕಾನ್ ಉಡುಪಿನಲ್ಲಿರುವ ತನ್ನ ಫೋಟೋಗಳನ್ನು ಪೋಸ್ಟ್ ಮಾಡಿ ಪಡ್ಡೆಗಳ ಹೃದಯಬಡಿತ ತಪ್ಪಿಸಿದ್ದಾರೆ ನೊರಾ ಫತೇಹಿ!

ನೋರಾ ಫತೇಹಿ ಸದ್ಯಕ್ಕೆ ಟೊರೊಂಟೊದಲ್ಲಿದ್ದಾರೆ ಆದರೆ ಆಕೆಯ ಬಾಡಿಕಾನ್ ಉಡುಪುಗಳು ಆಕೆಯನ್ನು ಹಿಂಬಾಲಿಸುತ್ತಾ ಅಲ್ಲಿಗೂ ತಲುಪಿಬಿಟ್ಟಿವೆ. ಆಕೆ ಒಂದೇ ಶೈಲಿಯ ಡ್ರೆಸ್ ಅನ್ನು ಬೇರೆ ಬೇರೆ ಬಣ್ಣಗಳಲ್ಲಿ ಧರಿಸಿದ್ದಾರೆ. ಬಣ್ಣ ಯಾವುದೇ ಆಗಿರಲಿ, ಬಾಡಿಕಾನ್ ಔಟ್ಫಿಟ್ ಅವರ ದೇಹಕ್ಕೆ ಮತ್ತು ಸೌಂದರ್ಯಕ್ಕೆ ಬಹಳ ಚೆನ್ನಾಗಿ ಒಪ್ಪುತ್ತದೆ ಎನ್ನುದರಲ್ಲಿ ಎರಡು ಮಾತಿಲ್ಲ.

ಬಾಡಿಕಾನ್ ಉಡುಪಿನಲ್ಲಿರುವ ತನ್ನ ಫೋಟೋಗಳನ್ನು ಪೋಸ್ಟ್ ಮಾಡಿ ಪಡ್ಡೆಗಳ ಹೃದಯಬಡಿತ ತಪ್ಪಿಸಿದ್ದಾರೆ ನೊರಾ ಫತೇಹಿ!
ನೋರಾ ಫತೇಹಿ
TV9 Web
| Edited By: |

Updated on: Aug 23, 2021 | 10:40 PM

Share

ನೊರಾ ಫತೇಹಿ ಕೆನಡಾ ಮೂಲದವರಾದರೂ ಬಾಲಿವುಡ್​ನಲ್ಲಿ ಬಿಡುವಿಲ್ಲದಷ್ಟು ಸಕ್ರಿಯರಾಗಿದ್ದಾರೆ. ಇತ್ತೀಚಿಗೆ ರಿಲೀಸ್ ಆದ ‘ಭುಜ್: ದಿ ಪ್ರೈಡ್ ಅಫ್ ಇಂಡಿಯ’ ಚಿತ್ರದಲ್ಲಿ ಅವರ ಪರ್ಫಾರ್ಮನ್ಸ್ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಈ ಸಿನಿಮಾದಲ್ಲಿ ಅಜಯ ದೇವ್ಗನ್, ಸಂಜಯ ದತ್ ಮತ್ತು ಸೋನಾಕ್ಷಿ ಸಿನ್ಹಾ ಸಹ ಇದ್ದಾರೆ. ಎಂಟರ್ಟೇನ್ಮೆಂಟ್ ಪ್ರಪಂಚದಲ್ಲಿ ನೊರಾ ಒಬ್ಬ ಡ್ಯಾನ್ಸರ್ ಆಗಿಯೇ ಖ್ಯಾತಿ ಹೊಂದಿದವರು. ಆದರೆ ಇತ್ತೀಚಿನ ದಿನಗಳಲ್ಲಿ ಅವರು ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇಷ್ಟು ಹೇಳಿದರೆ ಅವರ ಕುರಿತಾದ ವಿಶ್ಲೇಷಣೆ ಅಥವಾ ವ್ಯಾಖ್ಯಾನ ಪೂರ್ಣವೆನಿಸದು. ನೊರಾ ಒಬ್ಬ ಫ್ಯಾಶನ್ ಐಕಾನ್ ಸಹ ಆಗಿದ್ದಾರೆ. ಬಾಡಿಕಾನ್ ಡ್ರೆಸ್ಗಳ ಬಗ್ಗೆ ಅವರಿಗಿರುವಷ್ಟು ಆಸಕ್ತಿ ಬೇರೆಯವರಿಗೆ ಇರಲಾರದು. ಗಮನಿಸಬೇಕಾದ ಸಂಗತಿಯೆಂದರೆ ಬಾಡಿಕಾನ್ ಉಡುಗೆ ಅವರಿಗೆ ಸೂಟ್ ಆಗುವ ಹಾಗೆ ಬೇರೆ ಬಾಲಿವುಡ್ ನಟಿಯರಿಗೆ ಆಗಲಾರದೇನೋ. ಇದನ್ನು ನಾವು ಹಾಗೆ ಸುಮ್ಮನೆ ಹೇಳುತ್ತಿಲ್ಲ. ಅದಕ್ಕೆ ಪುರಾವೆ ಇಲ್ಲಿದೆ.

ಇತ್ತೀಚಿನ ದಿನಗಳಲ್ಲಿ ನೋರಾ ಬಾಡಿಕಾನ್ ಉಡುಗೆ ಬಗ್ಗೆ ಜಾಸ್ತಿ ಅನ್ನುವಷ್ಟು ಕ್ರೇಜ್ ಬೆಳಸಿಕೊಂಡಿದ್ದಾರೆ. ಅವರ ಇನ್ಸ್ಟಾಗ್ರಾಮ್ ಗೆ ಅಕೌಂಟ್ಗೆ ಹೋಗಿ ತಡಕಾಡಿದರೆ ಅವರು ಇಂಥ ಡ್ರೆಸ್ನಲ್ಲಿ ಕಂಗೊಳಿಸುತ್ತಿರುವ ಹಲವು ಚಿತ್ರಗಳು ಸಿಗುತ್ತವೆ.

ಇದು ನಾವು ಹೇಳುತ್ತಿದ್ದೇವೆ ಅಂತಲ್ಲ, ನೀವು ಸಹ ಸಹಜವಾಗಿ ಅಂಗೀಕರಿಸುತ್ತೀರಿ. ನೋರಾ ಫತೇಹಿ ತಮ್ಮ ಇತ್ತೀಚಿನ ರಿಬ್ಬಡ್ ಬಾಡಿಕಾನ್ ಗೀಳು ಗಮನಿಸಿತ್ತಿದ್ದರೆ ಬೇಸಿಗೆಯ ದಿನಗಳನ್ನು ಮರಳಿ ತರುವ ಪ್ರಯತ್ನ ಮಾಡುತ್ತಿದ್ದಾರೆ ಅನಿಸದಿರದು. ಅದು ಅವರಿಗೆ ಇಷ್ಟವಾಗುವ ಹಾಗೆ ಪಡ್ಡೆಗಳಿಗೂ ಇಷ್ಟವಾಗುತ್ತಿದೆ! ಇಂಥ ಸುಂದರ ನಟಿಯನ್ನು ಇಷ್ಟು ಆಕರ್ಷಕ ಬಾಡಿಕಾನ್ ಡ್ರೆಸ್ನಲ್ಲಿ ನೋಡಲು ಯಾರು ತಾನೆ ಇಷ್ಟಪಡದಿರಲಾರರು!

View this post on Instagram

A post shared by Nora Fatehi (@norafatehi)

ನೋರಾ ಫತೇಹಿ ಸದ್ಯಕ್ಕೆ ಟೊರೊಂಟೊದಲ್ಲಿದ್ದಾರೆ ಆದರೆ ಆಕೆಯ ಬಾಡಿಕಾನ್ ಉಡುಪುಗಳು ಆಕೆಯನ್ನು ಹಿಂಬಾಲಿಸುತ್ತಾ ಅಲ್ಲಿಗೂ ತಲುಪಿಬಿಟ್ಟಿವೆ. ಆಕೆ ಒಂದೇ ಶೈಲಿಯ ಡ್ರೆಸ್ ಅನ್ನು ಬೇರೆ ಬೇರೆ ಬಣ್ಣಗಳಲ್ಲಿ ಧರಿಸಿದ್ದಾರೆ. ಬಣ್ಣ ಯಾವುದೇ ಆಗಿರಲಿ, ಬಾಡಿಕಾನ್ ಔಟ್ಫಿಟ್ ಅವರ ದೇಹಕ್ಕೆ ಮತ್ತು ಸೌಂದರ್ಯಕ್ಕೆ ಬಹಳ ಚೆನ್ನಾಗಿ ಒಪ್ಪುತ್ತದೆ ಎನ್ನುದರಲ್ಲಿ ಎರಡು ಮಾತಿಲ್ಲ.

ಈ ಚಿತ್ರ ನೋಡಿ. ಆಕೆ ಪ್ರಕಾಶಮಾನವಾದ ಕ್ಯಾನರಿ ಹಳದಿ ರಿಬ್ಬಡ್ ಬಾಡಿಕಾನ್ ಮಿಡಿ ಉಡುಗೆ ಧರಿಸಿ ಅದರಂತೆಯೇ ಮಿರಮಿರನೆ ಹೊಳೆಯುತ್ತಿರುವ ಕಿತ್ತಳೆ ಹರ್ಮೆಸ್ ಬಿರ್ಕಿನ್ ಕೈಚೀಲದೊಂದಿಗೆ ಲಕಲಕ ಮಿಂಚುತ್ತಾ ಪಡ್ಡೆಗಳ ಹೃದಯಬಡಿತ ತಪ್ಪುವಂತೆ ಮಾಡಿದ್ದಾರೆ.

ಅಂದಹಾಗೆ ಈ ಉಡುಗೆಯ ಬೆಲೆ ಎಷ್ಟಿರಬಹುದು ಅಂತ ಊಹಿಸಬಲ್ಲಿರಾ? 10 ಲಕ್ಷ ರೂಪಾಯಿಗಳು! ಆಕೆಯ ಬಣ್ಣಬಣ್ಣದ ಲೌಬೌಟಿನ್ ಹೀಲ್ಸ್ ಬೆಲೆ ರೂ. 1 ಲಕ್ಷ!!

ಕಳೆದ ಶನಿವಾರದಂದು ಆಕೆ ಈ ಚಿತ್ರಗಳನ್ನು ಶೇರ್ ಮಾಡಿದ್ದಾರೆ. ಅಕೆ ಸೌಂದರ್ಯದ ಖನಿ ಅನ್ನೋದು ನಿಸ್ಸಂಶಯ. ನಮಗೆ ಲಭ್ಯವಾಗಿರುವ ಮೂಲಗಳ ಪ್ರಕಾರ ಆಕೆ ತನ್ನ ಬಿಡುವಿನ ಸಮಯವನ್ನು ಟೊರೊಂಟೋನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

ನೋರಾ ತನ್ನ ಪೋಸ್ಟ್‌ಗೆ ಶೀರ್ಷಿಕೆ ನೀಡುತ್ತಾ, ‘ನಾನು ಈ ಡ್ರೆಸ್ ಅನ್ನು ಜೇನ್ ಮತ್ತು ಫಿಂಚ್‌ ಅವರ ನೆರವಿನಿಂದ ಉತ್ತಮಗೊಳಿಸಿದೆ ..ಈ ಕೆಲಸ ಸುಲಭವಾಗಿರಲಿಲ್ಲ,’ ಅಂತ ಬರೆದುಕೊಂಡಿದ್ದಾರೆ.

ಬಾಡಿಕಾನ್ ಉಡುಪುಗಳು ಮಾಡೆಲ್ ಮತ್ತು ತಾರೆಯರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿವೆ ಅಂತ ಹೇಳಲಾಗುತ್ತಿದೆ. ನೋರಾ ಖುದ್ದು ಈ ಡ್ರೆಸ್ಗೆ ವಿಶೇಷ ಸ್ಥಾನ ಕಲ್ಪಿಸಲಿದ್ದಾರೇನೋ ಅಂತ ಭಾಸವಾಗುತ್ತಿದೆ. ಬೇರೆ ನಟಿಯರೂ ಇದನ್ನು ಧರಿಸಿದ್ದಾರೆ, ಇಲ್ಲವಂತೇನಿಲ್ಲ. ಆದರೆ ಈ ಉಡುಗೆ ನೋರಾಗೆ ಫಿಟ್ ಆದಂತೆ ಅವರಿಗೆ ಆಗಿಲ್ಲ. ಅವರೆಲ್ಲ ಈ ಕಾಮೆಂಟ್ನಿಂದ ಬೇಸರಿಸಿಕೊಂಡು ಮುನಿಸಿಕೊಂಡರೂ ಚಿಂತೆಯಿಲ್ಲ. ಇದ್ದುದ್ದನ್ನು ಇದ್ದ ಹಾಗೆ ಹೇಳಬೇಕು ತಾನೆ?

View this post on Instagram

A post shared by Nora Fatehi (@norafatehi)

ಇದನ್ನೂ ಓದಿ:  Nora Fatehi: ತೌಕ್ತೆ ಚಂಡಮಾರುತದಲ್ಲೂ ಹಾಟ್​​ ಬೆಡಗಿಯ ಡ್ಯಾನ್ಸ್​ ಅನುಕರಿಸಿ ವೈರಲ್​ ಆದ ಯುವಕ

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?