Nora Fatehi: ತೌಕ್ತೆ ಚಂಡಮಾರುತದಲ್ಲೂ ಹಾಟ್​​ ಬೆಡಗಿಯ ಡ್ಯಾನ್ಸ್​ ಅನುಕರಿಸಿ ವೈರಲ್​ ಆದ ಯುವಕ

ತೌಕ್ತೆ ಚಂಡಮಾರುತದಿಂದಾಗಿ ಸುರಿದ ಭಾರಿ ಮಳೆಯ ಪರಿಣಾಮ ರಸ್ತೆಯ ತುಂಬೆಲ್ಲ ಪ್ರವಾಹದಂತಹ ವಾತಾವರಣ ಸೃಷ್ಟಿಯಾಗಿತ್ತು. ಅದರ ಮೇಲೆ ರಟ್ಟಿನ ಸಹಾಯದಿಂದ ತೇಲುತ್ತಿರುವ ಯುವಕನೊಬ್ಬ ಬಾಲಿವುಡ್​ನ ಜನಪ್ರಿಯ ಗೀತೆಯ ಸ್ಟೆಪ್​ ಹಾಕಿದ್ದಾನೆ.

Nora Fatehi: ತೌಕ್ತೆ ಚಂಡಮಾರುತದಲ್ಲೂ ಹಾಟ್​​ ಬೆಡಗಿಯ ಡ್ಯಾನ್ಸ್​ ಅನುಕರಿಸಿ ವೈರಲ್​ ಆದ ಯುವಕ
ನೋರಾ ಫತೇಹಿ - ವೈರಲ್​ ವಿಡಿಯೋ
Madan Kumar

|

May 21, 2021 | 11:45 AM

ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಭಾರತದ ಹಲವು ರಾಜ್ಯಗಳು ಭಾರೀ ತೊಂದರೆ ಅನುಭವಿಸಿವೆ. ಮೊದಲು ಕೇರಳ, ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಆರ್ಭಟಿಸಿದ ಈ ಚಂಡಮಾರುತ ನಂತರ ಮಹಾರಾಷ್ಟ್ರದ ಕಡೆಗೆ ತಿರುಗಿತ್ತು. ಅಲ್ಲಿ ಈ ಚಂಡಮಾರುತ ಸಾಕಷ್ಟು ಹಾನಿ ಉಂಟು ಮಾಡಿದೆ. ಮುಂಬೈನಲ್ಲಿ ಸಹ ತೌಕ್ತೆ ಅಬ್ಬರ ಹೆಚ್ಚಿತ್ತು. ಈ ಚಂಡಮಾರುತಕ್ಕೆ ಮಹಾರಾಷ್ಟ್ರದಲ್ಲಿ ಈಗಾಗಲೇ ಅನೇಕರು ಸಾವನ್ನಪ್ಪಿದ್ದಾರೆ. 9 ಜನರು ಗಾಯಗೊಂಡಿದ್ದಾರೆ. ಅನೇಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವ ಕೆಲಸವನ್ನು ಸರ್ಕಾರ ಮಾಡಿದೆ. ಇಂಥ ಭೀಕರತೆ ನಡುವೆಯೂ ಒಂದು ಫನ್ನಿ ವಿಡಿಯೋ ವೈರಲ್ ಆಗಿದೆ.

ಚಂಡಮಾರುತದಿಂದಾಗಿ ಸುರಿದ ಭಾರಿ ಮಳೆಯ ಕಾರಣ ರಸ್ತೆಯ ತುಂಬೆಲ್ಲ ಪ್ರವಾಹದಂತಹ ವಾತಾವರಣ ಸೃಷ್ಟಿಯಾಗಿತ್ತು. ಅದರ ಮೇಲೆ ರಟ್ಟಿನ ಸಹಾಯದಿಂದ ತೇಲುತ್ತಿರುವ ಯುವಕನೊಬ್ಬ ಬಾಲಿವುಡ್​ನ ಜನಪ್ರಿಯ ಗೀತೆಯ ಸ್ಟೆಪ್​ ಹಾಕಿದ್ದಾನೆ. ‘ಸ್ಟ್ರೀಟ್​ ಡ್ಯಾನ್ಸರ್​’ ಸಿನಿಮಾದ ‘ಹಾಯ್​ ಗರ್ಮಿ..’ ಹಾಡಿನ ರೀತಿಯಲ್ಲಿ ಆತ ಡ್ಯಾನ್ಸ್​ ಮಾಡಿದ್ದಾನೆ. ಈ ತಮಾಷೆಯ ವಿಡಿಯೋವನ್ನು ಸೆಲೆಬ್ರಿಟಿಗಳು ಶೇರ್​ ಮಾಡಿಕೊಳ್ಳುತ್ತಿದ್ದಾರೆ.

ಸ್ಟ್ರೀಟ್​​ ಡ್ಯಾನ್ಸರ್​ ಸಿನಿಮಾದಲ್ಲಿ ವರುಣ್​ ಧವನ್​, ಶ್ರದ್ಧಾ ಕಪೂರ್​ ಹಾಗೂ ನೋರಾ ಫತೇಹಿ ಮುಖ್ಯ ಭೂಮಿಕೆ ನಿಭಾಯಿಸಿದ್ದರು. ನೃತ್ಯ ಪ್ರಧಾನ ಕಥೆ ಹೊಂದಿದ್ದ ಆ ಸಿನಿಮಾದಲ್ಲಿ ನೋರಾ ಫತೇಹಿ ಹೆಜ್ಜೆ ಹಾಕಿದ್ದ ‘ಹಾಯ್​ ಗರ್ಮಿ..’ ಹಾಡು ಸಿಕ್ಕಾಪಟ್ಟೆ ಫೇಮಸ್​ ಆಯಿತು. ಅದೇ ಹಾಡಿನ ಒಂದು ಸ್ಟೆಪ್​​ ಅನ್ನು ಈ ಯುವಕ ಹಾಕಿದ್ದಾನೆ. ತೌಕ್ತೆ ಚಂಡಮಾರುತದ ಭೀಕರತೆಯ ನಡುವೆಯೂ ಆತನಿಗೆ ಇರುವ ಬಾಲಿವುಡ್​ ಕ್ರೇಜ್​ ಕಂಡು ನೆಟ್ಟಿಗರು ಅಚ್ಚರಿ ಪಡುತ್ತಿದ್ದಾರೆ.

‘ಸ್ಟ್ರೀಟ್​ ಡ್ಯಾನ್ಸರ್​’ ಚಿತ್ರದ ನಿರ್ದೇಶಕ ರೆಮೋ ಡಿಸೋಜಾ ಹಾಗೂ ನಟಿ-ಡ್ಯಾನ್ಸರ್​ ನೋರಾ ಫತೇಹಿ ಕೂಡ ಈ ಯುವಕನ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ಮೂಲಕ ಅದು ಹೆಚ್ಚು ವೈರಲ್​ ಆಗಿದೆ. ಈ ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಹಿಂದಿ ಬಿಗ್​ ಬಾಸ್​ ವೇದಿಕೆಗೆ ತೆರಳಿತ್ತು. ಆಗ ಬಿಗ್​ ಬಾಸ್​ ನಿರೂಪಕ ಸಲ್ಮಾನ್​ ಖಾನ್​ ಕೂಡ ನೋರಾ ಫತೇಹಿ ರೀತಿ ಸ್ಟೆಪ್​ ಹಾಕಲು ಪ್ರಯತ್ನಪಟ್ಟಿದ್ದರು. ಆದರೆ ಸಾಧ್ಯವಾಗಿರಲಿಲ್ಲ.

View this post on Instagram

A post shared by dhiraj (@shady___dj_09)

ಸದ್ಯ ನೋರಾ ಫತೇಹಿ ಬಾಲಿವುಡ್​ನ ನಂಬರ್​ ಒನ್​ ಐಟಂ ಡ್ಯಾನ್ಸರ್​ ಆಗಿ ಮುಂಚುತ್ತಿದ್ದಾರೆ. ಓ ಸಾಕಿ ಸಾಕಿ, ಡಿಲ್​ ಬರ್​ ದಿಲ್​ ಬರ್​, ಕಮರಿಯಾ, ಹಾಯ್​ ಗರ್ಮಿ ಮುಂತಾದ ಹಾಡುಗಳಿಂದ ಅವರ ಜನಪ್ರಿಯತೆ ಹೆಚ್ಚಿದೆ. ಮೂಲತಃ ಕೆನಡಾದವರಾದ ಅವರು ಬಾಲಿವುಡ್​ನಲ್ಲಿ ಮಿಂಚುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಕೋಟ್ಯಂತರ ಅಭಿಮಾನಿಗಳು ಅವರನ್ನು ಫಾಲೋ ಮಾಡುತ್ತಿದ್ದಾರೆ.

ಇದನ್ನೂ ಓದಿ:

ನಿಯಾನ್ ಕಿತ್ತಳೆ ಬಣ್ಣದ ಉಡುಪಿನಲ್ಲಿ ಮಿಂಚಿದ ಬಾಲಿವುಡ್ ನೃತ್ಯಪಟು ನೋರಾ ಫತೇಹಿ

ಹಿಂದಿ ಭಾಷಿಕರಿಂದ ಅವಮಾನಕ್ಕೆ ಒಳಗಾಗಿ ಕಣ್ಣೀರು ಹಾಕಿದ್ದ ಈ ನಟಿ ಇಂದು ಬಾಲಿವುಡ್​ನ ಸ್ಟಾರ್​ ಕಲಾವಿದೆ!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada