ಸಮಂತಾ-ನಾಗ ಚೈತನ್ಯ ನಡುವೆ ಎಷ್ಟೊಂದು ಅಗಾಧ ಪ್ರೀತಿ ಇದೆ ಗೊತ್ತಾ? ಇಲ್ಲಿದೆ ಸಾಕ್ಷ್ಯ

ಸಮಂತಾ ಹಾಗೂ ನಾಗ ಚೈತನ್ಯ ಪ್ರೀತಿಸಿ ಮದುವೆ ಆದವರು. ಇಬ್ಬರೂ ಚಿತ್ರರಂಗದಲ್ಲಿ ತೊಡಗಿಕೊಂಡಿರುವವರೇ. ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದಾರೆ ಕೂಡ. ಈ ವೇಳೆ ಪ್ರೀತಿ ಮೂಡಿದೆ. 2017ರಲ್ಲಿ ಇಬ್ಬರೂ ಹಸೆಮಣೆ ಏರಿದರು.

ಸಮಂತಾ-ನಾಗ ಚೈತನ್ಯ ನಡುವೆ ಎಷ್ಟೊಂದು ಅಗಾಧ ಪ್ರೀತಿ ಇದೆ ಗೊತ್ತಾ? ಇಲ್ಲಿದೆ ಸಾಕ್ಷ್ಯ
ಸಮಂತಾ-ನಾಗ ಚೈತನ್ಯ ನಡುವೆ ಎಷ್ಟೊಂದು ಅಗಾಧ ಪ್ರೀತಿ ಇದೆ ಗೊತ್ತಾ? ಇಲ್ಲಿದೆ ಸಾಕ್ಷ್ಯ

ಸಮಂತಾ ಅಕ್ಕಿನೇನಿ ಹಾಗೂ ನಾಗ ಚೈತನ್ಯ ನಡುವೆ ಯಾವುದೂ ಸರಿ ಇಲ್ಲ ಎಂಬುದು ಗಾಸಿಪ್​ ಅಂಗಳದ ಮಾತು. ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಇದ್ದ ಅಕ್ಕಿನೇನಿ ಸರ್​ನೇಮ್​ಅನ್ನು ಸಮಂತಾ ತೆಗೆದು ಹಾಕಿದಾಗಿನಿಂದ ಈ ಚರ್ಚೆ ಆರಂಭವಾಗಿದೆ. ಆದರೆ, ಇಲ್ಲಿವರೆಗೆ ಅಕ್ಕಿನೇನಿ ಕುಟುಂಬದಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಹೀಗಾಗಿ ಅವರ ಬಗ್ಗೆ ನಾನಾ ಸುದ್ದಿಗಳನ್ನು ಹರಿಬಿಡಲಾಗುತ್ತಿದೆ.

ಸಮಂತಾ ಹಾಗೂ ನಾಗ ಚೈತನ್ಯ ಪ್ರೀತಿಸಿ ಮದುವೆ ಆದವರು. ಇಬ್ಬರೂ ಚಿತ್ರರಂಗದಲ್ಲಿ ತೊಡಗಿಕೊಂಡಿರುವವರೇ. ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದಾರೆ ಕೂಡ. ಈ ವೇಳೆ ಪ್ರೀತಿ ಮೂಡಿದೆ. 2017ರಲ್ಲಿ ಇಬ್ಬರೂ ಹಸೆಮಣೆ ಏರಿದರು. ಹಿಂದು ಹಾಗೂ ಕ್ರೈಸ್ತ ಸಂಪ್ರದಾಯದಂತೆ ಮದುವೆ ಆದರು. ಈಗ ಇವರ ಸಂಸಾರದಲ್ಲಿ ಯಾವುದೂ ಸರಿ ಇಲ್ಲ ಎನ್ನುವ ಮಾತನ್ನು ಅನೇಕರು ಒಪ್ಪುತ್ತಿಲ್ಲ. ಸಮಂತಾ ಮತ್ತು ನಾಗ ಚೈತನ್ಯ ನಡುವೆ ಎಷ್ಟು ಅಗಾಧ ಪ್ರೀತಿ ಇದೆ ಎಂಬುದಕ್ಕೆ ಇಲ್ಲಿದೆ ಕೆಲವು ಘಟನೆಗಳು.

ಫಾರ್ಮಲ್​ ಡ್ರೆಸ್​ನಲ್ಲಿ ಚಾಯ್, ಹೊಗಳಿದ್ದ ಸಮಂತಾ

ಕಳೆದ ವರ್ಷ ನಡೆದ ರಾನಾ ದಗ್ಗುಬಾಟಿ ರೋಕಾ ಕಾರ್ಯಕ್ರಮದಲ್ಲಿ ನಾಗ ಚೈತನ್ಯ ಫಾರ್ಮಲ್​ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು. ಈ ಫೋಟೋವನ್ನು ಸಮಂತಾ ಪೋಸ್ಟ್​ ಮಾಡಿದ್ದರು. ಅಲ್ಲದೆ, ನಾಗ ಚೈತನ್ಯ ಅವರನ್ನು ಬಾಯ್ತುಂಬ ಹೊಗಳಿದ್ದರು. ಈ ಡ್ರೆಸ್​ನಲ್ಲಿ ಪತಿ ಅದ್ಭುತವಾಗಿ ಕಾಣುತ್ತಾರೆ ಎಂದು ಮನಸಾರೆ ಮಾತನಾಡಿದ್ದರು.

ನಾಗ ಚೈತನ್ಯಗೆ ಧನ್ಯವಾದ

ಮದುವೆ ಫೋಟೋ ಹಂಚಿಕೊಂಡಿದ್ದ ಸಮಂತಾ, ನಾಗ ಚೈತನ್ಯಗೆ ಧನ್ಯವಾದ ಹೇಳಿದ್ದರು. ನನ್ನ ಜೀವನವನ್ನು ಇಷ್ಟು ಸುಂದರವಾಗಿ ಮಾಡಿದ್ದಕ್ಕೆ ನಿಜಕ್ಕೂ ಥ್ಯಾಂಕ್​ ಯೂ ಎಂದಿದ್ದರು.

ಪ್ರೀತಿಯ ಬರ್ತ್​ಡೇ ವಿಶ್

ನಾಗ ಚೈತನ್ಯ ಅವರ ಜನ್ಮದಿನವನ್ನು ಸಮಂತಾ ವಿಶೇಷವಾಗಿ ಆಚರಿಸಿದ್ದರು. ಈ ಬಗ್ಗೆ ಭಾವನಾತ್ಮಕ ಪೋಸ್ಟ್​ ಹಾಕಿದ್ದರು ಸಮಂತಾ. ಈ ಜೋಡಿಯನ್ನು ನೋಡಿ ಅಭಿಮಾನಿಗಳು ನೂರು ಕಾಲ ಹೀಗೆ ಬಾಳಿ ಎಂದು ಹರಸಿದ್ದರು.

ನನ್ನ ಜೀವನದ ಅತ್ಯುತ್ತಮ ನಿರ್ಧಾರ ಎಂದಿದ್ದ ಸಮಂತಾ

ನಾಗ ಚೈತನ್ಯ ಅವರನ್ನು ಮದುವೆ ಆಗಿದ್ದು ತಾವು ಮಾಡಿದ ಅತ್ಯುತ್ತಮ ನಿರ್ಧಾರ ಎಂದು ಸಮಂತಾ ಹೇಳಿಕೊಂಡಿದ್ದರು. ಇದು ಅವರ ಪ್ರೀತಿಗೆ ಹಿಡಿದ ಕೈಗನ್ನಡಿ ಆಗಿದೆ.

‘ರಾಣಿಯಂತೆ ನೋಡಿಕೊಳ್ಳುತ್ತಾನೆ’

ನಾಗ ಚೈತನ್ಯ ನನ್ನನ್ನು ರಾಣಿಯಂತೆ ನೋಡಿಕೊಳ್ಳುತ್ತಾನೆ ಎಂದು ಸಮಂತಾ ಹೇಳಿಕೊಂಡಿದ್ದರು. ಇದು ಅಭಿಮಾನಿಗಳಿಗೂ ಅನೇಕ ಬಾರಿ ಗೊತ್ತಾಗಿದೆ. ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಸಮಂತಾ ಅವರ ಬಗ್ಗೆ ನಾಗ ಚೈತನ್ಯ ಸಾಕಷ್ಟು ಪ್ರೀತಿ ಮತ್ತು ಕಾಳಜಿ ತೋರುತ್ತಿದ್ದರು.

ಇದನ್ನೂ ಓದಿ: ಸಾಯಿ ಪಲ್ಲವಿ-ನಾಗ ಚೈತನ್ಯ ಲವ್​ ಸ್ಟೋರಿ ಬಗ್ಗೆ ಮೌನ ಮುರಿದ ಸಮಂತಾ; ಡಿವೋರ್ಸ್​ ವದಂತಿಗೆ ಬ್ರೇಕ್​ 

ಸಮಂತಾ ಬಗ್ಗೆ ಏನೂ ಪ್ರಶ್ನಿಸಬೇಡಿ; ಮಾಧ್ಯಮಗಳಿಗೆ ನಾಗ ಚೈತನ್ಯ ಖಡಕ್​ ಎಚ್ಚರಿಕೆ?

 

 

Click on your DTH Provider to Add TV9 Kannada