ಉಪೇಂದ್ರ ಹುಟ್ಟುಹಬ್ಬಕ್ಕೆ ಒಂದು ಬ್ಯಾಡ್​ ನ್ಯೂಸ್​, ಇನ್ನೊಂದು ಗುಡ್​ ನ್ಯೂಸ್​; ಇಲ್ಲಿದೆ ಉಪ್ಪಿಯ ಮುಖ್ಯ ಸಂದೇಶ

ಸೆ.18ರಂದು ಉಪೇಂದ್ರ ಜನ್ಮದಿನ. ಅಂದು ನೆಚ್ಚಿನ ನಟನ ಮನೆಯ ಬಳಿ ತೆರಳಿ, ಅವರನ್ನು ಭೇಟಿ ಮಾಡಿ ಅದ್ದೂರಿಯಾಗಿ ಹುಟ್ಟುಹಬ್ಬ ಸೆಲೆಬ್ರೇಟ್​ ಮಾಡಬೇಕು ಎಂದುಕೊಂಡವರಿಗೆ ನಿರಾಸೆ ಆಗಿದೆ.

ಉಪೇಂದ್ರ ಹುಟ್ಟುಹಬ್ಬಕ್ಕೆ ಒಂದು ಬ್ಯಾಡ್​ ನ್ಯೂಸ್​, ಇನ್ನೊಂದು ಗುಡ್​ ನ್ಯೂಸ್​; ಇಲ್ಲಿದೆ ಉಪ್ಪಿಯ ಮುಖ್ಯ ಸಂದೇಶ
ಉಪೇಂದ್ರ

‘ರಿಯಲ್​ ಸ್ಟಾರ್​’ ಉಪೇಂದ್ರ ಅವರ ಜನ್ಮದಿನವನ್ನು (ಸೆ.18) ಆಚರಿಸಲು ಅಭಿಮಾನಿಗಳೆಲ್ಲ ಕಾದು ಕುಳಿತಿದ್ದಾರೆ. ಒಂದೆಡೆ ಸಿನಿಮಾ, ಇನ್ನೊಂದೆಡೆ ಪ್ರಜಾಕೀಯ ಎನ್ನುತ್ತಿರುವ ಉಪೇಂದ್ರ, ಈ ಎರಡೂ ಕ್ಷೇತ್ರದಲ್ಲಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈ ವರ್ಷದ ಉಪ್ಪಿ ಹುಟ್ಟುಹಬ್ಬ ನಿಜಕ್ಕೂ ಸ್ಪೆಷಲ್ ಆಗಿರಲಿದೆ. ಅದಕ್ಕೆ ಕಾರಣಗಳು ಹಲವು. ಆದರೆ ಜನ್ಮದಿನಕ್ಕೂ ಮುನ್ನವೇ ತಮ್ಮ ಅಭಿಮಾನಿ ಬಳಗಕ್ಕೆ ಉಪೇಂದ್ರ ಒಂದು ನಿರಾಸೆಯ ಸುದ್ದಿ ನೀಡಿದ್ದಾರೆ. ಫ್ಯಾನ್ಸ್​ ಜೊತೆ ಸೇರಿ ಬರ್ತ್​​ಡೇ ಆಚರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಮುಂಚಿತವಾಗಿಯೇ ತಿಳಿಸಿದ್ದಾರೆ. ಇದು ಸದ್ಯದ ಬ್ಯಾಡ್​ ನ್ಯೂಸ್​.

‘ಅಭಿಮಾನಿಗಳ ದಿನ, 18-09-2021. ಪ್ರತಿವರ್ಷ ಅಭಿಮಾನಿಗಳೊಂದಿಗೆ ಆಚರಿಸುತ್ತಿದ್ದ ಅಭಿಮಾನಿಗಳ ದಿನದ ಸಂಭ್ರಮ ಈ ವರ್ಷವೂ ಆಚರಿಸಲು ಆಗದಿರುವುದಕ್ಕೆ ವಿಷಾದಿಸುತ್ತೇನೆ. ನಾನು ಬೆಂಗಳೂರಿನಲ್ಲಿ ಇಲ್ಲದಿರುವ ಕಾರಣ ಎಲ್ಲಾ ಅಭಿಮಾನಿಗಳು ಅವರವರು ಇರುವ ಕಡೆಯೇ ಸರಳವಾಗಿ ಈ ದಿನವನ್ನು ಆಚರಿಸಿ ಹಾರೈಸಬೇಕಾಗಿ ಬಯಸುತ್ತೇನೆ’ ಎಂದು ಸೋಶಿಯಲ್​ ಮೀಡಿಯಾದಲ್ಲಿ ಉಪ್ಪಿ ಪೋಸ್ಟ್​ ಮಾಡಿದ್ದಾರೆ. ಸದ್ಯ ಕೊರೊನಾ ಹಾವಳಿ ಮುಗಿದಿಲ್ಲ. ಹಾಗಾಗಿ ಅವರು ಎಲ್ಲರ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಇನ್ನು, ಗುಡ್​ ನ್ಯೂಸ್​ ಏನು ಎಂಬ ಬಗ್ಗೆ ಈಗಾಗಲೇ ಸುಳಿವು ಸಿಕ್ಕಿದೆ. ಉಪೇಂದ್ರ ನಿರ್ದೇಶನ ಮಾಡಲಿರುವ ಹೊಸ ಸಿನಿಮಾದ ಟೈಟಲ್​ ಅಧಿಕೃತವಾಗಿ ಘೋಷಣೆ ಆಗಲಿದೆ. ಒಂದೆರಡು ದಿನಗಳಿಂದ ಈಚೆಗೆ ಟೈಟಲ್​ ಪೋಸ್ಟರ್​ ಲೀಕ್ ಆಗಿರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಅದರ ಬಗ್ಗೆ ಹುಟ್ಟುಹಬ್ಬದ ದಿನ ಉಪೇಂದ್ರ ಅವರಿಂದ ನಿಖರ ಮಾಹಿತಿ ಹೊರಬೀಳಲಿದೆ. ಆದ್ದರಿಂದ ಸೆ.18ಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.

‘ರಿಯಲ್​ ಸ್ಟಾರ್​’ ನಿರ್ದೇಶನ ಮಾಡುತ್ತಾರೆ ಎಂದರೆ ಅಭಿಮಾನಿಗಳ ಮನದಲ್ಲಿ ಬೆಟ್ಟದಷ್ಟು ನಿರೀಕ್ಷೆ ಸಹಜವಾಗಿಯೇ ನಿರ್ಮಾಣ ಆಗುತ್ತದೆ. ಈ ಹಿಂದಿನ ಎ, ಉಪೇಂದ್ರ, ಸೂಪರ್​, ಉಪ್ಪಿ 2, ಓಂ, ಶ್​ ಮುಂತಾದ ಸಿನಿಮಾಗಳ ಮೂಲಕ ಅವರು ಅಂಥ ಛಾಪು ಮೂಡಿಸಿದ್ದಾರೆ. ಅವರ ಬತ್ತಳಿಕೆಯಿಂದ ಬರುವ ಮುಂದಿನ ಸಿನಿಮಾ ಹೇಗಿರಬಹುದು ಎಂಬ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆ ಮನೆ ಮಾಡಿದೆ.

ಇದನ್ನೂ ಓದಿ:

Real Star Upendra: ಉಪೇಂದ್ರ ನಿರ್ದೇಶನದ ಹೊಸ ಚಿತ್ರದ ಪೋಸ್ಟರ್ ಲೀಕ್; ಚಿತ್ರದ ಟೈಟಲ್ ಏನು?

ಪ್ರಜಾಕೀಯದ ಹೈಕಮಾಂಡ್​ ಯಾರು ಎಂಬುದನ್ನು ಬಹಿರಂಗಪಡಿಸಿದ ಉಪೇಂದ್ರ

Read Full Article

Click on your DTH Provider to Add TV9 Kannada