Vishnuvardhan Birthday: ‘ಕೊಟ್ರೇಶಿ ಕನಸು’ ಚಿತ್ರದ ಅತಿಥಿ ಪಾತ್ರಕ್ಕೆ ವಿಷ್ಣು ಪಡೆದ ಸಂಭಾವನೆ ಎಷ್ಟು?

Nagathihalli Chandrashekhar: ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಅವರು ‘ಕೊಟ್ರೇಶಿ ಕನಸು’ ಚಿತ್ರದಲ್ಲಿ ವಿಷ್ಣುವರ್ಧನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡ ಸಂದರ್ಭದ ಘಟನೆಗಳನ್ನು ಟಿವಿ9ನೊಂದಿಗೆ ಮೆಲುಕು ಹಾಕಿದ್ದಾರೆ.

TV9kannada Web Team

| Edited By: shivaprasad.hs

Sep 18, 2021 | 3:31 PM

ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಕನ್ನಡ ಚಿತ್ರರಂಗದಲ್ಲಿ ವೈಶಿಷ್ಟ್ಯಪೂರ್ಣ ಸಿನಿಮಾಗಳಿಂದ ಖ್ಯಾತಿ ಗಳಿಸಿದವರು. ಕನ್ನಡ ಚಿತ್ರರಂಗದ ದಂತಕತೆಗಳಲ್ಲಿ ಒಬ್ಬರಾಗಿರುವ ಡಾ.ವಿಷ್ಣುವರ್ಧನ್ ಅವರ ಜನ್ಮದಿನದ ಪ್ರಯುಕ್ತ ಅವರು, ವಿಷ್ಣು ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಈ ವೇಳೆ ಅವರು ‘ಕೊಟ್ರೇಶಿ ಕನಸು’ ಚಿತ್ರದಲ್ಲಿ ವಿಷ್ಣುವರ್ಧನ್ ಅತಿಥಿ ಪಾತ್ರ ನಿರ್ವಹಿಸಿದ್ದನ್ನು ಉಲ್ಲೇಖಿಸಿದ್ದಾರೆ. ಅತಿಥಿ ಪಾತ್ರವೆಂದರೆ ಯಾವುದೇ ಸಂಭಾವನೆಯನ್ನು ಪಡೆಯದೆಯೇ ಪಾತ್ರವನ್ನು ನಿರ್ವಹಿಸುವುದು. ಅದಕ್ಕೆ ಒಪ್ಪಿಕೊಂಡು ಆ ಪಾತ್ರ ನಿರ್ವಹಿಸಿದ ನಂತರ ವಿಷ್ಣುವರ್ಧನ್ ತಮ್ಮ ಹೆಸರನ್ನು ಯಾವ ಪೋಸ್ಟರ್​ಗಳಲ್ಲೂ ಬಳಸಬಾರದು. ಚಿತ್ರ ನೋಡಿದ ಪ್ರೇಕ್ಷಕರಿಗೆ ಒಂದು ಅಚ್ಚರಿಯಾಗಿ ನನ್ನ ಪಾತ್ರ ಕಾಣಿಸಿಕೊಳ್ಳಲಿ ಎಂದು ಹೇಳಿದ್ದರಂತೆ. ವಿಷ್ಣುವರ್ಧನ್ ಯಾಕೆ ಹಾಗೆ ಹೇಳಿದ್ದರು? ನಂತರ ಏನಾಯಿತು? ಈ ಎಲ್ಲಾ ಮಾಹಿತಿಗಳನ್ನು ಟಿವಿ9ನೊಂದಿಗೆ ನಾಗತಿಹಳ್ಳಿಯವರು ಹಂಚಿಕೊಂಡಿದ್ದಾರೆ.

ವಿಡಿಯೊಗೆ ಇಲ್ಲಿ ಕ್ಲಿಕ್ ಮಾಡಿ: ‘ಕೊಟ್ರೇಶಿ ಕನಸಿನಲ್ಲಿ ವಿಷ್ಣು ಅತಿಥಿ ಪಾತ್ರದ ಕುರಿತು ನಾಗತಿಹಳ್ಳಿ ಮೆಲುಕು’

ಇದನ್ನೂ ಓದಿ:

Vishnuvardhan Birthday: ವಿಷ್ಣುವರ್ಧನ್ ಕುರಿತ ಅಪರೂಪದ ಸಂಗತಿಗಳು ಹಾಗೂ ಅವರು ಪಡೆದ ಪ್ರಶಸ್ತಿಗಳ ವಿವರ ಇಲ್ಲಿವೆ

ವಿಷ್ಣುವರ್ಧನ್ ಜನ್ಮದಿನ: ಎಂದೂ ಮರೆಯಲಾಗದ ವಿಷ್ಣು ದಾದಾಗೆ​ ಸೆಲೆಬ್ರಿಟಿಗಳು ವಿಶ್​ ಮಾಡ್ತಿರೋದು ಹೀಗೆ..

(Nagathihalli Chandrashekhar opens up about Vishnuvardhan in Kotreshi Kanasu)

Follow us on

Click on your DTH Provider to Add TV9 Kannada