Vishnuvardhan Birthday: ವಿಷ್ಣುವರ್ಧನ್ ಕುರಿತ ಅಪರೂಪದ ಸಂಗತಿಗಳು ಹಾಗೂ ಅವರು ಪಡೆದ ಪ್ರಶಸ್ತಿಗಳ ವಿವರ ಇಲ್ಲಿವೆ

ನಟ ವಿಷ್ಣುವರ್ಧನ್ ಅವರ 71ನೇ ಜನ್ಮದಿನವಿಂದು. ಈ ಹಿನ್ನೆಲೆಯಲ್ಲಿ ಅವರು ಪಡೆದಿರುವ ಪ್ರಶಸ್ತಿಗಳು, ಅವರ ಕುರಿತ ಅಪರೂಪದ ಸಂಗತಿಗಳು ಇಲ್ಲಿವೆ.

Vishnuvardhan Birthday: ವಿಷ್ಣುವರ್ಧನ್ ಕುರಿತ ಅಪರೂಪದ ಸಂಗತಿಗಳು ಹಾಗೂ ಅವರು ಪಡೆದ ಪ್ರಶಸ್ತಿಗಳ ವಿವರ ಇಲ್ಲಿವೆ
ನಟ ವಿಷ್ಣುವರ್ಧನ್ (Credits: drvishnuvardhan.org)
Follow us
TV9 Web
| Updated By: shivaprasad.hs

Updated on: Sep 18, 2021 | 10:28 AM

ಕನ್ನಡಿಗರ ಜನಮಾನಸದಲ್ಲಿ ಸಾಹಸ ಸಿಂಹ ಎಂಬ ಬಿರುದಾಂಕಿತಗೊಂಡು ನೆಲೆ ನಿಂತಿರುವ ನಟ ವಿಷ್ಣುವರ್ಧನ್ ಜನ್ಮದಿನವಿಂದು. ಇಂದು ಅಭಿಮಾನಿಗಳೊಂದಿಗೆ ಅವರಿಲ್ಲ. ಆದರೆ ಅವರ ನೆನಪು, ಚಿತ್ರಗಳು, ಅಭಿನಯ ಎಲ್ಲರ ಮನದಲ್ಲಿ ಹಸಿರಾಗಿದೆ. ಆದ್ದರಿಂದಲೇ ಇಂದು ಹಲವು ಸಾಮಾಜಿಕ ಕಾರ್ಯಗಳು, ಚಟುವಟಿಕೆಗಳ ಮುಖಾಂತರ ಅತ್ಯಂತ ಸಂಭ್ರಮದಿಂದ ವಿಷ್ಣುವರ್ಧನ್ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಷ್ಣುವರ್ಧನ್ ನಟನೆಯನ್ನು ನೆನಪಿಸುತ್ತಾ, ಅವರು ಯಾವೆಲ್ಲಾ ಚಿತ್ರಗಳಿಗೆ ತಮ್ಮ ಅತ್ಯುತ್ತಮ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದರು ಎಂಬ ಪಟ್ಟಿ ಇಲ್ಲಿದೆ. ಚಿತ್ರದ ಪಟ್ಟಿ ನೋಡಿ, ಅದರಲ್ಲಿ ನಿಮ್ಮ ನೆಚ್ಚಿನ ಚಿತ್ರವನ್ನು ಮತ್ತೊಮ್ಮೆ ವೀಕ್ಷಿಸಿ ವಿಷ್ಣು ದಾದಾ ಜನ್ಮದಿನವನ್ನು ಸ್ಮರಣೀಯವಾಗಿಸಿಕೊಳ್ಳಿ.

ವಿಷ್ಣುವರ್ಧನ್ ಅವರ ಅತ್ಯುತ್ತಮ ನಟನೆಗೆ ಈ ಚಿತ್ರಗಳಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ದೊರೆತಿದೆ:

ನಾಗರಹಾವು: 1972-73

ಹೊಂಬಿಸಿಲು: 1977-78

ಬಂಧನ: 1984-85

ಲಯನ್ ಜಗಪತಿ ರಾವ್: 1984-85

ಲಾಲಿ: 1997-98

ವೀರಪ್ಪ ನಾಯಕ: 1998-99

ಆಪ್ತ ರಕ್ಷಕ: 2009-10 (ಮರಣೋತ್ತರ)

ಹೀಗೆ ಒಟ್ಟು 7 ಬಾರಿ ವಿಷ್ಣು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದಲ್ಲದೇ ಜೀವಮಾನ ಸಾಧನೆಗೆ ನೀಡಲಾಗುವ ಡಾ.ರಾಜ್​ಕುಮಾರ್ ರಾಜ್ಯ ಪ್ರಶಸ್ತಿಗೆ 2008ರಲ್ಲಿ ವಿಷ್ಣುವರ್ಧನ್ ಭಾಜನರಾಗಿದ್ದಾರೆ.4 ಬಾರಿ ಅತ್ಯುತ್ತಮ ನಟನೆಗಾಗಿ ಫಿಲ್ಮ್​ಫೇರ್ ಪ್ರಶಸ್ತಿಯೂ ಅವರಿಗೆ ಲಭಿಸಿದೆ. 2005ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯವು ವಿಷ್ಣು ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ.

ಡಾ.ವಿಷ್ಣುವರ್ಧನ್ ಕುರಿತ ಅಪರೂಪದ ಸಂಗತಿಗಳು:

ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳನ್ನು ಸೇರಿ 220ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ ವಿಷ್ಣುವರ್ಧನ್ ನಿಜ ನಾಮಧೇಯ ಸಂಪತ್ ಕುಮಾರ್. 1972ರಲ್ಲಿ ತೆರೆಕಂಡ ಎಸ್.ಎಲ್.ಭೈರಪ್ಪ ಅವರ ಕಾದಂಬರಿ ಆಧಾರಿತ ‘ವಂಶವೃಕ್ಷ’ ಚಿತ್ರದಲ್ಲಿ ವಿಷ್ಣುವರ್ಧನ್ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ನಂತರ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಬಹುದೊಡ್ಡ ಬ್ರೇಕ್ ನೀಡಿದ್ದಲ್ಲದೇ, ಕನ್ನಡಿಗರ ಜನಮಾನಸದಲ್ಲಿ ತಮ್ಮ ನಟನೆಯಿಂದ ಅಚ್ಚಾಗಿ ಕುಳಿತುಬಿಟ್ಟರು. ‘ಭಾರತ ಚಿತ್ರರಂಗದ ಫೀನಿಕ್ಸ್’ ಎಂಬ ಬಿರುದೂ ವಿಷ್ಣು ಅವರಿಗಿದೆ.

ಮಾರ್ಷಿಯಲ್ ಆರ್ಟ್ಸ್ ಕಲೆಯಲ್ಲಿ ವಿಷ್ಣು ಅವರು ಪರಿಣಿತರಾಗಿದ್ದರು. ಪತ್ರಿಕೆಯೊಂದಕ್ಕೆ ಸಂದರ್ಶನ  ನೀಡುತ್ತಾ ಅವರು ತಮ್ಮ ಕಾಲ ಬ್ರೂಸ್ ಲೀ ಯುಗವಾಗಿತ್ತು. ತಮ್ಮ ತಲೆಮಾರಿನಲ್ಲಿ ಅವರು ಮತ್ತು ಕಮಲ್ ಹಾಸನ್ ಮಾತ್ರ ಮಾರ್ಷಿಯಲ್ ಆರ್ಟ್ಸ್​ನಲ್ಲಿ ಪರಿಣತಿ ಹೊಂದಿದ್ದರು ಎಂದು ತಿಳಿಸಿದ್ದರು. ಬೆಂಗಳೂರಿನ ಬನಶಂಕರಿ ದೇವಾಲಯದಿಂದ ಕೆಂಗೇರಿವರೆಗಿನ 14.5 ಕಿ.ಮೀ ಉದ್ದದ ರಸ್ತೆಯನ್ನು ವಿಷ್ಣುವರ್ಧನ್ ರಸ್ತೆಯೆಂದು ನಾಮಕರಣ ಮಾಡಲಾಗಿದ್ದು, ಇದು ಏಷ್ಯಾದಲ್ಲಿಯೇ ತಾರೆಯೊಬ್ಬರ ಹೆಸರಿನಲ್ಲಿರುವ ಅತ್ಯಂತ ಉದ್ದದ ರಸ್ತೆಯಾಗಿರುವುದು ವಿಶೇಷ. ಎಲ್ಲರಿಗೂ ಗೊತ್ತಿಲ್ಲದ ಮತ್ತೊಂದು ಅಪರೂಪದ ಸಂಗತಿಯೆಂದರೆ, ಖ್ಯಾತ ನಿರ್ದೇಶಕ ಫಣಿ ರಾಮಚಂದ್ರ ನಿರ್ದೇಶನದ ‘ಗಣೇಶ ಐ ಲವ್ ಯೂ’ ಚಿತ್ರಕ್ಕೆ ವಿಷ್ಣು ಕತೆಯನ್ನೂ ರಚಿಸಿದ್ದರು.

ಇದನ್ನೂ ಓದಿ:

ವಿಷ್ಣುವರ್ಧನ್ ಜನ್ಮದಿನ: ಎಂದೂ ಮರೆಯಲಾಗದ ವಿಷ್ಣು ದಾದಾಗೆ​ ಸೆಲೆಬ್ರಿಟಿಗಳು ವಿಶ್​ ಮಾಡ್ತಿರೋದು ಹೀಗೆ..

ಇಂದು ವಿಷ್ಣುವರ್ಧನ್​, ಉಪೇಂದ್ರ, ಶ್ರುತಿ ಜನ್ಮದಿನ; ಅಭಿಮಾನಿಗಳಿಗೆ ಏನೆಲ್ಲ ಸಿಗಲಿದೆ?

(Rare facts about Vishnuvardhan and awards list)

ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ