ಅಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿದ ಶಿವರಾಜ್​ಕುಮಾರ್​; ಫ್ಯಾನ್ಸ್​ ಇದನ್ನು ನಡೆಸಿಕೊಡ್ತಾರಾ?

ಕೊವಿಡ್​ ಎರಡನೇ ಅಲೆ ತಣ್ಣಗಾಗುತ್ತಿದೆ ಎಂದು ಮೈಮರೆಯೋದು ಬೇಡ ಎಂದು ಸರ್ಕಾರ ಎಚ್ಚರಿಸಿದೆ. ಶಿವರಾಜ್​ಕುಮಾರ್​ ಕೂಡ ಇದೇ ರೀತಿಯ ಮನವಿ ಮಾಡಿಕೊಂಡಿದ್ದಾರೆ.

ಕೊವಿಡ್​ ಎರಡನೇ ಅಲೆ ಕಡಿಮೆ ಆಗುತ್ತಿದ್ದಂತೆ ಚಿತ್ರಮಂದಿರದಲ್ಲಿ ಶೇ.100 ಸ್ಥಾನ ಭರ್ತಿಗೆ ಅವಕಾಶ ನೀಡಲಾಗಿದೆ. ಇದು ಫ್ಯಾನ್ಸ್​ಗೆ ಖುಷಿ ನೀಡಿದೆ. ಚಿತ್ರಮಂದಿರದಲ್ಲಿ ನೆಚ್ಚಿನ ನಟನ ಕಟೌಟ್​ ನಿಲ್ಲಿಸಿ ಸಂಭ್ರಮಿಸೋಕೆ ರೆಡಿ ಆಗುತ್ತಿದ್ದಾರೆ. ಹೀಗಿರುವಾಗಲೇ ಶಿವರಾಜ್​ಕುಮಾರ್​ ಅವರು ವಿಶೇಷ ಮನವಿ ಒಂದನ್ನು ಮಾಡಿದ್ದಾರೆ.

ಕೊವಿಡ್​ ಎರಡನೇ ಅಲೆ ತಣ್ಣಗಾಗುತ್ತಿದೆ ಎಂದು ಮೈಮರೆಯೋದು ಬೇಡ ಎಂದು ಸರ್ಕಾರ ಎಚ್ಚರಿಸಿದೆ. ಶಿವರಾಜ್​ಕುಮಾರ್​ ಕೂಡ ಇದೇ ರೀತಿಯ ಮನವಿ ಮಾಡಿಕೊಂಡಿದ್ದಾರೆ. ಸಿನಿಮಾ ನೋಡುವಾಗ ಅಭಿಮಾನಿಗಳು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಕೋರಿದ್ದಾರೆ.

ಇದನ್ನೂ ಓದಿ: ಸ್ಟಾರ್​ ನಟರ ಮುಖಾಮುಖಿ; ಈಗ ಚಿತ್ರರಂಗದಲ್ಲಿ ಹೊಂದಾಣಿಕೆ ಮುಖ್ಯ ಎಂದ ಶಿವರಾಜ್​ಕುಮಾರ್​

Click on your DTH Provider to Add TV9 Kannada