ಐಫೋನ್ ಗಳಿಗೆ ತೆರುವುದಕ್ಕಿಂತ ಕಡಿಮೆ ದುಡ್ಡಿನಲ್ಲಿ ಯಾವ್ಯಾವ ದ್ವಿಚಕ್ರ ವಾಹನಗಳನ್ನು ಖರೀದಿಸಬಹುದು ಗೊತ್ತಾ?

ಐಫೋನ್ ಗಳಿಗೆ ತೆರುವುದಕ್ಕಿಂತ ಕಡಿಮೆ ದುಡ್ಡಿನಲ್ಲಿ ಯಾವ್ಯಾವ ದ್ವಿಚಕ್ರ ವಾಹನಗಳನ್ನು ಖರೀದಿಸಬಹುದು ಗೊತ್ತಾ?

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 27, 2021 | 6:07 PM

512 ಜಿಬಿ ಲಾರ್ಜ್ ಡಿಸ್ಪ್ಲೇ 13 ಮಿನಿ ಐಪೋನನ್ನು 1,09,900 ಕೊಟ್ಟಿ ಖರೀದಿಸುವ ಬದಲು ಟೂ ವ್ಹೀಲರ್ ಖರೀದಿಸಲು ನಿರ್ಧರಿದರೆ ರೂ. 98, 234 ಬೆಲೆಯ ಬಜಾಜ್ ಪಲ್ಸರ್, ರೂ. 1,09,365 ಬೆಲೆಯ ಟಿವಿಎಸ್ ಆಪಾಚೆ, ಇಲ್ಲವೇ ರೂ. 1,09, 900 ಬೆಲೆಯ ಸಿಂಪಲ್ ವನ್ ಗಾಡಿಯನ್ನು ಖರೀದಿಸಬಹುದು.

ನಿಮಗೆ ನೆನಪಿರಬಹುದು, ಇತ್ತೀಚಿಗೆ ನಾವು ಭಾರತದ ಒಬ್ಬ ಜನಸಾಮಾನ್ಯ ಐಫೋನ್ ಖರೀದಿಸಬೇಕಾದರೆ, ಎಷ್ಟು ತಿಂಗಳುಗಳ ದುಡಿಮೆಯನ್ನು ಎತ್ತಿಡಬೇಕು ಅನ್ನೋದನ್ನು ಚರ್ಚಿಸಿದ್ದೆವು. ಇಂದು ಐಫೋನ್​​​ಗಳಿಗಿಂತ ಕಡಿಮೆ ಬೆಲೆಯ ಯಾವ್ಯಾವ ಸ್ಕೂಟರ್ ಮತ್ತು ಬೈಕ್ ಗಳನ್ನು ಖರೀದಿಸಬಹುದು ಅಂತ ಪರಿಶೀಲಿಸೋಣ. ನೀವು ರೂ. 99,900 ತೆತ್ತು ಐಪೋನ್ ಖರೀದಿಸುವ ಬದಲು ಅದೇ ಹಣದಲ್ಲಿ ದ್ವಿಚಕ್ರವಾಹನ ಕೊಳ್ಳುವ ನಿರ್ಧಾರ ತೆಗೆದುಕೊಂಡರೆ, ರೂ. 83,143 ಬೆಲೆಯ ಹೊಂಡಾ ಎಸ್ ಪಿ, ರೂ. 89,732 ಬೆಲೆಯ ಟಿವಿಎಸ್ ಎನ್ ಟಿ, ಇಲ್ಲವೇ ರೂ. 94,990 ಬೆಲೆಯ ಓಲಾ ಎಸ್ 1 ಇವಿಯನ್ನು ಖರೀದಿಸಬಹುದು.

ಹಾಗೆಯೇ, 512 ಜಿಬಿ ಲಾರ್ಜ್ ಡಿಸ್ಪ್ಲೇ 13 ಮಿನಿ ಐಪೋನನ್ನು 1,09,900 ಕೊಟ್ಟಿ ಖರೀದಿಸುವ ಬದಲು ಟೂ ವ್ಹೀಲರ್ ಖರೀದಿಸಲು ನಿರ್ಧರಿದರೆ ರೂ. 98, 234 ಬೆಲೆಯ ಬಜಾಜ್ ಪಲ್ಸರ್, ರೂ. 1,09,365 ಬೆಲೆಯ ಟಿವಿಎಸ್ ಆಪಾಚೆ, ಇಲ್ಲವೇ ರೂ. 1,09, 900 ಬೆಲೆಯ ಸಿಂಪಲ್ ವನ್ ಗಾಡಿಯನ್ನು ಖರೀದಿಸಬಹುದು.

ರೂ. 1,49,900 ಬೆಲೆಯ 512 ಐಫೋನ್ ಮಿನಿ ಪ್ರೋ ಬದಲಿಗೆ ಅದಕ್ಕಿಂತ ಕಡಿಮೆ ಬೆಲೆಯ ಟಿವಿಎಸ್ ಅಪಾಚೆ 200 (ರೂ. 1,38,115), ರೂ.1,40,544 ಬೆಲೆಯ ಬಜಾಜ್ ಪಲ್ಸರ್ ಇಲ್ಲವೇ ರೂ. 1,45,900 ಬೆಲೆಯ ಯಮಾಹಾ ಎಮ್ ಟಿ ಬೈಕ್​ಗಳನ್ನು  ಖರೀದಿಸಬಹುದು.

ಅಂತಿಮವಾಗಿ, 1,79,000 ಬೆಲೆಯ 512 ಐಪೋನ್ ಮಿನಿ ಪ್ರೊ ಮ್ಯಾಕ್ಸ್ ಖರೀದಿಸುವ ಬದಲು ಅದೇ ದುಡ್ಡನ್ನು ಬೈಕ್ ಗಳಲ್ಲಿ ಇನ್ವೆಸ್ಟ್ ಮಾಡುವ ಯೋಚನೆ ಮಾಡಿದರೆ, ರೂ. 1,70,515 ಬೆಲೆಯ ಕೆಟಿಎಮ್ ಡ್ಯೂಕ್, ರೂ. 1,72,600 ಬೆಲೆಯ ಜಿಕ್ಸರ್ 250, ಇಲ್ಲವೇ ರೂ.1,78,353 ಬೆಲೆಯ ಜಾವಾ ಡಬಲ್ ಡಿಸ್ಕ್ ಖರೀದಿಸಬಹುದು.

ಇದನ್ನೂ ಓದಿ:   Viral Video: ಅಳಿಲಿಗೆ ಆಟ, ಬೆಕ್ಕಿಗೆ ಸಂಕಟ!; ಇದೇನಿದು ಹೊಸ ಗಾದೆ? ತಮಾಷೆಯ ಈ ವಿಡಿಯೊ ನೋಡಿ