Viral Video: ಅಳಿಲಿಗೆ ಆಟ, ಬೆಕ್ಕಿಗೆ ಸಂಕಟ!; ಇದೇನಿದು ಹೊಸ ಗಾದೆ? ತಮಾಷೆಯ ಈ ವಿಡಿಯೊ ನೋಡಿ

Trending Videos: ಗೋಳು ಹೊಯ್ದುಕೊಳ್ಳುತ್ತಿರುವ ಬೆಕ್ಕನ್ನೇ ಫಜೀತಿಗೆ ತಳ್ಳಿದ್ದ ಪುಟಾಣಿ ಅಳಿಲಿನ ಚಾಣಾಕ್ಷತೆ ನೆಟ್ಟಿಗರ ಮನ ಗೆದ್ದಿದೆ. ವೈರಲ್ ಆದ ವಿಡಿಯೊ ಇಲ್ಲಿದೆ.

Viral Video: ಅಳಿಲಿಗೆ ಆಟ, ಬೆಕ್ಕಿಗೆ ಸಂಕಟ!; ಇದೇನಿದು ಹೊಸ ಗಾದೆ? ತಮಾಷೆಯ ಈ ವಿಡಿಯೊ ನೋಡಿ
ಪುಟಾಣಿ ಅಳಿಲು ಮತ್ತು ಬೆಕ್ಕಿನ ಆಟ
Follow us
TV9 Web
| Updated By: shivaprasad.hs

Updated on: Sep 26, 2021 | 12:35 PM

ಅಂತರ್ಜಾಲದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಮುದ್ದಾದ ಫೋಟೋಗಳು ಮತ್ತು ವಿಡಿಯೊಗಳು ಎಲ್ಲರನ್ನೂ ಸೆಳೆಯುತ್ತವೆ. ಸೋಶಿಯಲ್ ಮೀಡಿಯಾದಲ್ಲಂತೂ ಅದು ಬಹುತೇಕರಿಗೆ ಇಷ್ಟವಾಗುತ್ತವೆ. ಕೆಲವು ವಿಡಿಯೊಗಳಲ್ಲಿ ಪ್ರಾಣಿಗಳ ನಡುವೆ ಜಗಳ ಕಂಡುಬಂದರೆ, ಕೆಲವುಗಳಲ್ಲಿ ಅವುಗಳ ತುಂಟಾಟ ಎಲ್ಲರ ಮನಗೆಲ್ಲುತ್ತವೆ. ಹಾಗೆಯೇ, ತೊಂದರೆ ನೀಡಿದ್ದಕ್ಕೆ ಒಂದು ಪ್ರಾಣಿ ಮತ್ತೊಂದಕ್ಕೆ ಪಾಠ ಕಲಿಸುವ ದೃಶ್ಯಗಳೂ ವೈರಲ್ ಆಗುತ್ತವೆ. ಇದೇ ಮಾದರಿಯ ಒಂದು ವಿಡಿಯೊ ನೆಟ್ಟಿಗರ ಮನಗೆದ್ದಿದ್ದು, ಅದರಲ್ಲಿ ಬೆಕ್ಕು ಮತ್ತು ಅಳಿಲಿನ ದೃಶ್ಯಗಳಿವೆ.

ವೈರಲ್ ಆದ ವೀಡಿಯೋದಲ್ಲಿ, ಬೆಕ್ಕೊಂದು ತೋಟದಲ್ಲಿ ಸಣ್ಣ ಅಳಿಲಿಗೆ ತೊಂದರೆ ನೀಡುತ್ತದೆ. ಮೊದಲಿಗೆ ಅಲ್ಲಿ ಇಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಅಳಿಲನ್ನು ಬೆಕ್ಕು ಅಷ್ಟು ಸುಲಭಕ್ಕೆ ಬಿಡುವಂತೆ ತೋರುವುದಿಲ್ಲ. ಆಗ ಅಳಿಲು ಏನು ಮಾಡುತ್ತದೆ? ವಿಡಿಯೋ ನೋಡಿ. ಅಳಿಲಿನ ಈ ಚಾಲಾಕಿತನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ವಿಡಿಯೊ ಇಲ್ಲಿದೆ:

ಅಳಿಲು ಬೆನ್ನ ಮೇಲೆ ಕೂತ ನಂತರ ಬೆಕ್ಕಿಗೆ ಅದು ಸಿಗುವುದಿಲ್ಲ. ಅದು ಹುಡುಕುತ್ತಲೇ ಇರುತ್ತದೆ. ಬೆಕ್ಕಿನ ಈ ಫಜೀತಿ ಹಾಗೂ ಅಳಿಲಿನ ಸಮಯಪ್ರಜ್ಞೆಗೆ ನೆಟ್ಟಿಗರು ಮನ ಸೋತಿದ್ದಾರೆ. ಮನತುಂಬಿ ನಕ್ಕಿರುವ ವೀಕ್ಷಕರು, ಅಳಿಲು ಬೆಕ್ಕಿಗೆ ಸರಿಯಾಗಿ ಬುದ್ಧಿ ಕಲಿಸಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಬೆಕ್ಕು ಮತ್ತು ಅಳಿಲಿನ ಈ ತಮಾಷೆಯ ವಿಡಿಯೋ ತುಣುಕನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ನೋಡಿದ ವೀಕ್ಷಕರು, ಇಲಿಗೆ ತೊಂದರೆ ನೀಡುವ ಬೆಕ್ಕಿನಿಂದ ಹುಟ್ಟಿದ, ‘ಬೆಕ್ಕಿಗೆ ಆಟ, ಇಲಿಗೆ ಪ್ರಾಣ ಸಂಕಟ’ ಎಂಬ ಗಾದೆ, ಇದೀಗ ಬೆಕ್ಕಿಗೇ ತಿರುವು ಮುರುವಾಗಿದೆ ಎಂದು ಭಾವಿಸಿರಬಹುದು.

ಆದ್ದರಿಂದಲೇ, ‘ಪುಟಾಣಿ ಅಳಿಲಿಗೆ ಆಟ, ಬೆಕ್ಕಿಗೆ ಸಂಕಟ’ ಎಂದು ನಸು ನಗಬಹುದು. ಸದ್ಯ ಈ ವಿಡಿಯೊ ಉತ್ತಮ ವೀಕ್ಷಣೆಗಳನ್ನು ಗಳಿಸಿಕೊಳ್ಳುತ್ತಿದ್ದು, ವೈರಲ್ ಆಗಿದೆ.

ಇದನ್ನೂ ಓದಿ:

Viral Video: ಸಫಾರಿ ಮಾಡುತ್ತಿರುವ ಜೀಪ್ ಒಳಗೆ ನುಗ್ಗಿದ ಸಿಂಹಿಣಿ; ನಂತರ ಏನಾಯ್ತು? ಅಚ್ಚರಿಯ ವಿಡಿಯೊ ಇಲ್ಲಿದೆ

Viral Video: ರಸ್ತೆ ಗುಂಡಿಗಳ ಸಮಸ್ಯೆಯನ್ನು ಹೀಗೂ ಹೇಳಬಹುದಾ?; ಮಜವಾದ ಈ ವಿಡಿಯೊ ನೋಡಿ

ಪುರುಷರ ಒಳಉಡುಪು ಜಾಹೀರಾತಿನಲ್ಲಿ ರಶ್ಮಿಕಾ ಮಂದಣ್ಣ; ಇದರ ಕಾನ್ಸೆಪ್ಟ್​ ನೋಡಿ ಹೆಣ್ಮಕ್ಕಳು ಸಹಿಸ್ತಾರಾ?

(A cat gives trouble to small squirrel then what will squirrel do happens watch the video)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ