Viral Video: ರಸ್ತೆ ಗುಂಡಿಗಳ ಸಮಸ್ಯೆಯನ್ನು ಹೀಗೂ ಹೇಳಬಹುದಾ?; ಮಜವಾದ ಈ ವಿಡಿಯೊ ನೋಡಿ

TV9 Digital Desk

| Edited By: shivaprasad.hs

Updated on:Sep 26, 2021 | 11:11 AM

Trending: ವಡೋದರಾದ ರಸ್ತೆ ಸಮಸ್ಯೆಯನ್ನು ತೆರೆದಿಡುವ ವಿಡಿಯೊವೊಂದು ವೈರಲ್ ಆಗಿದೆ.

Viral Video: ರಸ್ತೆ ಗುಂಡಿಗಳ ಸಮಸ್ಯೆಯನ್ನು ಹೀಗೂ ಹೇಳಬಹುದಾ?; ಮಜವಾದ ಈ ವಿಡಿಯೊ ನೋಡಿ
ವಿಡಿಯೊದಿಂದ ಸೆರೆ ಹಿಡಿಯಲಾದ ಚಿತ್ರಗಳು (Credits: Rajesh Parikh/ Twitter)
Follow us

ಭಾರತದಲ್ಲಿ ಪ್ರದೇಶದ ಭೇದವಿದಲ್ಲದೇ ಸಾಮಾನ್ಯರು ಅನುಭವಿಸುವ ಕಷ್ಟಗಳಲ್ಲಿ ಉತ್ತಮ ರಸ್ತೆಗಳ ಕೊರತೆಯೂ ಒಂದು. ಗುಂಡಿಬಿದ್ದು ಓಡಾಡಲು ದುಸ್ತರವಾಗುವ ರಸ್ತೆಗಳು ದೇಶದ ಉದ್ದಗಲಕ್ಕೂ ಇವೆ. ಜರನು ಪ್ರತಿಭಟನೆ, ಒತ್ತಡಗಳ ಮೂಲಕ ಇವುಗಳಿಗೆ ಪರಿಹಾರಕ್ಕೆ ಪ್ರಯತ್ನಪಟ್ಟರೂ ಸಾಧ್ಯವಾಗದಿದ್ದಾಗ, ವಿಭಿನ್ನ ವಿಧಾನಗಳ ಮೊರೆ ಹೋಗುತ್ತಾರೆ. ಅದರಲ್ಲೂ ಯುವ ಜನರು ತಂತ್ರಜ್ಞಾನವನ್ನು ಬಳಸಿಕೊಂಡು, ವ್ಯಂಗ್ಯವನ್ನು ಬೆರೆಸಿ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಯತ್ನ ಮಾಡುತ್ತಾರೆ. ಅಂತಹ ವಿಡಿಯೊಗಳು ಸಾಕಷ್ಟು ವೈರಲ್ ಆಗಿ, ಜನರ ಗಮನ ಸೆಳೆದು, ಸಮಸ್ಯೆ ಪರಿಹಾರವಾದದ್ದೂ ಇದೆ. ಅಂಥದ್ದೇ ಒಂದು ವ್ಯಂಗ್ಯದ ವಿಡಿಯೊ ಈಗ ಎಲ್ಲೆಡೆ ವೈರಲ್ ಆಗಿದೆ.

ಇತ್ತೀಚೆಗೆ ಕರ್ನಾಟಕದಲ್ಲಿ ರಸ್ತೆ ಗುಂಡಿ ಬಿದ್ದಿರುವುದನ್ನೂ ಹಾಗೂ ಅದರಿಂದ ಜನರು ಸಮಸ್ಯೆಗೆ ಒಳಗಾಗಿರುವುದನ್ನು ತೋರಿಸಿದ ಕೆಲವು ವಿಡಿಯೊಗಳು ವೈರಲ್ ಆಗಿದ್ದವು. ಉಸೇನ್ ಬೋಲ್ಟ್ ಕೆಸರು ಗದ್ದೆ ಓಟಕ್ಕೆ ಬರುತ್ತಾನೆ ಎಂದು ಸುದ್ದಿ ಮಾಡಿಯೂ ಒಂದೆಡೆ ಪ್ರತಿಭಟನೆ ನಡೆಸಲಾಗಿತ್ತು. ಇದು ವೈರಲ್ ಆಗಿ, ಜನರ ಸಮಸ್ಯೆ ಅಧಿಕಾರಿಗಳಿಗೆ ತಲುಪಿತು. ಇದೀಗ ವಡೋದರಾದ ಯುವಕರಿಬ್ಬರು ಸೇರಿ ತಮ್ಮ ಊರಿನ ರಸ್ತೆಯ ಸಮಸ್ಯೆಯ ಕುರಿತು ವಿಡಂಬನೆಯ ವಿಡಿಯೊ ಮಾಡಿ ಸಂಬಂಧಪಟ್ಟವರ ಗಮನ ಸೆಳೆಯುವ ಯತ್ನ ನಡೆಸಿದ್ದಾರೆ.

ಸಮಸ್ಯೆಯ ಕುರಿತು ಗಂಭೀರವಾಗಿ ಹೇಳುವ ಬದಲು ಅವರು ವ್ಯಂಗ್ಯದ ವಿದಾನ ಅನುಸರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ವಿಡಿಯೊ ಬಹಳ ತಮಾಷೆಯಾಗಿದ್ದು, ಎಲ್ಲರಲ್ಲೂ ನಗು ಉಕ್ಕಿಸುವಂತಿದೆ. ಯುವಕರಿಬ್ಬರು, ಮೊದಲಿಗೆ ಮಿಕ್ಸಿಯ ಜಾರ್ ಒಂದಕ್ಕೆ ಚಟ್ನಿ ಮಾಡಲು ಬೇಕಾದ ಎಲ್ಲ ಪದಾರ್ಥಗಳನ್ನು ಹಾಕುತ್ತಾರೆ. ನಂತರ ತಮ್ಮ ಗಾಡಿಯನ್ನು ಓಡಿಸುತ್ತಾ ವಡೋದರಾದ ರಸ್ತೆಗಳಲ್ಲಿ ಸಾಗುತ್ತಾರೆ. ಕೊನೆಗೆ ಗಮ್ಯ ತಲುಪಿದ ನಂತರ ಜಾರ್ ಓಪನ್ ಮಾಡಿದಾಗ, ಚಟ್ನಿ ತಯಾರಾಗಿರುತ್ತದೆ. ಇದನ್ನು ನೋಡಿ ಎಲ್ಲರೂ ಮನತುಂಬಿ ನಕ್ಕಿದ್ದಾರೆ.

ವಿಡಿಯೊ ಇಲ್ಲಿದೆ:

ವಿಡಿಯೊ ನೋಡಿರುವ ನೆಟ್ಟಿಗರು, ಯುವಕರ ಸೃಜನಶೀಲತೆಗೆ ಭೇಷ್ ಎಂದಿದ್ದಾರೆ. ಹಲವರು ಇದನ್ನು ತಮಾಷೆಯಾಗಿ ಸ್ವೀಕರಿಸಿದ್ದು, ಕಡಿಮೆ ಖರ್ಚಿನಲ್ಲಿ ಚಟ್ನಿ ತಯಾರಿಸಿದ್ದಕ್ಕೆ- ‘ಉತ್ತಮ ಹಣ ಗಳಿಸುವ ಮಾರ್ಗ ಇದು’ ಎಂದು ತಮಾಷೆ ಮಾಡಿದ್ದಾರೆ. ಮತ್ತೆ ಹಲವರು ಮೂಲ ಸಮಸ್ಯೆಯ ಕುರಿತು ಚೆನ್ನಾಗಿ ಹೇಳಿದ್ದೀರಿ ಎಂದಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ಎಲ್ಲರ ಗಮನ ಸೆಳೆಯುತ್ತಿದ್ದು, ಸಂಬಂಧಪಟ್ಟವರು ರಸ್ತೆಯ ಗುಂಡಿ ಮುಚ್ಚುವ ಕುರಿತು ಗಮನ ಹರಿಸುತ್ತಾರೆಯೇ ಕಾದು ನೋಡಬೇಕಿದೆ.

ಇದನ್ನೂ ಓದಿ:

ಮಣ್ಣು ತುಂಬಿ ರಸ್ತೆಯಲ್ಲಿದ್ದ ಗುಂಡಿ ಮುಚ್ಚಿದ ಕಾನ್ಸ್‌ಟೇಬಲ್; ಸಂಚಾರಿ ಠಾಣೆ ಪಿಸಿ ಚಂದ್ರಕಾಂತ್ ಕೆಲಸಕ್ಕೆ ಸಾರ್ವಜನಿಕರ ಮೆಚ್ಚುಗೆ

Viral Video: ಫೋಟೋಕ್ಕೆ ಸಖತ್ ಪೋಸ್ ನೀಡೋ ಈ ಶ್ವಾನ ಈಗ ಸಿಕ್ಕಾಪಟ್ಟೆ ವೈರಲ್; ಎಲ್ಲರ ಮನಗೆದ್ದ ಈ ವಿಡಿಯೊ ನೋಡಿ

(Watch this viral video which shows Road problem in Vadodara)

ತಾಜಾ ಸುದ್ದಿ

Related Stories

Click on your DTH Provider to Add TV9 Kannada