Viral Video: ಫೋಟೋಕ್ಕೆ ಸಖತ್ ಪೋಸ್ ನೀಡೋ ಈ ಶ್ವಾನ ಈಗ ಸಿಕ್ಕಾಪಟ್ಟೆ ವೈರಲ್; ಎಲ್ಲರ ಮನಗೆದ್ದ ಈ ವಿಡಿಯೊ ನೋಡಿ

ಅಂತರ್ಜಾಲದಲ್ಲಿ ವೈರಲ್ ಆಗಿರುವ ಶ್ವಾನವೊಂದು ವಿವಿಧ ಸಂದರ್ಭಗಳಲ್ಲಿ ವಿವಿಧ ರೀತಿಯಲ್ಲಿ ಪೋಸ್ ನೀಡುತ್ತಿದೆ. ಮನುಷ್ಯರಂತೆ ಪೋಸ್ ನೀಡುವ ಈ ಶ್ವಾನ ಈಗ ನೆಟ್ಟಿಗರ ಮನಗೆದ್ದಿದೆ.

Viral Video: ಫೋಟೋಕ್ಕೆ ಸಖತ್ ಪೋಸ್ ನೀಡೋ ಈ ಶ್ವಾನ ಈಗ ಸಿಕ್ಕಾಪಟ್ಟೆ ವೈರಲ್; ಎಲ್ಲರ ಮನಗೆದ್ದ ಈ ವಿಡಿಯೊ ನೋಡಿ
ಶ್ವಾನದ ಒಂದು ಪೋಸ್ (Credits: Boomer_The_Landcloud/ Instagram)
Follow us
TV9 Web
| Updated By: shivaprasad.hs

Updated on:Sep 26, 2021 | 10:00 AM

ನೀವು ಶ್ವಾನ ಪ್ರೇಮಿಯಾಗಿದ್ದರೆ ಈ ವೈರಲ್ ವಿಡಿಯೋ ನಿಮಗೆ ಇಷ್ಟವಾಗೋದು ಪಕ್ಕಾ. ಯಾಕೆ ಅಂತೀರಾ? ಈ ಶ್ವಾನದ ತುಂಟಾಟ ಹಾಗೂ ಮುದ್ದಾದ ಪೋಸ್​ಗಳು ಎಂಥವರಿಗೂ ಮೆಚ್ಚುಗೆಯಾಗುವಂತಿದೆ. ಈ ವಿಡಿಯೊದಲ್ಲಿ ಕಾಣುವ ಶ್ವಾನದ ಹೆಸರು ಬೂಮರ್. ಈ ದೃಶ್ಯಗಳ ಮುಖಾಂತರ ಬೂಮರ್​ ಮನುಷ್ಯರಂತೆ ವಿಭಿನ್ನ ಪೋಸ್​ಗಳನ್ನು ನೀಡುವುದನ್ನು ಹಂಚಿಕೊಳ್ಳಲಾಗಿದೆ. ಇದರ ತುಂಟಾಟ ನೋಡಿದರೆ ನಿಮ್ಮ ಮುಖದಲ್ಲಿ ನಸು ನಗು ಮೂಡೋದು ಖಂಡಿತಾ.

ಬೂಮರ್‌ನ ಈ ತಮಾಷೆಯ ವಿಡಿಯೊವನ್ನು ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ವಿಶೇಷವೆಂದರೆ ಬೂಮರ್ ತನ್ನದೇ ಹೆಸರಿನ ಇನ್‌ಸ್ಟಾಗ್ರಾಮ್ ಪುಟವನ್ನು ಹೊಂದಿದ್ದಾನೆ. ಅದಕ್ಕೆ ಇಟ್ಟಿರುವ ಹೆಸರು ಬೂಮರ್_ಲ್ಯಾಂಡ್ ಕ್ಲೌಡ್. ಬೂಮರ್‌ನ ಒಡತಿ ಪ್ರತಿದಿನ ಅದರ ಚಿತ್ರಗಳು ಮತ್ತು ವಿಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಇದಕ್ಕೆ ಬಹಳಷ್ಟು ಜನ ಅಭಿಮಾನಿಗಳೂ ಇದ್ದಾರೆ.

ಈ ವೈರಲ್ ವಿಡಿಯೋದಲ್ಲಿ ಬೂಮರ್ ಕ್ಯಾಮರಾ ಮುಂದೆ ತಮಾಷೆಯ ಪೋಸ್ ನೀಡುತ್ತಿದ್ದಾನೆ. ಮೊದಲ ಚಿತ್ರದಲ್ಲಿ ಅವನು ಸಮುದ್ರತೀರದಲ್ಲಿ ಗಾಳಿಯಲ್ಲಿ ಪೋಸ್ ನೀಡುತ್ತಿದ್ದರೆ, ಎರಡನೆಯದರಲ್ಲಿ ಸ್ನಾನ ಮಾಡುವಾಗ ಪೋಸ್ ನೀಡಿದ್ದಾನೆ. ಮತ್ತೊಂದರಲ್ಲಿ ಸೇಬು ಹಣ್ಣನ್ನು ತೆರಿಗೆಯಾಗಿ ಕೇಳುವ ಬೂಮರ್ ಎಂಬ ಶೀರ್ಷಿಕೆ ನೀಡಿ, ಬೂಮರ್ ಹಣ್ಣನ್ನು ಸಂಭ್ರಮದಿಂದ ತಿನ್ನುವುದನ್ನು ಹಂಚಿಕೊಳ್ಳಲಾಗಿದೆ. ನಾಲ್ಕನೆಯ ಪೋಸ್​ನಲ್ಲಿ ಬೂಮರ್​ನನ್ನು ಹೊತ್ತುಕೊಂಡು ಬೀದಿಗಳಲ್ಲಿ ತಿರುಗುವಾಗ ಅದನ್ನು ಆತ ಹೇಗೆ ಎಂಜಾಯ್ ಮಾಡುತ್ತಾನೆ ಎಂದು ತೋರಿಸಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಹಲವರು ಇದು ಪಕ್ಕಾ ಇಂದಿನ ಕಾಲದ ಶ್ವಾನ ಎಂದು ಶಹಬ್ಬಾಸ್​ಗಿರಿ ಕೊಟ್ಟಿದ್ದಾರೆ.

ಬೂಮರ್​ನ ಫೊಟೋ ಕ್ರೇಜ್ ಇಲ್ಲಿದೆ ನೋಡಿ:

ಈ ವಿಡಿಯೋ ಇದುವರೆಗೆ ಲಕ್ಷಾಂತರ ಲೈಕ್‌ಗಳನ್ನು ಪಡೆದುಕೊಂಡಿದೆ. ಇದರೊಂದಿಗೆ, ಜನರು ತುಂಬಾ ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ವಿಡಿಯೊಕ್ಕೆ ‘ನಿಮ್ಮ ನೆಚ್ಚಿನ ಪೋಸ್ ಯಾವುದು? ನಾವು ಯಾವುದನ್ನಾದರೂ ಬಿಟ್ಟಿದ್ದೇವೆಯೇ?’  ಎಂದು ಕ್ಯಾಪ್ಶನ್ ನೀಡಲಾಗಿದೆ. ನೆಟ್ಟಿಗರು ಈ ವಿಡಿಯೊಕ್ಕೆ ಬಹಳ ಮೆಚ್ಚುಗೆ ಸೂಚಿಸಿದ್ದು, ಇಷ್ಟಪಟ್ಟಿದ್ದಾರೆ. ಓರ್ವ ಬಳಕೆದಾರರು, ‘ನಾನು ಇನ್‌ಸ್ಟಾಗ್ರಾಮ್‌ನಲ್ಲಿ ಬಹಳ ಸಮಯದಿಂದ ಬೂಮರ್‌ನನ್ನು ಹಿಂಬಾಲಿಸುತ್ತಿದ್ದೇನೆ ಮತ್ತು ಆತನ ಪ್ರತಿ ವಿಡಿಯೋವನ್ನು ವೀಕ್ಷಿಸುತ್ತೇನೆ.  ಬೂಮರ್ ನಿಜವಾಗಿಯೂ ಬಹಳ ಮುದ್ದಾದ ಶ್ವಾನ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:

KL Rahul: ಪಡಿಕ್ಕಲ್ ಅಲ್ಲ: ಆರ್​ಸಿಬಿ ಮುಂದಿನ ನಾಯಕ ಈ ಕನ್ನಡಿಗ ಎಂದ ರಾಯಲ್ ಚಾಲೆಂಜರ್ಸ್ ಆಟಗಾರ: ಯಾರು ಗೊತ್ತಾ?

ಶೂಟಿಂಗ್​ ಸೆಟ್​ನಲ್ಲಿ ಊಟ ಮಾಡಿ ಬೈಯಿಸಿಕೊಂಡಿದ್ದ ಸಂಜಯ್​ ದತ್​; ‘ಕೆಜಿಎಫ್​’ ಅಧೀರನ ಕಷ್ಟದ ಹಾದಿ

ಕುಣಿದು ಕುಪ್ಪಳಿಸಿದ ಹಾಡಿ ಜನರು; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

(A dog giving 3 different poses for new looks watch the video)

Published On - 9:59 am, Sun, 26 September 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ