KL Rahul: ಪಡಿಕ್ಕಲ್ ಅಲ್ಲ: ಆರ್ಸಿಬಿ ಮುಂದಿನ ನಾಯಕ ಈ ಕನ್ನಡಿಗ ಎಂದ ರಾಯಲ್ ಚಾಲೆಂಜರ್ಸ್ ಆಟಗಾರ: ಯಾರು ಗೊತ್ತಾ?
Next RCB captain: ಆರ್ಸಿಬಿ ತಂಡದ ಮಾಜಿ ಘಾತಕ ವೇಗಿ ದಕ್ಷಿಣ ಆಫ್ರಿಕಾದ ಡೇಲ್ ಸ್ಟೈನ್ ರಾಯಲ್ ಚಾಲೆಂಜರ್ಸ್ ತಂಡದ ಮುಂದಿನ ನಾಯಕ ಯಾರಾಗಬೇಕು ಎಂದು ಸೂಚಿಸಿದ್ದಾರೆ.
ಇತ್ತೀಚೆಗಷ್ಟೆ ಟಿ-20 ವಿಶ್ವಕಪ್ (T20 World Cup) ಬಳಿಕ ಟೀಮ್ ಇಂಡಿಯಾ (Team India) ಟಿ-20 ತಂಡದ ನಾಯಕಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸಿ ವಿರಾಟ್ ಕೊಹ್ಲಿ (Virat Kohli) ಶಾಕ್ ನೀಡಿದ್ದರು. ಇದರ ಬೆನ್ನಲ್ಲೇ ಅವರು ಈ ಐಪಿಎಲ್ ಬಳಿಕ ಆರ್ಸಿಬಿ ತಂಡದ ಕ್ಯಾಪ್ಟನ್ಸಿಗೂ (RCB Captain) ಗುಡ್ ಬೈ ಹೇಳುವುದಾಗಿ ತಿಳಿಸಿ ಮತ್ತೊಂದು ಆಘಾತ ನೀಡಿದರು.“ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಪರ ನಾಯಕನಾಗಿ ಇದು ನನ್ನ ಕೊನೆಯ ಆವೃತ್ತಿ ಆಗಿರಲಿದೆ. ಮುಂದಿನ ಐಪಿಎಲ್ (IPL) ಸೀಸನ್ನಿಂದ ತಂಡದಲ್ಲಿ ಕೇವಲ ಆಟಗಾರನಾಗಿ ಮಾತ್ರ ಮುಂದುವರೆಯುತ್ತೇನೆ. ಐಪಿಎಲ್ 2021 (IPL 2021) ಟೂರ್ನಿ ಕೊನೆಗೊಂಡ ಬಳಿಕ ಆರ್ಸಿಬಿ (RCB) ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಯಲಿದ್ದೇನೆ” ಎಂದು ವಿರಾಟ್ ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು. ಇದಾದ ಬೆನ್ನಲ್ಲೇ ಆರ್ಸಿಬಿ ತಂಡದ ಮುಂದಿನ ನಾಯಕ ಯಾರು ಎಂಬ ಪ್ರಶ್ನೆ ಎದ್ದಿದೆ.
ಈಗಾಗಲೇ 2022ರ ಆವೃತ್ತಿಗೆ ಆರ್ಸಿಬಿ ತಂಡದ ನಾಯಕ ಯಾರು ಎಂಬ ಪ್ರಶ್ನೆ ಜೋರಾಗಿ ಕೇಳಿಬರುತ್ತಿದೆ. ಕೆಲ ಕ್ರಿಕೆಟ್ ದಿಗ್ಗಜರು ದೇವದತ್ ಪಡಿಕ್ಕಲ್, ಎಬಿ ಡಿವಿಲಿಯರ್ಸ್ ಹೆಸರನ್ನೂ ಸೂಚಿಸಿದ್ದಾರೆ. ಸದ್ಯ ಆರ್ಸಿಬಿ ತಂಡದ ಮಾಜಿ ಘಾತಕ ವೇಗಿ ದಕ್ಷಿಣ ಆಫ್ರಿಕಾದ ಡೇಲ್ ಸ್ಟೈನ್ ರಾಯಲ್ ಚಾಲೆಂಜರ್ಸ್ ತಂಡದ ಮುಂದಿನ ನಾಯಕ ಯಾರಾಗಬೇಕು ಎಂದು ಸೂಚಿಸಿದ್ದಾರೆ. ಇವರ ಪ್ರಕಾರ ಅವರು ಕನ್ನಡಿಗನೇ ಆಗಿರಬೇಕಂತೆ. ಆದರೆ, ಅದು ದೇವದತ್ ಪಡಿಕ್ಕಲ್ ಅಲ್ಲ. ಮತ್ಯಾರು?
ಇಎಸ್ಪಿಎಲ್ ಕ್ರಿಕ್ಇನ್ಫೋ ಸಂದರ್ಶನದ ವೇಳೆ ಮಾತನಾಡುತ್ತಾ, ಆರ್ಸಿಬಿ ತಂಡದ ಮುಂದಿನ ನಾಯಕ ಬೆಂಗಳೂರು ತಂಡದ ಮಾಜಿ ಆಟಗಾರ ಕೆ. ಎಲ್ ರಾಹುಲ್ ಆಗಬೇಕು ಎಂದು ಡೇಲ್ ಸ್ಟೈನ್ ಹೇಳಿದ್ದಾರೆ. “ಆರ್ಸಿಬಿ ತನ್ನ ತಂಡಕ್ಕೆ ದೀರ್ಘ ಕಾಲದ ನಾಯಕನನ್ನು ಆರಿಸಬೇಕಿದೆ. ಅದು ಅವರದ್ದೇ ರಾಜ್ಯದ ಆಟಗಾರನಾದರೇ ಉತ್ತಮ. ಇದಕ್ಕೆ ಸೂಕ್ತ ಹೆಸರು ಕೆ. ಎಲ್ ರಾಹುಲ್. ಮುಂದಿನ ವರ್ಷದ ಐಪಿಎಲ್ಗೆ ಮೆಗಾ ಆಕ್ಷನ್ ಇರಲಿದ್ದು, ಇದರಲ್ಲಿ ರಾಹುಲ್ ಅವರು ತಮ್ಮ ಮಾಜಿ ತಂಡಕ್ಕೆ ಸೇರುತ್ತಾರೆ ಎಂಬ ನಂಬಿಕೆ ನನಗಿದೆ” ಎಂದು ಸ್ಟೈನ್ ಹೇಳಿದ್ದಾರೆ.
ರಾಹುಲ್ ಸದ್ಯ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿದ್ದಾರೆ. ಇಂಜುರಿ ಸಮಸ್ಯೆಯಿಂದಾಗಿ 2017ರ ಐಪಿಎಲ್ ಟೂರ್ನಿಯಿಂದ ಸಂಪೂರ್ಣ ಹೊರಬಿದ್ದ ರಾಹುಲ್ ಅವರನ್ನು 2018ರ ಐಪಿಎಲ್ ವೇಳೆಗೆ ಆರ್ಸಿಬಿ ಅಚ್ಚರಿ ಎಂಬಂತೆ ತಂಡದಿಂದ ಕೈಬಿಟ್ಟಿತ್ತು. ಈ ಸಂದರ್ಭ ಹರಾಜಿನಲ್ಲಿ ಪಂಜಾಬ್ ಇವರನ್ನು 11 ಕೋಟಿಕೊಟ್ಟು ಖರೀದಿ ಮಾಡಿತ್ತು. 2020 ರಲ್ಲಿ ಪಂಜಾಬ್ ರಾಹುಲ್ರನ್ನು ನಾಯಕನಾಗಿ ಆಯ್ಕೆ ಮಾಡಿತ್ತು.
ಇನ್ನೂ ಇದೇವೇಳೆ ಎಬಿ ಡಿವಿಲಿಯರ್ಸ್ ಅವರು ನಾಯಕ ಸ್ಥಾನಕ್ಕೆ ಸೂಕ್ತ ಯಾಕಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸ್ಟೈನ್, “ಎಬಿ ಡಿವಿಲಿಯರ್ಸ್ ಒಬ್ಬ ಅತ್ಯುತ್ತಮ ನಾಯಕ ಅದರಲ್ಲಿನ ಎರಡು ಮಾತಿಲ್ಲ. ಆದರೆ, ಎಬಿಡಿ ತಮ್ಮ ಕ್ರಿಕೆಟ್ ಜೀವನದ ಅಂತಿಮ ಹಂತದಲ್ಲಿದ್ದಾರೆ. ಅವರು ಇನ್ನು ಹೆಚ್ಚಿನ ಸಮಯ ಕ್ರಿಕೆಟ್ ಆಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಆರ್ಸಿಬಿ ಭವಿಷ್ಯದ ತಂಡವನ್ನು ರೂಪಿಸಬೇಕಿದೆ. ಇದಕ್ಕೆ ರಾಹುಲ್ ಸೂಕ್ತ” ಎಂದು ಹೇಳಿದ್ದಾರೆ.
ಐಪಿಎಲ್ 2021 ಯುಎಇನಲ್ಲಿ ನಡೆಯುತ್ತಿರುವ ಎರಡನೇ ಚರಣವನ್ನು ಕೆಟ್ಟದಾಗಿ ಪ್ರಾರಂಭಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈವರೆಗೆ ಒಟ್ಟು 9 ಪಂದ್ಯಗಳನ್ನು ಆಡಿದ್ದು ಐದರಲ್ಲಿ ಗೆಲುವು ಕಂಡಿದೆ. ನಾಲ್ಕರಲ್ಲಿ ಸೋತಿದೆ. ಒಟ್ಟು 10 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆದರೂ ಆರ್ಸಿಬಿಗೆ ಪ್ಲೇ ಆಫ್ ಪ್ರವೇಶ ಖಾತ್ರಿಪಡಿಸಿಕೊಳ್ಳುವ ಹಾದಿ ದೂರವೇ ಇದೆ. ಬೆಂಗಳೂರು ತಂಡಕ್ಕೆ ಬಾಕಿ ಇರುವುದು ಕೇವಲ ಐದು ಪಂದ್ಯಗಳು ಮಾತ್ರ. ಇದರಲ್ಲಿ ಪ್ಲೇ ಆಫ್ಗೇರಲು ಕೊಹ್ಲಿ ಪಡೆ ಕನಿಷ್ಠ ಮೂರು ಪಂದ್ಯಗಳನ್ನಾದರೂ ಗೆಲ್ಲ ಬೇಕಾದ ಒತ್ತಡದಲ್ಲಿದೆ.
IPL 2021, RCB vs MI: ಆರ್ಸಿಬಿ-ಮುಂಬೈ ನಡುವೆ ಹೈವೋಲ್ಟೇಜ್ ಪಂದ್ಯ: ಗೆಲುವಿನ ಲಯಕ್ಕೆ ಮರಳಲು ಹರಸಾಹಸ
(RCB Captain Former RCB bowler Dale Steyn said Afetr Virat Kohli KL Rahul next captain of RCB in IPL 2022)