Viral Photo: ಸೈಕಲ್ ಮೇಲೆ ಕುರ್ಚಿಯಲ್ಲಿ ಕುಳಿತು ನಾಯಿಯ ಸವಾರಿ; ಮುದ್ದಾದ ಫೋಟೋ ವೈರಲ್
Trending News: ನಾಯಿಯನ್ನು ತಮ್ಮ ಮಗುವಿನಂತೆ ನೋಡಿಕೊಳ್ಳುತ್ತಿರುವ ವ್ಯಕ್ತಿಯೊಬ್ಬರು ತಮ್ಮ ಸೈಕಲ್ನಲ್ಲಿ ನಾಯಿಗೆಂದೇ ಪ್ಲಾಸ್ಟಿಕ್ ಕುರ್ಚಿಯೊಂದನ್ನು ಕಟ್ಟಿ, ಅದರ ಮೇಲೆ ನಾಯಿಯನ್ನು ಕೂರಿಸಿಕೊಂಡು ಸವಾರಿ ಮಾಡಿದ್ದಾರೆ.
ನಾಯಿಗಳೆಂದರೆ ಇಷ್ಟ ಪಡದವರು ಯಾರು? ನಾಯಿ, ಬೆಕ್ಕುಗಳು ಕ್ರಮೇಣ ಮನೆಯ ಸದಸ್ಯರಂತೆಯೇ ಆಗಿ ಬಿಡುತ್ತವೆ. ನಾಯಿಯನ್ನು ಕಾರಿನಲ್ಲಿ, ಬೈಕಿನಲ್ಲಿ ಕೂರಿಸಿಕೊಂಡು ತಾವು ಹೋದ ಕಡೆಯೆಲ್ಲ ಕರೆದುಕೊಂಡು ಹೋಗುವುದನ್ನು ನೋಡುತ್ತಲೇ ಇರುತ್ತೇವೆ. ಅದೇ ರೀತಿ ನಾಯಿಯನ್ನು ತಮ್ಮ ಮಗುವಿನಂತೆ ನೋಡಿಕೊಳ್ಳುತ್ತಿರುವ ವ್ಯಕ್ತಿಯೊಬ್ಬರು ತಮ್ಮ ಸೈಕಲ್ನಲ್ಲಿ ನಾಯಿಗೆಂದೇ ಪ್ಲಾಸ್ಟಿಕ್ ಕುರ್ಚಿಯೊಂದನ್ನು ಕಟ್ಟಿ, ಅದರ ಮೇಲೆ ನಾಯಿಯನ್ನು ಕೂರಿಸಿಕೊಂಡು ಸವಾರಿ ಮಾಡಿದ್ದಾರೆ. ಈ ಫೋಟೋ ಈಗ ಭಾರೀ ವೈರಲ್ ಆಗಿದೆ.
ನಾಯಿಗಳು ಮನುಷ್ಯರ ಅತ್ಯಂತ ಮೆಚ್ಚಿನ ಸ್ನೇಹಿತರು. ನಾಯಿಗಳು ಒಮ್ಮೆ ಮನುಷ್ಯರನ್ನು ನಂಬಿದರೆ ಅವರನ್ನು ಜೀವಕ್ಕಿಂತ ಹೆಚ್ಚು ಹಚ್ಚಿಕೊಂಡು ಬಿಡುತ್ತವೆ. ನಾಯಿ ಹಾಗೂ ಮನುಷ್ಯರ ನಡುವಿನ ಸಂಬಂಧದ ಫೋಟೋ, ವಿಡಿಯೋಗಳು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತವೆ. ಅದೇ ರೀತಿ ಈ ಫೋಟೋ ಕೂಡ ವೈರಲ್ ಆಗಿದೆ.
ದೇಸಿ ಅಂಬಾರಿಯಾದ ಸೈಕಲ್ ಏರಿ ಹೊರಟ ನಾಯಿ ಕುರ್ಚಿಯಲ್ಲಿ ಆರಾಮಾಗಿ ಕುಳಿತುಕೊಂಡಿರುವ ಫೋಟೋ ಇಲ್ಲಿದೆ. ರಸ್ತೆಯಲ್ಲಿ ಹೋಗುತ್ತಿದ್ದವರು ಎದುರಿನ ಸೈಕಲ್ನಲ್ಲಿ ಕುಳಿತಿದ್ದ ಈ ನಾಯಿಯ ಫೋಟೋವನ್ನು ಕ್ಲಿಕ್ಕಿಸಿ ಟ್ವಿಟ್ಟರ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ನೀಲಿ ಕುರ್ಚಿಯಲ್ಲಿ ಕುಳಿತು ಸೈಕಲ್ನಲ್ಲಿ ಹೋಗುತ್ತಿದ್ದ ನಾಯಿ ಫೋಟೋ ತೆಗೆಯುವವರ ಕಡೆ ತಿರುಗಿ ನೋಡುತ್ತಿದೆ.
Look what I saw today ? pic.twitter.com/YmaBjYMCba
— Dharani Balasubramaniam (@dharannniii) September 24, 2021
ಈ ವೈರಲ್ ಫೋಟೋಗೆ 18,000 ಲೈಕ್ಗಳು ಬಂದಿವೆ. 2,000ಕ್ಕೂ ಹೆಚ್ಚು ಬಾರಿ ಈ ಫೋಟೋವನ್ನು ರೀಟ್ವೀಟ್ ಮಾಡಿದ್ದಾರೆ. ನಾಯಿ ಹಾಗೂ ಮಾಲೀಕನ ಆಪ್ತ ಸಂಬಂಧವನ್ನು ಕಂಡು ನೆಟ್ಟಿಗರು ಖುಷಿಯಾಗಿದ್ದಾರೆ.
ಇದನ್ನೂ ಓದಿ: Viral News: ಹೆಂಡತಿ ಸ್ನಾನ ಮಾಡಲ್ಲ ಅಂತ ವಿಚ್ಛೇದನ ನೀಡಿದ ಗಂಡ!
Shocking Video: 7 ಮರಿಗಳ ಜೊತೆ ನಾಯಿಗೆ ಬೆಂಕಿ ಹಚ್ಚಿ ಸುಟ್ಟ ಮಹಿಳೆಯರು; ಅಮಾನವೀಯ ವಿಡಿಯೋ ಇಲ್ಲಿದೆ
(Man uses desi jugaad to travel with dog on cycle photos go viral on Social Media)
Published On - 8:37 pm, Sat, 25 September 21