ಕುಣಿದು ಕುಪ್ಪಳಿಸಿದ ಹಾಡಿ ಜನರು; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ತಲೆಗೆ ಕಿರಿಟವನ್ನೂ ಕಟ್ಟಿಕೊಂಡಿದ್ದಾರೆ. ಕುತ್ತಿಗೆಗೆ ಉದ್ದದ ಸರ ಧರಿಸಿದ್ದಾರೆ. ಸುಮಾರು 15 ಜನ ಸೇರಿ ಕಾಡಿನ ಮಧ್ಯದಲ್ಲಿ ಒಂದೇ ರೀತಿ ಕುಣಿಯುತ್ತಿದ್ದಾರೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹಾಡಿಯಲ್ಲಿ ಸಾಂಪ್ರದಾಯಿಕ ನೃತ್ಯದ ಸಂಭ್ರಮ ಜೋರಾಗಿತ್ತು. ಚಿಕ್ಕ ಹೆಜ್ಜೂರು ಹಾಡಿಯಲ್ಲಿ ಹಾಡಿ ಜನರು ಕುಣಿದು ಕುಪ್ಪಳಿಸಿದ್ದಾರೆ. ಯುವಕರು, ಯುವತಿಯರು, ಚಿಕ್ಕ- ಚಿಕ್ಕ ಮಕ್ಕಳು ಸೇರಿ ಭರ್ಜರಿ ನೃತ್ಯ ಮಾಡಿದ್ದಾರೆ. ಸೊಂಟಕ್ಕೆ ಸೊಪ್ಪು ಕಟ್ಟಿಕೊಂಡು ಕುಣಿದು ಕುಪ್ಪಳಿ ಸಂಭ್ರಮಿಸಿದ್ದಾರೆ. ಹಾಡಿ ಜನರ ನೃತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಾಡಿ ಜನರ ಲಯಬದ್ಧ ನೃತ್ಯಕ್ಕೆ ಜನರು ಫಿದಾ ಆಗಿದ್ದಾರೆ. ಹಾಡಿ ಜನರ ನೃತ್ಯ ಬೇರೆ ನೃತ್ಯಗಳಿಗಿಂತ ಭಿನ್ನವಾಗಿರುತ್ತದೆ. ಹಸಿರು ಬಣ್ಣದ ಬಟ್ಟೆ ಹಾಕಿಕೊಂಡು, ಸೊಪ್ಪನ್ನು ಕಟ್ಟಿಕೊಂಡು ಹೆಜ್ಜೆ ಹಾಕಿದ್ದಾರೆ. ಇನ್ನು ತಲೆಗೆ ಕಿರಿಟವನ್ನೂ ಕಟ್ಟಿಕೊಂಡಿದ್ದಾರೆ. ಕುತ್ತಿಗೆಗೆ ಉದ್ದದ ಸರ ಧರಿಸಿದ್ದಾರೆ. ಸುಮಾರು 15 ಜನ ಸೇರಿ ಕಾಡಿನ ಮಧ್ಯದಲ್ಲಿ ಒಂದೇ ರೀತಿ ಕುಣಿಯುತ್ತಿದ್ದಾರೆ. ಕುಣಿದು ಕುಪ್ಪಳಿಸಿದ ಹಾಡಿ ಜನರ ನೃತ್ಯದ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Latest Videos