ನ್ಯೂ ಯಾರ್ಕ್​ನ ಹೋಟೆಲ್ ಎದುರು ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಅವರು ಕೂಗಿದ್ದು, ‘ವಂದೇ ಮಾತರಂ,’ ‘ಭಾರತ್ ಮಾತಾ ಕಿ ಜೈ!’

ನ್ಯೂ ಯಾರ್ಕ್​ನ ಹೋಟೆಲ್ ಎದುರು ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಅವರು ಕೂಗಿದ್ದು, ‘ವಂದೇ ಮಾತರಂ,’ ‘ಭಾರತ್ ಮಾತಾ ಕಿ ಜೈ!’

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 25, 2021 | 11:49 PM

ಪ್ರಧಾನಿ ಮೋದಿ ಅವರು ವಾಷಿಂಗ್ಟನ್ ನಲ್ಲಿ ದಿನವಿಡೀ ಹಲವಾರು ಸಭೆಗಳಲ್ಲಿ ಭಾಗವಹಿಸಿ ದಣಿದು ನ್ಯೂ ಯಾರ್ಕ್ ಗೆ ವಾಪಸ್ಸಾಗಿದ್ದರು. ಆದರೆ, ಭಾರತೀಯರನ್ನು ನೋಡಿದಾಕ್ಷಣ ಅವರು ಅಲ್ಲೇ ನಿಂತು ಎಲ್ಲರತ್ತ ಕೈ ಬೀಸಿ, ಅವರೆಲ್ಲರ ವಿಶ್​ಗಳನ್ನು ಅಂಗೀಕರಿಸಿದ ಬಳಿಕವೇ ಹೊಟೆಲ್ ಒಳಗೆ ಹೋದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರತದಲ್ಲಷ್ಟೇ ಅಮೇರಿಕಾದಲ್ಲೂ ಜನಪ್ರಿಯರು. ಅವರು ಮೂರು-ದಿನ ಯುಎಸ್ ಪ್ರವಾಸಕ್ಕೆ ತೆರಳಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಶುಕ್ರವಾರದಂದು ಪ್ರಧಾನಿಗಳು ಬಿಡುವಿಲ್ಲದ ಸಭೆಗಳಲ್ಲಿ ಪಾಲ್ಗೊಂಡರು. ಅವತ್ತಿನ ಎಲ್ಲ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ರಾತ್ರಿ ನ್ಯೂ ಯಾರ್ಕ್​ನ ತಮ್ಮ ಹೋಟಲ್ ಗೆ ಮರಳಿದಾಗ ಅದರ ಮುಂಭಾಗದಲ್ಲಿ ಅನೇಕ ಇಂಡೋ-ಅಮೇರಿಕನ್ನರು, ಅಮೇರಿಕದಲ್ಲಿರುವ ಭಾರತೀಯ ಸಂಜಾತರು ಅವರನ್ನು ಭೇಟಿಯಾಗಲು ಕಾಯುತ್ತಿದ್ದರು. ಪ್ರಧಾನಿ ಮೋದಿಯವರನ್ನು ಕಂಡ ಕ್ಷಣವೇ ‘ವಂದೇ ಮಾತರಂ,’ ‘ಭಾರತ್ ಮಾತಾ ಕೀ ಜೈ’ ಘೋಷಣೆಗಳು ಮುಗಿಲು ಮುಟ್ಟಿದವು. ನ್ಯೂ ಯಾರ್ಕ್ನ ಬೀದಿಗಳಲ್ಲಿ ಘೋಷಣೆಗಳು ಪ್ರತಿಧ್ವನಿಸಿದವು. ಜನ ಅವರತ್ತ ಕೈ ಬೀಸಿದರು, ನಮಸ್ಕಾರ ಮಾಡಿದರು ಮತ್ತು ಕೆಲವರು ಕೈ ಕುಲುಕುವುದಕ್ಕೆ ಹಾತೊರೆದರು. ಆದರೆ ಕೋವಿಡ್-19 ನಿಯಮಾವಳಿ ಮತ್ತು ಭದ್ರತೆಯ ದೃಷ್ಟಿಯಿಂದ ಮೋದಿ ಅವರ ಅಂಗರಕ್ಷಕರು ಅದಕ್ಕೆ ಅವಕಾಶ ಕೊಡಲಿಲ್ಲ.

ನ್ಯೂ ಯಾರ್ಕ್​ನ  ಬೀದಿಗಳಲ್ಲಿ ಘೋಷಣೆಗಳು ಪ್ರತಿಧ್ವನಿಸಿದವು. ಜನ ಅವರತ್ತ ಕೈ ಬೀಸಿದರು, ನಮಸ್ಕಾರ ಮಾಡಿದರು ಮತ್ತು ಕೆಲವರು ಕೈ ಕುಲುಕುವುದಕ್ಕೆ ಹಾತೊರೆದರು. ಆದರೆ ಕೋವಿಡ್-19 ನಿಯಮಾವಳಿ ಮತ್ತು ಭದ್ರತೆಯ ದೃಷ್ಟಿಯಿಂದ ಮೋದಿ ಅವರ ಅಂಗರಕ್ಷಕರು ಅದಕ್ಕೆ ಅವಕಾಶ ಕೊಡಲಿಲ್ಲ.

ನಿಮಗೆ ನೆನೆಪಿರಲಿ, ಪ್ರಧಾನಿ ಮೋದಿ ಅವರು ವಾಷಿಂಗ್ಟನ್ ನಲ್ಲಿ ದಿನವಿಡೀ ಹಲವಾರು ಸಭೆಗಳಲ್ಲಿ ಭಾಗವಹಿಸಿ ದಣಿದು ನ್ಯೂ ಯಾರ್ಕ್ ಗೆ ವಾಪಸ್ಸಾಗಿದ್ದರು. ಆದರೆ, ಭಾರತೀಯರನ್ನು ನೋಡಿದಾಕ್ಷಣ ಅವರು ಅಲ್ಲೇ ನಿಂತು ಎಲ್ಲರತ್ತ ಕೈ ಬೀಸಿ, ಅವರೆಲ್ಲರ ವಿಶ್​ಗಳನ್ನು ಅಂಗೀಕರಿಸಿದ ಬಳಿಕವೇ ಹೊಟೆಲ್ ಒಳಗೆ ಹೋದರು.

ತಡರಾತ್ರಿಯಾದರೂ ಜನ ಮೋದಿ ಅವರಿಗಾಗಿ ಕಾಯುತ್ತಿದ್ದಿದ್ದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಎರಡು ದಿನಗಳ ಹಿಂದೆ, ಪ್ರಧಾನಿಗಳು ವಾಷಿಂಗ್ಟನ್ ಡಿಸಿಯಲ್ಲಿ ಕಾಲೂರಿದ ನಂತರ ಜಾಯಿಂಟ್ ಆಂಡ್ರ್ಯೂಸ್ ನೆಲೆಯಲ್ಲಿ ಹಲವಾರು ಭಾರತೀಯ ಸಂಜಾತರು ಅವರಿಗೆ ಇದೇ ರೀತಿಯಾಗಿ ಸ್ವಾಗತಿಸಿದ್ದರು. ಭಾರತೀಯ ಸಮುದಾಯದ 100 ಕ್ಕೂ ಹೆಚ್ಚು ಜನ ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ನೆರೆದಿದ್ದರು.

ಇದನ್ನೂ ಓದಿ:  PM Modi Speech: ಅಫ್ಘಾನ್ ಭೂಮಿಯನ್ನು ಭಯೋತ್ಪಾದನೆಗೆ ಬಳಸಿಕೊಳ್ಳಬೇಡಿ; ಪಾಕಿಸ್ತಾನ, ಚೀನಾಗೆ ಪ್ರಧಾನಿ ಮೋದಿ ಎಚ್ಚರಿಕೆ