ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡದೆ ಮೋಸ ಮಾಡಿದ ಯಡಿಯೂರಪ್ಪನವರಿಗೆ ದೇವರು ಶಿಕ್ಷೆ ಕೊಟ್ಟಿದ್ದಾನೆ: ಯತ್ನಾಳ್

ಮೋಸ ಮಾಡಿದವರಿಗೆ ದೇವರು ಶಿಕ್ಷೆ ಕೊಟ್ಟೇ ಕೊಡುತ್ತಾನೆ ಅಂತ ಅವರು ಬಿಎಸ್ ವೈ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದುದ್ದನ್ನು ಸೂಚ್ಯವಾಗಿ ಹೇಳಿದರು.

ಕರ್ನಾಟಕದ ಫೈರ್​ ಬ್ರ್ಯಾಂಡ್​ ರಾಜಕಾರಣಿ ಅಂತ ಕರೆಸಿಕೊಳ್ಳುವ ವಿಯಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ವಿವಾದಗಳು ಬೆನ್ನಟ್ಟುತ್ತವೆಯೋ ಅಥವಾ ಅವರೇ ಅವುಗಳ ಹಿಂದೆ ಓಡುತ್ತಾರೋ ಅಂತ ಕನ್ನಡಿಗರಿಗೆ ಅರ್ಥವಾಗದು. ಅಧಿಕಾರದಲ್ಲಿರಲಿ ಇಲ್ಲದೇ ಹೋಗಲಿ, ಅವರು ಸುದ್ದಿಯಲ್ಲಿರುತ್ತಾರೆ. ಸೋಜಿಗದ ಸಂಗತಿಯೆಂದರೆ, ಅವರು ತಮ್ಮ ಪಕ್ಷದ ನಾಯಕರ ವಿರುದ್ಧವೂ ಬಿಂದಾಸ್ ಕಾಮೆಂಟ್ಗಳನ್ನು ಮಾಡುತ್ತಾರೆ ಮತ್ತು ಅದಕ್ಕಿಂತ ಇನ್ನೂ ವಿಸ್ಮಯಕಾರಿ ಸಂಗತಿಯೆಂದರೆ ಹಾಗೆ ಮಾಡಿಯೂ ದಕ್ಕಿಸಿಕೊಳ್ಳುತ್ತಾರೆ. ಬಿ ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವಲ್ಲಿ ಯತ್ನಾಳ್ ಲೀಡ್ ರೋಲ್ ಪ್ಲೇ ಮಾಡಿದರು ಎಂಬ ದೂರಿದೆ. ಅದಕ್ಕೆಲ್ಲ ಈ ಮಹಾನುಭಾವ ಕ್ಯಾರೆ ಅನ್ನೋದಿಲ್ಲ ಅನ್ನೋದು ಬೇರೆ ಮಾತು.
ಶನಿವಾರ ಯತ್ನಾಳ್ ಬೆಳಗಾವಿಯಲ್ಲಿದ್ದರು ಹಾಗೂ ಒಂದು ಸುದ್ದಿಗೋಷ್ಟಿಯನ್ನು ನಡೆಸಿದರು. ಇಲ್ಲೂ ಅವರು ಯಡಿಯೂರಪ್ಪನವರ ವಿರುದ್ಧ ಹರಿ ಹಾಯುವುದನ್ನು ನಿಲ್ಲಿಸಲಿಲ್ಲ. ಬಿ ಎಸ್ ವೈ ವಿರುದ್ಧ ಮಾತಾಡಲು ಅವರಿಗೆ ಸಿಕ್ಕ ವಿಷಯ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ವಿಷಯ.

ಪಂಚಮಸಾಲಿ ಸಮಾಜ ಯಡಿಯೂರಪ್ಪ ಅವರಿಗೆ ಬೆಳಗಾವಿಯಲ್ಲಿ ಸನ್ಮಾನ ಮಾಡಿದಾಗ ಆಗ ವಿರೋಧ ಪಕ್ಷದಲ್ಲಿದ್ದ ಅವರು ಅಧಿಕಾರಕ್ಕೆ ಬಂದ ಕೇವಲ 24 ಗಂಟೆಗಳಲ್ಲಿ ಮೀಸಲಾತಿ ನೀಡುವ ಭರವಸೆ ನೀಡಿದ್ದರು. ಆದರೆ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಅವರು ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದ್ದಾರೆ ಎಂದು ಯತ್ನಾಳ್ ಹೇಳಿದರು.

ಮೋಸ ಮಾಡಿದವರಿಗೆ ದೇವರು ಶಿಕ್ಷೆ ಕೊಟ್ಟೇ ಕೊಡುತ್ತಾನೆ ಅಂತ ಅವರು ಬಿಎಸ್ ವೈ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದುದ್ದನ್ನು ಸೂಚ್ಯವಾಗಿ ಹೇಳಿದರು.

ಮೀಸಲಾತಿಗೆ ಸಂಬಂಧಸಿದಂತೆ ಪರಾಮರ್ಶೆ ನಡೆಸಲು ನ್ಯಾಯಮೂರ್ತಿ ಸುಭಾಷ ರೆಡ್ಡಿ ಅವರ ಆಧ್ಯಕ್ಷತೆಯಲ್ಲಿ ಬಿಎಸ್ವೈ ಒಂದು ಸಮಿತಿ ರಚಿಸಿದರೂ ಒಮ್ಮೆ ಕೂಡ ಸಮಿತಿಯೊಂದಿಗೆ ಸಭೆ ನಡೆಸಲಿಲ್ಲ ಎಂದ ಯತ್ನಾಳ್, ಶನಿವಾರದಂದು ಈಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಭೆ ನಡೆಸಿದ್ದಾರೆ ಅಂತ ಹೇಳಿದರು.

ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ ಹೋರಾಟ: ಅಕ್ಟೋಬರ್ 1ರಿಂದ ಸತ್ಯಾಗ್ರಹ ನಡೆಸಲು ತೀರ್ಮಾನ- ಬಸವ ಜಯಮೃತ್ಯುಂಜಯಶ್ರೀ

Click on your DTH Provider to Add TV9 Kannada