ಮಣ್ಣು ತುಂಬಿ ರಸ್ತೆಯಲ್ಲಿದ್ದ ಗುಂಡಿ ಮುಚ್ಚಿದ ಕಾನ್ಸ್‌ಟೇಬಲ್; ಸಂಚಾರಿ ಠಾಣೆ ಪಿಸಿ ಚಂದ್ರಕಾಂತ್ ಕೆಲಸಕ್ಕೆ ಸಾರ್ವಜನಿಕರ ಮೆಚ್ಚುಗೆ

ದ್ವಿಚಕ್ರ ವಾಹನ ಸವಾರರು ಈ ಗುಂಡಿಯಲ್ಲಿ ಬಿದ್ದು ಗಾಯಗೊಳ್ಳುತ್ತಿರುವುದನ್ನು ಕಂಡ ಪಿಸಿ ಚಂದ್ರಕಾಂತ್, ಇದಕ್ಕೆ ಪರಿಹಾರ ನೀಡಲು ಯೋಚಿಸಿದ್ದಾರೆ. ಹೀಗಾಗಿ ಗುಂಡಿಗಳಿಗೆ ಮಣ್ಣು ಹಾಕಿ, ಮುಚ್ಚಿದ್ದಾರೆ. ಪೊಲೀಸ್ ಕೆಲಸದಲ್ಲಿದ್ದರೂ ಸ್ವತಃ ತಾವೇ ಗುಂಡಿ ಮುಚ್ಚಿದ್ದಕ್ಕೆ ಜನರು ಶ್ಲಾಘಿಸಿದ್ದಾರೆ.

ಮಣ್ಣು ತುಂಬಿ ರಸ್ತೆಯಲ್ಲಿದ್ದ ಗುಂಡಿ ಮುಚ್ಚಿದ ಕಾನ್ಸ್‌ಟೇಬಲ್; ಸಂಚಾರಿ ಠಾಣೆ ಪಿಸಿ ಚಂದ್ರಕಾಂತ್ ಕೆಲಸಕ್ಕೆ ಸಾರ್ವಜನಿಕರ ಮೆಚ್ಚುಗೆ
ಮಣ್ಣು ತುಂಬಿ ರಸ್ತೆಯಲ್ಲಿದ್ದ ಗುಂಡಿ ಮುಚ್ಚಿದ ಕಾನ್ಸ್‌ಟೇಬಲ್
Follow us
TV9 Web
| Updated By: preethi shettigar

Updated on: Sep 26, 2021 | 10:23 AM

ಕಲಬುರಗಿ: ರಸ್ತೆಯಲ್ಲಿದ್ದ ಗುಂಡಿಗೆ ಮಣ್ಣು ತುಂಬಿ ಮುಚ್ಚಿದ ಕಾನ್ಸ್‌ಟೇಬಲ್ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಸಂಚಾರಿ ಠಾಣೆ ಪಿಸಿ ಚಂದ್ರಕಾಂತ್ ಕಲಬುರಗಿ ನಗರದ ಆಳಂದ ಚೆಕ್‌ಪೋಸ್ಟ್‌ನಲ್ಲಿದ್ದ ಗುಂಡಿಗಳನ್ನು ಮುಚ್ಚಿದ್ದಾರೆ. ಸಂಚಾರಿ ಪೊಲೀಸ್ ಠಾಣೆ 2 ರಲ್ಲಿ ಕಾರ್ಯನಿರ್ವಹಿಸುವ ಚಂದ್ರಕಾಂತ್, ನಿನ್ನೆ (ಸೆಪ್ಟೆಂಬರ್ 25) ಸ್ವತಃ ತಾವೇ ಗುಂಡಿಗಳನ್ನು ಮುಚ್ಚಿ ವಿಭಿನ್ನ ಕಾರ್ಯಕ್ಕೆ ಪಾತ್ರರಾಗಿದ್ದಾರೆ.

ದ್ವಿಚಕ್ರ ವಾಹನ ಸವಾರರು ಈ ಗುಂಡಿಯಲ್ಲಿ ಬಿದ್ದು ಗಾಯಗೊಳ್ಳುತ್ತಿರುವುದನ್ನು ಕಂಡ ಪಿಸಿ ಚಂದ್ರಕಾಂತ್, ಇದಕ್ಕೆ ಪರಿಹಾರ ನೀಡಲು ಯೋಚಿಸಿದ್ದಾರೆ. ಹೀಗಾಗಿ ಗುಂಡಿಗಳಿಗೆ ಮಣ್ಣು ಹಾಕಿ, ಮುಚ್ಚಿದ್ದಾರೆ. ಪೊಲೀಸ್ ಕೆಲಸದಲ್ಲಿದ್ದರೂ ಸ್ವತಃ ತಾವೇ ಗುಂಡಿ ಮುಚ್ಚಿದ್ದಕ್ಕೆ ಜನರು ಶ್ಲಾಘಿಸಿದ್ದಾರೆ.

ಈ ಹಿಂದೆ ಮಂಗಳೂರಿನಲ್ಲಿಯೂ ಸಹ ಕರ್ತವ್ಯನಿರತ ಕಾನ್ಸ್​​ಟೇಬಲ್​ಗಳು ಅಪಘಾತವಾಗದಂತೆ ಸಾರ್ವಜನಿಕರ ನೆರವಿಗೆ ನಿಂತಿದ್ದಾರೆ.

ಮಂಗಳೂರು: ಅವಘಡ ಸಂಭವಿಸದಂತೆ ಎಚ್ಚರವಹಿಸಿ ರಸ್ತೆಯಲ್ಲಿ ಬಿದ್ದಿದ್ದ ಆಯಿಲ್​ಗೆ ಮರಳು ಹಾಕಿದ ಕಾನ್ಸ್​ಟೇಬಲ್​ ಪೊಲೀಸರು ಕೇವಲ ತಮಗೆ ವಹಿಸಿದ ಕರ್ತವ್ಯವನ್ನು ಸರಿಯಾಗಿ ಮಾಡುತ್ತಾರೆ ಎಂಬ  ವಿಚಾರಗಳನ್ನು ನಾವು ಪ್ರತಿನಿತ್ಯ ನೋಡುತ್ತಿರುತ್ತೇವೆ. ಆದರೆ ಮಂಗಳೂರಿನ ಈ ಪೊಲೀಸರಿಬ್ಬರು ತಮ್ಮ ಕರ್ತವ್ಯದ ನಡುವೆಯೂ ಸಮಯಪ್ರಜ್ಞೆಯನ್ನು ಮೆರೆದಿದ್ದಾರೆ. ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯ ಉತ್ತರ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಕಾನ್ಸ್​ಟೇಬಲ್​ಗಳು ಸಾಮಾಜಿಕ ಕಳಕಳಿ ಮೆರೆದು ಈಗ ಪೊಲೀಸ್ ಹಿರಿಯ ಅಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಮಂಗಳೂರಿನ ಪಿವಿಎಸ್ ಸರ್ಕಲ್ ಬಳಿ ಪೊಲೀಸ್ ಕಾನ್ಸ್​ಟೇಬಲ್​ಗಳಾದ ಶಂಕರ್ ಮತ್ತು ಸತೀಶ್ ಹೋಗುತ್ತಿದ್ದರು. ಈ ವೇಳೆ ಸರ್ಕಲ್​ನಲ್ಲಿ ಇಂಜಿನ್ ಆಯಿಲ್ ಚೆಲ್ಲಿ ಎರಡು ಮೂರು ಬೈಕ್​ಗಳು ಸ್ಕಿಡ್ ಆಗಿ ಬಿದ್ದುದನ್ನು ಗಮನಿಸಿದ್ದಾರೆ‌. ಮುಂದಿನ ಅಪಾಯವನ್ನು ಅರಿತ ಪೊಲೀಸ್ ಕಾನ್ಸ್​ಟೇಬಲ್​ಗಳಿಬ್ಬರು ಅಲ್ಲಿಗೆ ಮರಳನ್ನು ತರಿಸಿ ಹಾಕಿ ಅದನ್ನು ಗುಡಿಸಿ ಆಯಿಲ್ ಹೋಗುವಂತೆ ಮಾಡಿದ್ದಾರೆ‌‌.

ಪೊಲೀಸ್ ಕಮಿಷನರ್​ನಿಂದ ಮೆಚ್ಚುಗೆ‌! ಇವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಕುಮಾರ್ ಅವರು ಪೊಲೀಸ್ ಕಾನ್ಸ್​ಟೇಬಲ್​ಗಳ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಸಿಬ್ಬಂದಿಗಳಾದ ಶಂಕರ್ ಮತ್ತು ಸತೀಶ್ ರನ್ನು ತಮ್ಮ ಕಚೇರಿಗೆ ಕರೆಸಿ ಡಿಸಿಪಿ, ಎಸಿಪಿ ಸೇರಿದಂತೆ ತಮ್ಮ ಸಿಬ್ಬಂದಿಗಳ ಸಮ್ಮುಖದಲ್ಲಿ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನ ಮಾಡಿದ್ದಾರೆ.

ಇದನ್ನೂ ಓದಿ: ಅವಘಡ ಸಂಭವಿಸದಂತೆ ಎಚ್ಚರವಹಿಸಿ ರಸ್ತೆಯಲ್ಲಿ ಬಿದ್ದಿದ್ದ ಆಯಿಲ್​ಗೆ ಮರಳು ಹಾಕಿದ ಕನ್ಸ್​ಟೇಬಲ್ಸ್​​; ಪೊಲೀಸ್ ಕಮಿಷನರ್​ನಿಂದ ಮೆಚ್ಚುಗೆ‌​

ಕಾನ್ಸ್‌ಟೇಬಲ್‌ಗೆ ಪೇಟ ತೊಡಿಸಿ ಸನ್ಮಾನ; ಶಿವು ಉತ್ತಮ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಪಂತ್ ಶ್ಲಾಘನೆ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ