ಕಾನ್ಸ್‌ಟೇಬಲ್‌ಗೆ ಪೇಟ ತೊಡಿಸಿ ಸನ್ಮಾನ; ಶಿವು ಉತ್ತಮ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಪಂತ್ ಶ್ಲಾಘನೆ

ಬಕ್ರೀದ್ ಹಿನ್ನಲೆ ನೆನ್ನೆ ರಾತ್ರಿ ಪೊಲೀಸ್ ಆಯುಕ್ತರಾದ ಕಮಲ್‌ಪಂತ್‌ ಸಿಟಿ ರೌಂಡ್ಸ್‌ ಹಾಕಿದ್ದರು. ಈ ವೇಳೆ ಕಮಲ್‌ಪಂತ್ ಅವರನ್ನು ಸನ್ಮಾನಿಸಲು ಮುಸ್ಲಿಮರು ಆಗಮಿಸಿದ್ದರು, ಆಗ ಸನ್ಮಾನಿಸಬೇಕಿರುವುದು ನನಗಲ್ಲ ಎಂದು ಪೊಲೀಸ್ ಕಾನ್ಸ್‌ಟೇಬಲ್‌ ಶಿವು ಅವರಿಗೆ ಸನ್ಮಾನಿಸಿದ್ದಾರೆ.

ಕಾನ್ಸ್‌ಟೇಬಲ್‌ಗೆ ಪೇಟ ತೊಡಿಸಿ ಸನ್ಮಾನ; ಶಿವು ಉತ್ತಮ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಪಂತ್ ಶ್ಲಾಘನೆ
ಶಿವು ಉತ್ತಮ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಪಂತ್ ಶ್ಲಾಘನೆ

ಬೆಂಗಳೂರು: ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್‌ ಅವರು ಬೆಂಗಳೂರಿನ ಕೆ.ಜಿ.ಹಳ್ಳಿ ಠಾಣೆ ಕಾನ್ಸ್‌ಟೇಬಲ್‌ ಶಿವುಗೆ ಪೇಟ ತೋಡಿಸಿ, ಶಾಲು ಹೊದಿಸಿ ಸನ್ಮಾನಿಸಿದ್ದಾರೆ. ಬಕ್ರೀದ್ ಹಿನ್ನಲೆ ನೆನ್ನೆ ರಾತ್ರಿ ಪೊಲೀಸ್ ಆಯುಕ್ತರಾದ ಕಮಲ್‌ಪಂತ್‌ ಸಿಟಿ ರೌಂಡ್ಸ್‌ ಹಾಕಿದ್ದರು. ಈ ವೇಳೆ ಕಮಲ್‌ಪಂತ್ ಅವರನ್ನು ಸನ್ಮಾನಿಸಲು ಮುಸ್ಲಿಮರು ಆಗಮಿಸಿದ್ದರು, ಆಗ ಸನ್ಮಾನಿಸಬೇಕಿರುವುದು ನನಗಲ್ಲ ಎಂದು ಪೊಲೀಸ್ ಕಾನ್ಸ್‌ಟೇಬಲ್‌ ಶಿವು ಅವರಿಗೆ ಸನ್ಮಾನಿಸಿದ್ದಾರೆ.

ನಿನ್ನೆ ರಾತ್ರಿ ಶಿವಾಜಿನಗರ ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ, ಗೋವಿಂದಪುರ, ಜೆಜೆನಗರ, ಪಾದರಾಯನಪುರ ಚಾಮರಾಜಪೇಟೆ, ಹೆಣ್ಣೂರು, ಬಾಣಸವಾಡಿ, ಕೋರಮಂಗಲ ಸೇರಿ ಹಲವು ಠಾಣೆಗೆ ಕಮಲ್​ಪಂತ್ ಭೇಟಿ‌ ನೀಡಿದ್ದರು. ಈ ವೇಳೆ ಸದಾಕಾಲ ಫೀಲ್ಡ್​ನಲ್ಲಿ ಸಾರ್ವಜನಿಕರ ಜತೆ ಸೇವೆ ಮಾಡುವ ಪೊಲೀಸ್ ಕಾನ್ಸ್ ಟೇಬಲ್​ಗಳಿಗೆ ಗೌರವ ಸಲ್ಲಬೇಕು ಎಂದು ಕೆ.ಜಿ.ಹಳ್ಳಿ ಏರಿಯಾದ ಬಂದೋಬಸ್ತ್ ನೋಡಿಕೊಳ್ಳುತ್ತಿದ್ದ ಕೆ.ಜಿ.ಹಳ್ಳಿ ಠಾಣೆ ಕಾನ್ಸ್​ಟೇಬಲ್ ಶಿವು ಅವರಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇನ್ನು ಕೆ.ಜಿ.ಹಳ್ಳಿಯಲ್ಲಿ ಪೊಲೀಸ್ ಗಸ್ತು ಹಾಗೂ ಬೀಟ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಕಮಲ್​ಪಂತ್ ಕೆ.ಜಿ.ಹಳ್ಳಿ ಠಾಣೆಯಲ್ಲಿ ಯಾರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಡಿಸಿಪಿ ಹಾಗೂ ಎಸಿಪಿ ಅವರಿಂದ ಮಾಹಿತಿ ಪಡೆದಿದ್ದಾರೆ. ಡಿಸಿಪಿ ಶರಣಪ್ಪ ಹಾಗೂ ಎಸಿಪಿ ನಿಂಗಣ್ಣ ಸಕ್ರಿ ಕಾನ್ಸ್‌ಟೇಬಲ್‌ ಶಿವು ಹೆಸರನ್ನು ಸೂಚಿಸಿದ್ದಾರೆ. ಈ ವೇಳೆ ನೈಟ್ ಬೀಟ್​ನಲ್ಲಿದ್ದ ಕಾನ್ಸ್‌ಟೇಬಲ್‌ ಶಿವು ಅವರನ್ನು ಕೆ.ಜಿ.ಹಳ್ಳಿ ಠಾಣೆಗೆ ಕರೆಸಿದ್ದು, ಕಮಿಷನರ್ ಕಮಲ್​ಪಂತ್ ಸಾರ್ವಜನಿಕರ ಮುಂದೆ ಕಾನ್ಸ್‌ಟೇಬಲ್‌ ಶಿವುಗೆ ಶಾಲು ಹೊದಿಸಿ ಹಾರ ಹಾಕಿ ಸನ್ಮಾನ ಮಾಡಿದ್ದಾರೆ.

ಇದನ್ನೂ ಓದಿ:
ಮಾರ್ಗಸೂಚಿ ಉಲ್ಲಂಘಿಸಿದರೆ ಕಾನೂನಿನಡಿ ಮಾತ್ರ ಕ್ರಮಕೈಗೊಳ್ಳಿ. ಅನಗತ್ಯವಾಗಿ ಬಲ ಪ್ರಯೋಗ ಮಾಡಬಾರದು: ಆಯುಕ್ತ ಕಮಲ್ ಪಂತ್ ಟ್ವೀಟ್

ಹು- ಧಾ ಪಾಲಿಕೆ ಚುನಾವಣೆಗೆ ಸಿದ್ಧತೆ ನಡೆಸಿದ್ದ ರೌಡಿಗಳಿಗೆ ಶಾಕ್ ಕೊಟ್ಟ ಪೊಲೀಸ್ ಕಮೀಷನರ್ ಲಾಭುರಾಮ್