ಮಾರ್ಗಸೂಚಿ ಉಲ್ಲಂಘಿಸಿದರೆ ಕಾನೂನಿನಡಿ ಮಾತ್ರ ಕ್ರಮಕೈಗೊಳ್ಳಿ. ಅನಗತ್ಯವಾಗಿ ಬಲ ಪ್ರಯೋಗ ಮಾಡಬಾರದು: ಆಯುಕ್ತ ಕಮಲ್ ಪಂತ್ ಟ್ವೀಟ್
ಲಾಕ್ ಡೌನ್ ಅವಧಿಯಲ್ಲಿ ಕೆಲಸಕ್ಕೆ ಹೋಗಿಬರುವಾಗ ಅಥವಾ ಅಗತ್ಯ ಚಟುವಟಿಕೆ ಕೈಗೊಳ್ಳಲು ಯಾವುದೇ ಸಮಸ್ಯೆ ಎದುರಾದರೆ ಇಂಟಲಿಜೆನ್ಸ್ ವಿಭಾಗದ ಡಿಸಿಪಿ ಸಂತೋಶ್ ಬಾಬು, ಐಪಿಎಸ್, ಅವರನ್ನು ದೂರವಾಣಿ ಸಂಖ್ಯೆ 080-2294 2354 ಮೂಲಕ ಸಂಪರ್ಕಿಸಬಹುದು ಎಂದೂ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚಿಸಿದ್ದಾರೆ.
ಬೆಂಗಳೂರು: ಕೊರೊನಾ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ಇಂದಿನಿಂದ ಅತಿಬಿಗಿಯಾದ ಕ್ರಮಗಳನ್ನು ಕೈಗೊಂಡಿದೆ. ಮತ್ತು ಅದನ್ನು ಜಾರಿಗೆ ತರುವ ಹೊಣೆಗಾರಿಕೆಯನ್ನು ರಾಜ್ಯ ಪೊಲೀಸರ ಹೆಗಲಿಗೆ ಹಾಕಿದೆ. ಈ ಮಧ್ಯೆ ಬೆಂಗಳೂರು ಪೊಲೀಸರು ಸೇರಿದಂರೆ ರಾಜ್ಯಾದ್ಯಂತ ಅನೇಕ ಕಡೆ ಪೊಲೀಸರು ಅತ್ಯುತ್ಸಾಹದಲ್ಲಿ ಕೆಲವೆಡೆ ಜನತೆಯ ಬಲ ಪ್ರಯೋಗ ಮಾಡಿದ್ದಾರೆ ಎಂಬ ಆರೋಪಗಳು, ನಿದರ್ಶನಗಳು ಕಂಡುಬಂದಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಟ್ವೀಟ್ ಮಾಡಿ, ತಮ್ಮ ಪೊಲೀಸ್ ಸಿಬ್ಬಂದಿಗೆ ಕಿವಿಮಾತು ಹೇಳಿದ್ದಾರೆ.
ಲಾಕ್‌ಡೌನ್ ಮಾರ್ಗಸೂಚಿ ಉಲ್ಲಂಘನೆ ಮಾಡಿದರೆ ಕಾನೂನಿನಡಿ ಮಾತ್ರ ಪೊಲೀಸರು ಕ್ರಮಕೈಗೊಳ್ಳಬೇಕು. ಬಲ ಪ್ರಯೋಗ ಮಾಡಬಾರದು ಎಂದು ತಮ್ಮ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಟ್ವೀಟ್ ಮಾಡಿದ್ದಾರೆ.
ಒಂದು ವೇಳೆ ಸಾರ್ವಜನಿಕರು ಲಾಕ್ ಡೌನ್ ಮಾರ್ಗಸೂಚಿ ಉಲ್ಲಂಘಿಸಿದ್ದು ಕಂಡುಬಂದಲ್ಲಿ ಮಾತ್ರ ಕಾನೂನಿನ ಅಡಿ ಸಿಬ್ಬಂದಿ ಕ್ರಮ ಕೈಗೊಳ್ಳಬೇಕು. ಅದರ ಹೊರತಾಗಿ ಬೇರೆ ಯಾವುದೇ ರೀತಿಯ ಬಲ ಪ್ರಯೋಗ ಮಾಡಬಾರದು ಎಂಬ ಸೂಚನೆ ನೀಡಲಾಗಿದೆ. ಮನೆಯಲ್ಲೇ ಇರಿ, ಸುರಕ್ಷಿತವಾಗಿ ಇರಿ. ಕೊರೊನಾ ಹರಡುವುದನ್ನು ತಡೆಯಲು ದಯವಿಟ್ಟು ಸಹಕರಿಸಲು ಎಂದೂ ಅವರು ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಲಾಕ್ ಡೌನ್ ಅವಧಿಯಲ್ಲಿ ಕೆಲಸಕ್ಕೆ ಹೋಗಿಬರುವಾಗ ಅಥವಾ ಅಗತ್ಯ ಚಟುವಟಿಕೆ ಕೈಗೊಳ್ಳಲು ಯಾವುದೇ ಸಮಸ್ಯೆ ಎದುರಾದರೆ ಇಂಟಲಿಜೆನ್ಸ್ ವಿಭಾಗದ ಡಿಸಿಪಿ ಸಂತೋಶ್ ಬಾಬು, ಐಪಿಎಸ್, ಅವರನ್ನು ದೂರವಾಣಿ ಸಂಖ್ಯೆ 080-2294 2354 ಮೂಲಕ ಸಂಪರ್ಕಿಸಬಹುದು ಎಂದೂ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚಿಸಿದ್ದಾರೆ.
ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಟ್ವೀಟ್ ಸಾರಾಂಶ ಇಲ್ಲಿದೆ: Contrary to the videos doing rounds on Social Media, @BlrCityPolice has been strictly advised to only take action strictly as per law, in case of anybody violates lock-down guidelines. They have been advised not to use any kind of force in this regard.
In case of any issue regarding travel to the place of work or carrying out permitted activities during the lockdown, DCP Intelligence Shri. Santhosh Babu, IPS, may be contacted on 080-2294 2354.
Contrary to the videos doing rounds on Social Media, @BlrCityPolice has been strictly advised to only take action strictly as per law, in case of anybody violates lock-down guidelines. They have been advised not to use any kind of force in this regard. (1/2)
— Kamal Pant, IPS (@CPBlr) May 10, 2021
(Bangalore city commissioner kamal pant on reports of cops beating up people during covid curfew)
ಇದನ್ನೂ ಓದಿ: ಜಮೀರ್ ಖಾನ್, ಮಧು ಬಂಗಾರಪ್ಪ, ಸೌಮೇಂದು ಮುಖರ್ಜಿ ಪತ್ನಿ ಮತ್ತು ಕಮಲ್ ಪಂತ್ ಪತ್ನಿಗೆ ಕೊರೊನಾ
Published On - 4:50 pm, Mon, 10 May 21