ಜಮೀರ್ ಖಾನ್‌, ಮಧು ಬಂಗಾರಪ್ಪ, ಸೌಮೇಂದು ಮುಖರ್ಜಿ ಪತ್ನಿ ಮತ್ತು ಕಮಲ್ ಪಂತ್ ಪತ್ನಿಗೆ ಕೊರೊನಾ

ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಪತ್ನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಜೊತೆಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಪತ್ನಿಗೂ ಕೊರೊನಾ ದೃಢಪಟ್ಟಿದೆ.

ಜಮೀರ್ ಖಾನ್‌, ಮಧು ಬಂಗಾರಪ್ಪ, ಸೌಮೇಂದು ಮುಖರ್ಜಿ ಪತ್ನಿ ಮತ್ತು ಕಮಲ್ ಪಂತ್ ಪತ್ನಿಗೆ ಕೊರೊನಾ
ಶಾಸಕ ಜಮೀರ್ ಅಹ್ಮದ್
Ayesha Banu

|

Apr 22, 2021 | 3:41 PM

ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಖಾನ್‌ ಹಾಗೂ ಮಾಜಿ ಶಾಸಕ ಮಧು ಬಂಗಾರಪ್ಪಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಆ್ಯಂಟಿಜೆನ್ ಟೆಸ್ಟ್ ವೇಳೆ ಜಮೀರ್ ಅಹ್ಮದ್ಗೆ ಕೊರೊನಾ ಸೋಂಕು ದೃಢವಾಗಿದ್ದು ಚಿಕ್ಕಪುಟ್ಟ ರೋಗ ಲಕ್ಷಣಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮನೆಯಲ್ಲೇ ಐಸೋಲೇಷನ್‌ನಲ್ಲಿರಲು ಜಮೀರ್ ಖಾನ್‌ ನಿರ್ಧರಿಸಿದ್ದಾರೆ. ಕಳೆದ ಬಾರಿಯೂ ಜಮೀರ್​ಗೆ ಕೊರೊನಾ ಸೋಂಕು ತಗುಲಿತ್ತು

ಇನ್ನು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರ ಪತ್ನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಜೊತೆಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಪತ್ನಿಗೂ ಕೊರೊನಾ ದೃಢಪಟ್ಟಿದೆ. ಕಮಲ್ ಪಂತ್ ಮತ್ತು ಸೌಮೇಂದು ಮುಖರ್ಜಿಗೆ ಕೊರೊನಾ ಟೆಸ್ಟ್ ಮಾಡಿದ್ದು ಇಬ್ಬರ ಕೊವಿಡ್ ಟೆಸ್ಟ್ ವರದಿಯೂ ನೆಗೆಟಿವ್ ಬಂದಿದೆ.

ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೂ ಕೊರೊನಾ ತಗುಲಿದ್ದು ಇಂದು ಬಿ.ಎಸ್. ಯಡಿಯೂರಪ್ಪ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆ ಸೇರಿಕೊಂಡಿದ್ದಾರೆ.

ಇದನ್ನೂ ಓದಿ: ಕೊರೊನಾ ಸೋಂಕಿಗೆ ತುತ್ತಾಗಿದ್ದ ಬಿ.ಎಸ್​.ಯಡಿಯೂರಪ್ಪ ಮತ್ತು ಮೊಮ್ಮಗಳು ಸೌಂದರ್ಯ ಇಬ್ಬರೂ ಆಸ್ಪತ್ರೆಯಿಂದ ಡಿಸ್ಚಾರ್ಜ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada