ಪುರುಷರ ಒಳಉಡುಪು ಜಾಹೀರಾತಿನಲ್ಲಿ ರಶ್ಮಿಕಾ ಮಂದಣ್ಣ; ಇದರ ಕಾನ್ಸೆಪ್ಟ್​ ನೋಡಿ ಹೆಣ್ಮಕ್ಕಳು ಸಹಿಸ್ತಾರಾ?

ಸ್ಟಾರ್​ ಕಲಾವಿದರು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವಾಗ ಅದರ ಕಾನ್ಸೆಪ್ಟ್​ ಬಗ್ಗೆಯೂ ಎಚ್ಚರಿಕೆ ವಹಿಸಬೇಕಾಗುತ್ತದೆ. ಒಂದು ವೇಳೆ ಎಚ್ಚರ ತಪ್ಪಿದರೆ ಅದು ವಿವಾದಕ್ಕೂ ಕಾರಣ ಆಗುತ್ತದೆ. ರಶ್ಮಿಕಾ ಮಂದಣ್ಣ ನಟಿಸಿರುವ ಹೊಸ ಜಾಹೀರಾತಿನ ಬಗ್ಗೆ ಚರ್ಚೆ ಆಗುತ್ತಿದೆ.

ಪುರುಷರ ಒಳಉಡುಪು ಜಾಹೀರಾತಿನಲ್ಲಿ ರಶ್ಮಿಕಾ ಮಂದಣ್ಣ; ಇದರ ಕಾನ್ಸೆಪ್ಟ್​ ನೋಡಿ ಹೆಣ್ಮಕ್ಕಳು ಸಹಿಸ್ತಾರಾ?
ರಶ್ಮಿಕಾ ಮಂದಣ್ಣ, ವಿಕ್ಕಿ ಕೌಶಲ್​

ನಟಿ ರಶ್ಮಿಕಾ ಮಂದಣ್ಣ ಅವರಿಗೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಇದೆ. ಸಿನಿಮಾ ಮಾತ್ರವಲ್ಲದೇ ಅವರು ಜಾಹೀರಾತು ಕ್ಷೇತ್ರದಲ್ಲೂ ಮಿಂಚುತ್ತಿದ್ದಾರೆ. ಪ್ರತಿಷ್ಠಿತ ಬ್ರ್ಯಾಂಡ್​ಗಳು ಅವರನ್ನು ರಾಯಭಾರಿಯಾಗಿ ನೇಮಕ ಮಾಡಿಕೊಳ್ಳುತ್ತಿವೆ. ಅವುಗಳ ಜಾಹೀರಾತಿನಲ್ಲಿ ನಟಿಸುವ ಮೂಲಕ ರಶ್ಮಿಕಾ ಕೈ ತುಂಬ ಸಂಭಾವನೆ ಪಡೆಯುತ್ತಿದ್ದಾರೆ. ಇತ್ತೀಚೆಗೆ ಅವರು ಪುರುಷರ ಒಳಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್​ ಸ್ಟಾರ್​ ನಟ ವಿಕ್ಕಿ ಕೌಶಲ್​ ಮತ್ತು ರಶ್ಮಿಕಾ ಮಂದಣ್ಣ ಅವರು ಇದರಲ್ಲಿ ಜೊತೆಯಾಗಿ ನಟಿಸಿದ್ದಾರೆ. ಕೆಲವು ಕಾರಣಗಳಿಂದಾಗಿ ಈ ಜಾಹೀರಾತು ಹೈಲೈಟ್​ ಆಗುತ್ತಿದೆ. ಅದರ ಕಾನ್ಸೆಪ್ಟ್​ ಕೂಡ ಚರ್ಚೆಗೆ ಒಳಗಾಗುತ್ತಿದೆ.

ಈ ಜಾಹೀರಾತಿನಲ್ಲಿ ಬರುವ ದೃಶ್ಯ ಈ ರೀತಿ ಇದೆ. ರಶ್ಮಿಕಾ ಮಂದಣ್ಣ ಯೋಗ ಟೀಚರ್​ ಆಗಿರುತ್ತಾರೆ. ಅವರ ಕ್ಲಾಸ್​ನಲ್ಲಿ ವಿಕ್ಕಿ ಕೌಶಲ್​ ಸೇರಿದಂತೆ ಕೆಲವರು ಯೋಗ ಮಾಡುತ್ತ ಇರುತ್ತಾರೆ. ಎರಡೂ ಕೈ ಮೇಲೆ ಎತ್ತಿರುವ ಭಂಗಿಯಲ್ಲಿ ವಿಕ್ಕಿ ಕೌಶಲ್​ ನಿಂತುಕೊಂಡಿರುವಾಗ ಸೊಂಟದ ಭಾಗದಲ್ಲಿ ಅವರ ಒಳಉಡುಪಿನ ಪಟ್ಟಿ ಕಾಣಿಸುತ್ತದೆ. ರಶ್ಮಿಕಾ ಅದನ್ನು ಕಂಡು ಆಕರ್ಷಿತರಾಗುತ್ತಾರೆ. ಯೋಗ ಹೇಳಿಕೊಡುವುದನ್ನೇ ನಿಲ್ಲಿಸಿ, ಒಂದು ಕ್ಷಣ ಮೈಮರೆತು ಬಿಡುತ್ತಾರೆ!

ಅದರದ್ದೇ ಇನ್ನೊಂದು ಜಾಹೀರಾತಿನಲ್ಲೂ ಇದೇ ರೀತಿ ಆಗುತ್ತದೆ. ಆಗ ತಾನೇ ಯೋಗ ಕ್ಲಾಸ್​ ಕೊಠಡಿಗೆ ವಿಕ್ಕ ಕೌಶಲ್​ ಎಂಟ್ರಿ ನೀಡುತ್ತಾರೆ. ಬೇಕಂತಲೇ ಅವರ ಯೋಗ ಮ್ಯಾಟ್​​ ಅನ್ನು ಎತ್ತರದ ಜಾಗದಲ್ಲಿ ರಶ್ಮಿಕಾ ಇಟ್ಟಿರುತ್ತಾರೆ. ಅದನ್ನು ತೆಗೆದುಕೊಳ್ಳಲು ವಿಕ್ಕಿ ಕೌಶಲ್​ ಕೈ ಎತ್ತಿ ಕಷ್ಟಪಡುವಾಗ ಅವರ ಒಳಉಡುಪಿನ ಪಟ್ಟಿ ಮತ್ತೆ ಕಾಣಿಸುತ್ತದೆ. ರಶ್ಮಿಕಾ ಅದನ್ನು ನೋಡಿ ಖುಷಿಪಡುತ್ತಾರೆ. ಸದ್ಯ ಯೂಟ್ಯೂಬ್​ನಲ್ಲೂ ಈ ಜಾಹೀರಾತುಗಳು ಬಿತ್ತರ ಆಗುತ್ತಿವೆ.

ಸ್ಟಾರ್​ ಕಲಾವಿದರು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವಾಗ ಅದರ ಕಾನ್ಸೆಪ್ಟ್​ ಬಗ್ಗೆಯೂ ಎಚ್ಚರಿಕೆ ವಹಿಸಬೇಕಾಗುತ್ತದೆ. ಪುರುಷರ ಒಳಉಡುಪು ನೋಡಿ ಮಹಿಳೆ ಆಕರ್ಷಿತಳಾಗುತ್ತಾಳಾ? ಈ ಜಾಹೀರಾತಿನ ಮೂಲಕ ಹೆಣ್ಮಕ್ಕಳ ಮನಸ್ಥಿತಿಯನ್ನು ತಪ್ಪಾಗಿ ಬಿಂಬಿಸಲಾಗಿದೆಯಾ? ಒಂದು ವೇಳೆ ಈ ಜಾಹೀರಾತಿನಲ್ಲಿ ಹುಡುಗಿ ಜಾಗದಲ್ಲಿ ಹುಡುಗ ಇದ್ದು, ಆಕೆಯ ಒಳಉಡುಪು ಕಂಡು ಹುಡುಗನೇ ಈ ರೀತಿ ವರ್ತಿಸಿದ್ದರೆ ಅದು ವಿವಾದಕ್ಕೆ ಕಾರಣ ಆಗುತ್ತಿರಲಿಲ್ಲವೇ? ಈ ರೀತಿ ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ.

ಸಿನಿಮಾ ಬಗ್ಗೆ ಹೇಳುವುದಾದರೆ ರಶ್ಮಿಕಾ ಈಗ ಬಾಲಿವುಡ್​ನಲ್ಲಿ ‘ಮಿಷನ್​ ಮಜ್ನು’ ಹಾಗೂ ‘ಗುಡ್​​ಬೈ’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಟಾಲಿವುಡ್​ನಲ್ಲಿ ಅಲ್ಲು ಅರ್ಜುನ್​ ಜೊತೆ ನಟಿಸಿರುವ ‘ಪುಷ್ಪ’ ಚಿತ್ರ ಈ ವರ್ಷ ಕ್ರಿಸ್​ಮಸ್​ ಹಬ್ಬದ ಪ್ರಯುಕ್ತ ರಿಲೀಸ್​ ಆಗಲಿದೆ. ದುಲ್ಖರ್​ ಸಲ್ಮಾನ್​ ನಟನೆಯ ಹೊಸ ಚಿತ್ರದಲ್ಲಿ ರಶ್ಮಿಕಾ ಅತಿಥಿ ಪಾತ್ರ ಮಾಡುತ್ತಾರೆ ಎಂಬ ಮಾಹಿತಿ ಕೂಡ ಕೇಳಿಬರುತ್ತಿದೆ.

ಇದನ್ನೂ ಓದಿ:

ರಶ್ಮಿಕಾ ಮುಂಬೈಗೆ ಹೋದ್ಮೇಲೆ ಪ್ರಚಾರಕ್ಕಾಗಿ ಮಾಡಿದ ಕೆಲಸ ಏನು? ಬಾಲಿವುಡ್​ನಲ್ಲಿ ಇದು ಕಾಮನ್​

ಮಾಡೋಕೆ ಏನೂ ಕೆಲಸ ಇಲ್ಲದಿದ್ದರೆ ರಶ್ಮಿಕಾ ಮಂದಣ್ಣ ಏನು ಮಾಡ್ತಾರೆ? ಫೋಟೋ ಸಹಿತ ಸಿಕ್ತು ಉತ್ತರ

Click on your DTH Provider to Add TV9 Kannada