AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಶ್ಮಿಕಾ ಮುಂಬೈಗೆ ಹೋದ್ಮೇಲೆ ಪ್ರಚಾರಕ್ಕಾಗಿ ಮಾಡಿದ ಕೆಲಸ ಏನು? ಬಾಲಿವುಡ್​ನಲ್ಲಿ ಇದು ಕಾಮನ್​

ಬಾಲಿವುಡ್​ನ ಹಲವು ಹೀರೋಯಿನ್​ಗಳು ಕೂಡ ಇದೇ ತಂತ್ರವನ್ನು ಬಳಸುತ್ತಾರೆ. ಹಾಗಾಗಿ ಬಹುತೇಕ ಸ್ಟಾರ್​ ಕಲಾವಿದರು ತಮ್ಮದೇ ಆದಂತಹ ಪಿಆರ್​ ಟೀಮ್​ ನೇಮಿಸಿಕೊಂಡಿರುತ್ತಾರೆ.

ರಶ್ಮಿಕಾ ಮುಂಬೈಗೆ ಹೋದ್ಮೇಲೆ ಪ್ರಚಾರಕ್ಕಾಗಿ ಮಾಡಿದ ಕೆಲಸ ಏನು? ಬಾಲಿವುಡ್​ನಲ್ಲಿ ಇದು ಕಾಮನ್​
ರಶ್ಮಿಕಾ ಮಂದಣ್ಣ
TV9 Web
| Edited By: |

Updated on: Sep 25, 2021 | 9:05 AM

Share

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಹೋದಲ್ಲಿ ಬಂದಲ್ಲಿ ಸುದ್ದಿ ಆಗುತ್ತಾರೆ. ಅವರು ಏನೇ ಮಾಡಿದರೂ ಅದು ರಾಷ್ಟ್ರಮಟ್ಟದಲ್ಲಿ ಸೌಂಡು ಮಾಡುತ್ತದೆ. ಅಷ್ಟರಮಟ್ಟಿಗೆ ಅವರಿಗೆ ಜನಪ್ರಿಯತೆ ಸಿಕ್ಕಿದೆ. ವಿಶೇಷವೆಂದರೆ, ಇಷ್ಟೆಲ್ಲ ಇದ್ದರೂ ಕೂಡ ಅವರೀಗ ಪ್ರಚಾರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ದಕ್ಷಿಣ ಭಾರತದಲ್ಲಿ ಮಿಂಚಿದ ಬಳಿಕ ಅವರು ಬಾಲಿವುಡ್​ಗೆ ಕಾಲಿಟ್ಟಿರುವುದರಿಂದ ಅವರು ಪ್ರಚಾರದ ಕಡೆಗೆ ಹೆಚ್ಚು ಗಮನ ಹರಿಸಬೇಕಾಗಿರುವುದು ಅನಿವಾರ್ಯ ಆಗಿದೆ. ಅದಕ್ಕಾಗಿ ಅವರು ಮಾಡಿರುವುದೇನು? ಪ್ರಚಾರಕ್ಕಾಗಿ ಒಂದು ಹೊಸ ತಂಡವನ್ನೇ (ಪಿಆರ್ ಟೀಮ್​) ನೇಮಿಸಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಬಗ್ಗೆ ಸಿಕ್ಕಾಪಟ್ಟೆ ಸುದ್ದಿ ಆಗುತ್ತಿದೆ ನಿಜ. ಆದರೆ ಅದು ಸಾಕಾಗುತ್ತಿಲ್ಲ. ಪ್ಯಾನ್​ ಇಂಡಿಯಾ ಹೀರೋಯಿನ್​ ಆಗಿ ಬೆಳೆದಿರುವ ಅವರು ಸದಾ ಕಾಲ ಸುದ್ದಿಯಲ್ಲಿದ್ದರೆ ಮಾತ್ರ ಅವರ ಚಾರ್ಮ್​ ಹೆಚ್ಚುತ್ತದೆ. ಬಾಲಿವುಡ್​ನ ಹಲವು ಹೀರೋಯಿನ್​ಗಳು ಕೂಡ ಇದೇ ತಂತ್ರವನ್ನು ಬಳಸುತ್ತಾರೆ. ಹಾಗಾಗಿ ಬಹುತೇಕ ಸ್ಟಾರ್​ ಕಲಾವಿದರು ತಮ್ಮದೇ ಆದಂತಹ ಪಿಆರ್​ ಟೀಮ್​ ನೇಮಿಸಿಕೊಂಡಿರುತ್ತಾರೆ. ಹಿಂದಿ ಚಿತ್ರರಂಗದಲ್ಲಿ ಇದು ತುಂಬ ಕಾಮನ್​. ಈಗ ರಶ್ಮಿಕಾ ಕೂಡ ಪಿಆರ್​ ಟೀಮ್​ ಇಟ್ಟುಕೊಂಡಿದ್ದಾರೆ ಎಂಬ ಮಾತು ಕೇಳಿಬಂದಿದೆ.

ರಶ್ಮಿಕಾ ಬಗ್ಗೆ ಯಾವ ರೀತಿಯ ಸುದ್ದಿಗಳು ಪ್ರಕಟ ಆಗುತ್ತಿವೆ? ಅವರ ವ್ಯಕ್ತಿತ್ವಕ್ಕೆ ಧಕ್ಕೆ ಆಗುವಂತ ವದಂತಿಗಳನ್ನು ಹಬ್ಬಿಸಲಾಗುತ್ತಿದೆಯೇ? ರಶ್ಮಿಕಾ ಮಾಡಿದ ಉತ್ತಮ ಕೆಲಸಗಳು ಹೈಲೈಟ್​ ಆಗಿವೆಯೇ ಎಂಬಿತ್ಯಾದಿ ವಿಷಯಗಳ ಬಗ್ಗೆಯೂ ಈ ಪಿಆರ್​ ತಂಡದವರು ಕಣ್ಣಿಟ್ಟಿರಬೇಕಾಗುತ್ತದೆ. ಒಟ್ಟಿನಲ್ಲಿ ಮುಂಬೈ ಸೇರಿಕೊಂಡ ಮೇಲೆ ರಶ್ಮಿಕಾಗೆ ಪೈಪೋಟಿ ಹೆಚ್ಚಿದೆ. ಬಾಲಿವುಡ್​ ಹೀರೋಯಿನ್​ಗಳ ಜೊತೆ ಅವರು ಸ್ಪರ್ಧೆ ಮಾಡಬೇಕಿದೆ. ಹಾಗಾಗಿ ಪ್ರತ್ಯೇಕ ಪಿಆರ್​ ಟೀಮ್​ ನೇಮಿಸಿಕೊಳ್ಳುವುದು ಅವರಿಗೆ ಅನಿವಾರ್ಯ ಆಗಿದೆ. ಟಾಲಿವುಡ್​ನಲ್ಲಿ ಅಲ್ಲು ಅರ್ಜುನ್​, ಪ್ರಭಾಸ್​, ಪೂಜಾ ಹೆಗ್ಡೆ, ರಾಮ್​ ಚರಣ್​ ಮುಂತಾದವರು ಕೂಡ ಪಿಆರ್​ ತಂಡವನ್ನು ನೇಮಿಸಿಕೊಂಡಿದ್ದಾರೆ.

ಸದ್ಯ ರಶ್ಮಿಕಾ ಕೈಯಲ್ಲಿ ಹಲವು ಸಿನಿಮಾಗಳಿವೆ. ಸಿದ್ದಾರ್ಥ್​ ಮಲ್ಹೋತ್ರಾ ಜೊತೆ ಅವರು ನಟಿಸುತ್ತಿರುವ ‘ಮಿಷನ್​ ಮಜ್ನು’ ಚಿತ್ರಕ್ಕೆ ಶೂಟಿಂಗ್​ ಮುಗಿದಿದೆ. ಅಮಿತಾಭ್​ ಬಚ್ಚನ್​ ಜೊತೆ ‘ಗುಡ್​ಬೈ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್​ಗೆ ಜೋಡಿಯಾಗಿ ಅಭಿನಯಿಸಿರುವ ‘ಪುಷ್ಪ’ ಸಿನಿಮಾ ಡಿಸೆಂಬರ್​ನಲ್ಲಿ ಕ್ರಿಸ್​​ಮಸ್​ ಪ್ರಯುಕ್ತ ತೆರೆಕಾಣಲಿದೆ.

ಇದನ್ನೂ ಓದಿ:

ದೀಪಿಕಾರನ್ನು ಕಾಪಿ ಮಾಡಿ ಸಿಕ್ಕಿ ಬಿದ್ರಾ ರಶ್ಮಿಕಾ ಮಂದಣ್ಣ? ಸೈಮಾದಲ್ಲಿ ಕಣ್ಣು ಕುಕ್ಕಿದ ಗೌನ್​

ಕನ್ನಡ ಸಿನಿಮಾ ಮಾಡೋಕೆ ಈಗ ಟೈಮ್​ ಇಲ್ಲ; ರಶ್ಮಿಕಾ ಮಂದಣ್ಣ ನೇರ ಉತ್ತರ