‘ಡ್ರಗ್ಸ್ ಎಂಬುದು ಸಿನಿಮಾರಂಗಕ್ಕೆ ಸೀಮಿತ ಅಲ್ಲ, ಇದು ಟಿಆರ್ಪಿ ವಿಷಯವಲ್ಲ’: ನಟ ಚೇತನ್
ಡ್ರಗ್ಸ್ ವಿಚಾರದಲ್ಲಿ ಒಬ್ಬಿಬ್ಬರ ತಪ್ಪು ಹುಡುಕಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ದೊಡ್ಡ ಮಟ್ಟದಲ್ಲಿ ತನಿಖೆ ಆಗಬೇಕು ಎಂದು ನಟ ‘ಆ ದಿನಗಳು’ ಚೇತನ್ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ಕಳಂಕ ಅಂಟಿರುವುದು ನಿಜ. ಆದರೆ ಕೆಲವೇ ಹೀರೋಯಿನ್ಗಳ ಮೇಲೆ ಆರೋಪ ಹೊರಿಸಿ, ಟಿಆರ್ಪಿ ಪಡೆಯುವುದರಿಂದ ಸಮಸ್ಯೆ ಪರಿಹಾರ ಆಗುವುದಿಲ್ಲ ಎಂದು ನಟ ‘ಆ ದಿನಗಳು’ ಚೇತನ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಹಲವು ವಿಚಾರಗಳನ್ನು ಹಂಚಿಕೊಂಡರು.
‘ಡ್ರಗ್ಸ್ ಕೆಟ್ಟದ್ದು ಎಂಬುದರ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು. ಜನ ಜಾಗೃತಿ ಮೂಡಿಸಬೇಕು. ಬರೀ ಸಿನಿಮಾರಂಗಕ್ಕೆ ಸೀಮಿತ ಮಾಡುವುದು ಸರಿಯಲ್ಲ. ಸಮಸ್ಯೆಯನ್ನು ಬಗೆಹರಿಸಬೇಕು ಎಂದರೆ, ಅದಾನಿ ಪೋರ್ಟ್ನಲ್ಲಿ ಕೋಟ್ಯಂತರ ಮೌಲ್ಯದ ಡ್ರಗ್ಸ್ ಸಿಕ್ಕಿರುವ ಬಗ್ಗೆ ತನಿಖೆ ಆಗಬೇಕು. ಅದನ್ನು ಬಿಟ್ಟು ಸಿನಿಮಾರಂಗದವರನ್ನು ಇಟ್ಟುಕೊಂಡು ಟಿಆರ್ಪಿಗಾಗಿ ಬಲಿಪಶು ಮಾಡುವುದು ಸರಿಯಲ್ಲ’ ಎಂದು ಚೇತನ್ ಹೇಳಿದ್ದಾರೆ.
ಇದನ್ನೂ ಓದಿ:
ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್: ಬೆಂಗಳೂರು ಬಿಟ್ಟು ಹೊರ ಹೋದ 10-15 ನಟ ನಟಿಯರು!
‘ನಾನು ಎಲ್ಲೂ ಹಾರಿ ಹೋಗಿಲ್ಲ, ಮುಂಬೈಗೆ ಹೋಗಿದ್ದು ವೈಯಕ್ತಿಕ ಕೆಲಸಕ್ಕಾಗಿ‘; ಆ್ಯಂಕರ್ ಅನುಶ್ರೀ ಸ್ಪಷ್ಟನೆ
Published on: Sep 25, 2021 09:57 AM
Latest Videos