ಭರ್ಜರಿಯಾಗಿ ರೆಡಿ ಆಗ್ತಿದೆ ಕಿಚ್ಚನ ‘ಕೋಟಿಗೊಬ್ಬ 3’ ಕಟೌಟ್; ಸಂಭ್ರಮಕ್ಕೆ ತಯಾರಿ ಹೇಗಿದೆ ನೋಡಿ
‘ಕೋಟಿಗೊಬ್ಬ 3’ ಚಿತ್ರ ರಿಲೀಸ್ಗೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ಸುದೀಪ್ ಅವರ ಕಟೌಟ್ಗಳು ಇನ್ನೇನು ಕೆಲವೇ ದಿನಗಳಲ್ಲಿ ರಾರಾಜಿಸಲಿವೆ. ಕಟೌಟ್ ತಯಾರಿಸುವ ಕಾರ್ಯ ಭರದಿಂದ ಸಾಗಿದೆ. ಗಾಂಧಿನಗರದ ಮುಖ್ಯ ಚಿತ್ರಮಂದಿರದ ಎದುರು ಕಿಚ್ಚನ ಕಟೌಟ್ ಕಂಗೊಳಿಸಲಿದೆ.
ಕೊರೊನಾ ವೈರಸ್ ನಿಯಂತ್ರಣಕ್ಕೆ ಸರ್ಕಾರ ಹೇರಿದ್ದ ನಿಯಮಗಳ ಕಾರಣದಿಂದ ಗಾಂಧಿನಗರ ಮಂಕಾಗಿತ್ತು. ಕೇವಲ ಶೇ.50ರಷ್ಟು ಆಸನ ಭರ್ತಿಗೆ ಅವಕಾಶ ಇರುವುದರಿಂದ ಅನೇಕ ಸಿನಿಮಾಗಳ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿತ್ತು. ಆದರೆ ಈಗ ಹೌಸ್ಫುಲ್ ಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡಿದೆ. ಅ.1ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ. ಹಾಗಾಗಿ ಸ್ಯಾಂಡಲ್ವುಡ್ನ ಕೆಲವು ಸ್ಟಾರ್ ಚಿತ್ರಗಳ ಬಿಡುಗಡೆಗೆ ಸಕಲ ಸಿದ್ಧತೆ ನಡೆದಿದೆ.
ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಕಿಚ್ಚ ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಕೂಡ ಪ್ರಮುಖವಾಗಿದೆ. ಸುದೀಪ್ ಅವರ ಕಟೌಟ್ಗಳು ಇನ್ನೇನು ಕೆಲವೇ ದಿನಗಳಲ್ಲಿ ರಾರಾಜಿಸಲಿವೆ. ಕಟೌಟ್ ತಯಾರಿಸುವ ಕಾರ್ಯ ಭರದಿಂದ ಸಾಗಿದೆ. ಗಾಂಧಿನಗರದ ಮುಖ್ಯ ಚಿತ್ರಮಂದಿರದ ಎದುರು ಕಿಚ್ಚನ ಕಟೌಟ್ ಕಂಗೊಳಿಸಲಿದೆ. ಅಲ್ಲದೆ, ದುನಿಯಾ ವಿಜಯ್ ನಟನೆಯ ‘ಸಲಗ’, ಶಿವರಾಜ್ಕುಮಾರ್ ಅಭಿನಯದ ‘ಭಜರಂಗಿ 2’ ಚಿತ್ರಗಳು ಕೂಡ ಬಿಡುಗಡೆಗೆ ಸಜ್ಜಾಗಿವೆ. ಈ ಸ್ಟಾರ್ ಕಲಾವಿದರ ಕಟೌಟ್ಗಳು ಕೂಡ ಸಿದ್ಧಗೊಳ್ಳುತ್ತಿವೆ.
ಇದನ್ನೂ ಓದಿ:
ಕೊರೊನಾಗೆ ಸೆಡ್ಡು ಹೊಡೆದು ಹಳೇ ಚಾರ್ಮ್ ಪಡೆದ ಸುದೀಪ್; ಫೋಟೋ ನೋಡಿ ವಾವ್ ಎಂದ ಫ್ಯಾನ್ಸ್
ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದ ಸುದೀಪ್; ಕಿಚ್ಚನ ದರ್ಶನಕ್ಕೆ ಮುಗಿಬಿದ್ದ ಫ್ಯಾನ್ಸ್
ಲ್ಯಾಂಡಿಂಗ್ ವೇಳೆ ತೊಂದರೆ ಅನುಭವಿಸಿದ ರಾಹುಲ್ ಇದ್ದ ವಿಮಾನ
ಇಂದು ಈ ರಾಶಿಯವರು ನಿಮ್ಮ ವೀಕ್ನೆಸ್ ಅನ್ನು ಯಾರಿಗೂ ಹೇಳಿಕೊಳ್ಳಬೇಡಿ!
ಕುಂಭಾಭಿಷೇಕಕ್ಕೆ ಹೊಸ ಬಣ್ಣದಲ್ಲಿ ಸಿಂಗಾರಗೊಂಡ ಮಧುರೈ ಮೀನಾಕ್ಷಿ ದೇವಸ್ಥಾನ
ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ: ರಾಜ್ಯಕ್ಕೆ ಮಾದರಿಯಾದ ರಾಮಪುರಂ ಕುಟುಂಬ

