ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್​: ಬೆಂಗಳೂರು ಬಿಟ್ಟು ಹೊರ ಹೋದ 10-15 ನಟ ನಟಿಯರು!

ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್​: ಬೆಂಗಳೂರು ಬಿಟ್ಟು ಹೊರ ಹೋದ 10-15 ನಟ ನಟಿಯರು!
CCB ಕಚೇರಿ

ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಜೋರಾಗಿರುವ ಬೆನ್ನಲ್ಲೇ 10-15 ನಟ ನಟಿಯರು ಬೆಂಗಳೂರು ಬಿಟ್ಟು ಹೊರ ಹೋಗಿದ್ದಾರೆ! ಅದರಲ್ಲೂ ರಾಗಿಣಿ ದ್ವಿವೇದಿಗೆ ನಿನ್ನೆ ಸಿಸಿಬಿ ನೋಟಿಸ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಈ ನಟ ನಟಿಯರು ಆತಂಕಕ್ಕೀಡಾಗಿದ್ದಾರೆ.

ರಾಗಿಣಿಗೆ ಸಿಸಿಬಿ ನೋಟಿಸ್ ವಿಚಾರ ಹಲವು ನಟ ನಟಿಯರಿಗೆ ನಡುಕ ರಾಗಿಣಿ ಬಳಿಕ ತಮ್ಮ ಹೆಸರೂ ಹೊರಬರುವ ಆತಂಕ ಇವರನ್ನು ಕಾಡತೊಡಗಿದೆ. ತಮಗೂ ನೋಟಿಸ್ ಬರಬಹುದೆಂಬ ಆತಂಕದಲ್ಲಿರುವ 10ಕ್ಕೂ ಹೆಚ್ಚು ಕಲಾವಿದರು ಈಗಾಗಲೇ ಬೆಂಗಳೂರು ಬಿಟ್ಟು ಹೋಗಿದ್ದಾರೆ ಎಂದು ತಿಳಿದುಬಂದಿದೆ.

ಈ 10-15 ಮಂದಿಯದ್ದೂ ಕೂಡ ಸ್ಯಾಂಡಲ್ ವುಡ್ ನಲ್ಲಿ ಚಿರಪರಿಚಿತವಾದ ಹೆಸರುಗಳಾಗಿವೆ. ಇವರೆಲ್ಲ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕ್ತಿರೋದು ನೋಡಿದ್ರೆ ಅನುಮಾನ ಶುರುವಾಗಿದೆ. ಜೊತೆಗೆ ಕೆಲವರು ಬೆಂಗಳೂರನ್ನ ಬಿಟ್ಟು ಬೇರೆಡೆ ಠಿಕಾಣಿ ಹೂಡಿದ್ದಾರೆ ಎಂದು ತಿಳಿದುಬಂದಿದೆ.

Click on your DTH Provider to Add TV9 Kannada