‘ಗುಂಜನ್‌ ಸಕ್ಸೇನಾ: ದಿ ಕಾರ್ಗಿಲ್‌ ಗರ್ಲ್‌’ ಚಿತ್ರ ವಿವಾದ: ಕರಣ್​ಗೆ ದಿಲ್ಲಿ ಹೈಕೋರ್ಟ್‌ ನೋಟಿಸ್

  • Publish Date - 5:28 pm, Wed, 2 September 20 Edited By: sadhu srinath Follow us -
'ಗುಂಜನ್‌ ಸಕ್ಸೇನಾ: ದಿ ಕಾರ್ಗಿಲ್‌ ಗರ್ಲ್‌' ಚಿತ್ರ ವಿವಾದ: ಕರಣ್​ಗೆ ದಿಲ್ಲಿ ಹೈಕೋರ್ಟ್‌ ನೋಟಿಸ್

ನವದೆಹಲಿ: ಬಾಲಿವುಡ್‌ ನಿರ್ದೇಶಕ, ನಿರ್ಮಾಪಕ ಕರಣ್‌ ಜೋಹರ್‌ ಟೈಂ ಈಗ ಸರಿಯಿಲ್ಲ ಅಂತಾ ಕಾಣುತ್ತೆ. ಯಾಕಂದ್ರೆ ಒಂದಲ್ಲ ಒಂದು ವಿವಾದ ಅವರನ್ನು ಹುಡುಕಿ ಬರುತ್ತಿದೆ. ಈಗ ‘ಗುಂಜನ್‌ ಸಕ್ಸೇನಾ: ದಿ ಕಾರ್ಗಿಲ್‌ ಗರ್ಲ್‌’ ಚಿತ್ರದ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ ಅವರಿಗೆ ನೋಟಿಸ್‌ ಜಾರಿ ಮಾಡಿದೆ. ಕಾರ್ಗಿಲ್‌ ಗರ್ಲ್‌ ಎಂದೇ ಖ್ಯಾತಿಯಾಗಿರುವ ಗುಂಜನ್‌ ಸಕ್ಸೇನಾ ಜೀವನಾಧರಿತ ಚಲನಚಿತ್ರ ಈಗ ವಿವಾದದಲ್ಲಿ ಸಿಲುಕಿದೆ. ಚಿತ್ರದಲ್ಲಿ ಭಾರತೀಯ ವಾಯುಸೇನೆಯನ್ನು ಕೆಟ್ಟದಾಗಿ, ಮಹಿಳಾ ವಿರೋಧಿ ಎಂಬರ್ಥ ಬರುವಂತೆ ಚಿತ್ರಿಸಲಾಗಿದೆ ಎಂದು ಆರೋಪಿಸಿ ಕೇಂದ್ರ ಸರ್ಕಾರ ಹಾಗೂ ಭಾರತೀಯ ವಾಯುಸೇನೆಯು ಚಿತ್ರದ ಪ್ರಸಾರ ಸ್ಥಗಿತಗೊಳಿಸುವಂತೆ ದೆಹಲಿ ಹೈಕೋರ್ಟ್‌ ಮೊರೆ ಹೋಗಿವೆ.

ಆದ್ರೆ ಚಿತ್ರದ ಪ್ರಸಾರಕ್ಕೆ ತಡೆ ನೀಡಲು ನಿರಾಕರಿಸಿರುವ ದೆಹಲಿ ಹೈಕೋರ್ಟ್‌, ವಿಚಾರಣೆ ನಡೆಸಲು ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಕರಣ್‌ ಜೋಹರ್‌ ಅವರ ಧರ್ಮಾ ಪ್ರೊಡಕ್ಷನ್ಸ್‌ ಹಾಗೂ ನಿರ್ದೇಶಕ ಮತ್ತು ಗುಂಜನ್‌ ಸಕ್ಸೇನಾಗೆ ನೋಟಿಸ್‌ ಜಾರಿ ಮಾಡಿದೆ.

Click on your DTH Provider to Add TV9 Kannada