ಅಮೆರಿಕದ ಗುಪ್ತಚರ ಇಲಾಖೆ ಅಧಿಕಾರಿಯಲ್ಲಿ ಕಾಣಿಸಿಕೊಂಡಿರುವ ಹವಾನಾ ಸಿಂಡ್ರೋಮ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ
ಈ ಕಾಯಿಲೆಯ ಪ್ರಮುಖ ಲಕ್ಷಣವೆಂದರೆ ಅದಕ್ಕೆ ಈಡಾದರಿಗೆ ಸುಖಾಸುಮ್ಮನೆ ವಿಚಿತ್ರ ಬಗೆಯ ಶಬ್ದಗಳು ಕೇಳಿಸಲಾರಂಭಿಸುತ್ತವೆ. ವಾಕರಿಕೆ ಬಂದಾತಾಗುವುದು, ಸ್ಮೃತಿ ತಪ್ಪುವುದು, ತಲೆನೋವು, ಮರೆಗುಳಿತನ, ಮತ್ತು ಸಮಚಿತ್ತ ಕಳೆದುಕೊಳ್ಳುವುದು ಮೊದಲಾದವು ಸಹ ಹವಾನಾ ಸಿಂಡ್ರೋಮ್ ರೋಗಲಕ್ಷಣಗಳಾಗಿವೆ.
ಸಿಐಎ ನಿರ್ದೇಶಕ ವಿಲಿಯಮ್ ಬರ್ನ್ಸ್ ಅವರೊಂದಿಗೆ ಈ ತಿಂಗಳ ಆರಂಭದಲ್ಲಿ ಭಾರತ ಪ್ರವಾಸಕ್ಕೆ ಆಗಮಿಸಿದ್ದ ಅಮೆರಿಕ ಗುಪ್ತಚರ ಇಲಾಖೆಯ ಒಬ್ಬ ಅಧಿಕಾರಿಯಲ್ಲಿ ಹವಾನಾ ಸಿಂಡ್ರೋಮ್ ರೋಗಲಕ್ಷಣಗಳು ಕಾಣಿಸಿಕೊಂಡಿವೆಯಂತೆ. ಅಮೇರಿಕಾ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಈ ಬೆಳವಣಿಗೆಯು ವಿಲಿಯಮ್ ಬರ್ನ್ಸ್ ಗೆ ಕೋಪ ತರಿಸಿದೆ. ದಾಖಲೆಗಳ ಪ್ರಕಾರ ಗುಪ್ತಚರ ಅಧಿಕಾರಿಯಲ್ಲಿ ರೋಗಲಕ್ಷಣಗಳು ಭಾರತದಲ್ಲಿ ಕಾಣಿಸಿಕೊಂಡಿರುವುದರಿಂದ ಅದು ಎರಡು ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದೆಂದು ಹೇಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಹವಾನಾ ಸಿಂಡ್ರೋಮ್ ಅಂದರೇನು, ರೋಗ ಲಕ್ಷಣಗಳು ಎಂಥವು ಅನ್ನುವುದನ್ನು ತಿಳಿದುಕೊಳ್ಳವುದು ಅತ್ಯವಶ್ಯಕವಾಗಿದೆ. ಇದೊಂದು ಅಪ್ಪಟ ಮಾನಸಿಕ ಕಾಯಿಲೆ. ಬೇರೆ ಬೇರೆ ದೇಶಗಳ ತಮ್ಮ ರಾಯಭಾರಿ ಮತ್ತು ಗುಪ್ತಚರ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ಅಮೇರಿಕದ ಅಧಿಕಾರಿಗಳು ಇದರಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಕಾಯಿಲೆಯ ಪ್ರಮುಖ ಲಕ್ಷಣವೆಂದರೆ ಅದಕ್ಕೆ ಈಡಾದರಿಗೆ ಸುಖಾಸುಮ್ಮನೆ ವಿಚಿತ್ರ ಬಗೆಯ ಶಬ್ದಗಳು ಕೇಳಿಸಲಾರಂಭಿಸುತ್ತವೆ. ವಾಕರಿಕೆ ಬಂದಾತಾಗುವುದು, ಸ್ಮೃತಿ ತಪ್ಪುವುದು, ತಲೆನೋವು, ಮರೆಗುಳಿತನ, ಮತ್ತು ಸಮಚಿತ್ತ ಕಳೆದುಕೊಳ್ಳುವುದು ಮೊದಲಾದವು ಸಹ ಹವಾನಾ ಸಿಂಡ್ರೋಮ್ ರೋಗಲಕ್ಷಣಗಳಾಗಿವೆ.
ಹೆಸರೇ ಸೂಚಿಸುವ ಹಾಗೆ ಹವಾನಾ ಸಿಂಡ್ರೋಮ್ ಮೊದಲಿಗೆ ಪತ್ತೆಯಾಗಿದ್ದು ಕ್ಯೂಬಾನಲ್ಲಿ. ನಿಮಗೆ ಗೊತ್ತಿರುವ ಹಾಗೆ ಹವಾನಾ ಕ್ಯೂಬಾದ ರಾಜಧಾನಿಯಾಗಿದೆ. ಅಮೇರಿಕಾವು 2016ರಲ್ಲಿ ಹವಾನಾನಲ್ಲಿ ರಾಯಭಾರಿ ಕಚೇರಿ ಆರಂಭಿಸಿ ಒಂದು ವರ್ಷ ಕಳೆದ ನಂತರ ಅಲ್ಲಿ ಕೆಲಸ ಮಾಡುತ್ತಿದ್ದ ಗುಪ್ತಚರ ಅಧಿಕಾರಿಗಳು, ರಾಯಾಭಾರಿ ಕಚೇರಿಯಲ್ಲಿದ್ದ ಇತರ ಸಿಬ್ಬಂದಿ ವರ್ಗದವರು ತಮ್ಮ ಮೆದುಳಿನಲ್ಲಿ ಇದ್ದಕ್ಕಿದ್ದಂತೆ ಒತ್ತಡ ಸ್ಫೋಟಗೊಳ್ಳುವಂಥ ಸ್ಥಿತಿಯನ್ನು ಅನುಭವಿಸತೊಡಗಿದರು. ಅದಾದ ಮೇಲೆ ಅವರನ್ನು ತಲೆನೋವು ಕಾಡಲಾರಂಭಿಸಿತ್ತು.
ನಿದ್ರಾಹೀನತೆಯಿಂದಲೂ ಬಳಲಾರಂಭಿಸಿದ್ದ ಅವರು ಕೆಲ ಸಲ ದಿಗಿಲುಗೊಂಡಂತೆ ವರ್ತಿಸಲಾರಂಭಿಸಿದ್ದರು.
ಈ ರೋಗ ಯಾಕೆ ಕಾಣಿಸಿಕೊಳ್ಳುತ್ತದೆ ಅಂತ ನಿಖರವಾಗಿ ಗೊತ್ತಾಗಿಲ್ಲ. ಆದರೆ ಅದಕ್ಕೆ ಈಡಾದವರ ಮೆದುಳಿನ ಮೇಲೆ ದೀರ್ಘಾವಧಿ ಪರಣಾಮ ಬೀರುತ್ತದೆ ಎಂದು ಹೇಳಲಾಗುತ್ತಿದೆ. ಸಿಂಡ್ರೋಮ್ಗೆ ತುತ್ತಾದ ಕೆಲ ಅಮೆರಿಕ ಅಧಿಕಾರಿಗಳು ಸಮರ್ಥವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಅಂತ ಹೇಳಿ ನಿವೃತ್ತಿಗೆ ಮೊದಲೇ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಭಯಾನಕ ವಿಡಿಯೋ: ಮನೆಯೊಂದರ ಈಜುಕೊಳಕ್ಕೆ ಅಪ್ಪಳಿಸಿದ ಲಾವಾರಸ; ಜ್ವಾಲಾಮುಖಿ ತೀವ್ರತೆಗೆ ನಲುಗಿದ ಜನ