AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಟ್ಟ ಮಾತಿನಂತೆ ಗದುಗಿನ ಸೈಕ್ಲಿಸ್ಟ್ ಪವಿತ್ರಾಗೆ ಅತ್ಯಾಧುನಿಕ ರೇಸ್ ಸೈಕಲ್ ನೀಡಿದರು ಸಿ ಎಮ್ ಬೊಮ್ಮಾಯಿ

ಕೊಟ್ಟ ಮಾತಿನಂತೆ ಗದುಗಿನ ಸೈಕ್ಲಿಸ್ಟ್ ಪವಿತ್ರಾಗೆ ಅತ್ಯಾಧುನಿಕ ರೇಸ್ ಸೈಕಲ್ ನೀಡಿದರು ಸಿ ಎಮ್ ಬೊಮ್ಮಾಯಿ

TV9 Web
| Edited By: |

Updated on: Sep 24, 2021 | 10:56 PM

Share

ಅರ್ಥಿಕವಾಗಿ ಹಿಂದುಳಿದ ಕುಟುಂಬದ ಹಿನ್ನೆಲೆಯುಳ್ಳ ಪವಿತ್ರಾಗೆ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತರುವ ಮಹತ್ವಾಕಾಂಕ್ಷೆಯಿದೆ.

ಟಿವಿ9 ಪ್ರಸಾರ ಮಾಡುತ್ತಿರುವ ಸಿಎಮ್ ಸ್ಪೀಕಿಂಗ್ ಲೈವ್ ಕಾರ್ಯಕ್ರಮದ ಸೆಪ್ಟೆಂಬರ್ 9 ರ ಸಂಚಿಕೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಗದಗ ಜಿಲ್ಲೆಯ ಪವಿತ್ರಾ ಕುರ್ತಕೋಟಿ ಹೆಸರಿನ ಸೈಕ್ಲಿಸ್ಟ್ ಗೆ ಸೈಕಲ್ ಕೊಡಿಸುವುದಾಗಿ ಮಾಡಿದ ವಾಗ್ದಾನನ್ನು ಶುಕ್ರವಾರಂದು ನೆರವೇರಿಸಿದರು. ಗದಗಿನ ಪಿಯು ಕಾಲೇಜೊಂದರಲ್ಲಿ ಪ್ರಥಮ ಪಿಯು ವಿದ್ಯಾರ್ಥಿನಿ ಪವಿತ್ರಾ ಅತ್ಯಂತ ಪ್ರತಿಭಾನ್ವಿತ ಸೈಕ್ಲಿಸ್ಟ್ ಆಗಿದ್ದು ರಾಜ್ಯ ಮತ್ತು ರಾಷ್ಟ್ರಮಟ್ಟದ ಸೈಕ್ಲಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ತನ್ನ ಪ್ರತಿಭೆ ಮೆರೆದಿದ್ದಾಳೆ.

ಅರ್ಥಿಕವಾಗಿ ಹಿಂದುಳಿದ ಕುಟುಂಬದ ಹಿನ್ನೆಲೆಯುಳ್ಳ ಪವಿತ್ರಾಗೆ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತರುವ ಮಹತ್ವಾಕಾಂಕ್ಷೆಯಿದೆ. ಸೆಪ್ಟಂಬರ್ 9 ರಂದು ಮುಖ್ಯಮಂತ್ರಿ ಅವರೊಂದಿಗೆ ಲೈವ್ ಇನ್ ಕಾರ್ಯಕ್ರಮದಲ್ಲಿ ಮಾತಾಡಿದಾಗ ಆಕೆ ಅವರಲ್ಲಿ ತನ್ನಾಸೆಯನ್ನು ತೋಡಿಕೊಂಡು ತನ್ನಲ್ಲಿ ಉತ್ತಮ ಗುಣಮಟ್ಟದ ಸೈಕಲ್ ಇಲ್ಲದಿರುವ ವಿಷಯವನ್ನು ಅವರ ಗಮನಕ್ಕೆ ತಂದಳು.

ಅಂದೇ ಮುಖ್ಯಮಂತ್ರಿಗಳು ಈ ಪುಟ್ಟ ಸಾಧಕಿಗೆ ಅತ್ಯಂತ ಆಧುನಿಕ ಮತ್ತು ರೇಸ್ಗಳಲ್ಲಿ ಉಪಯೋಗಿಸುವಂಥ ಸೈಕಲ್ ಕೊಡಿಸುವ ಭರವಸೆಯನ್ನು ನೀಡಿದ್ದರು. ಅ ಭರವಸೆಯನ್ನು ಶುಕ್ರವಾರ ಈಡೇರಿಸಿದರು. ಪವಿತ್ರಾಗೆ ಕೆನಡಾನಲ್ಲಿ ತಯಾರಾಗುವ ಆರ್ಗನ್ 18 ಇ-119 ಸೈಕಲ್ ಅನ್ನು ವಿಧಾನ ಸೌಧದ ಮುಂಭಾಗದಲ್ಲಿ ಬೊಮ್ಮಾಯಿ ಅವರು ಹಸ್ತಾಂತರಿಸಿದರು. ನಮಗೆ ದೊರೆತಿರುವ ಮಾಹಿತಿ ಪ್ರಕಾರ ಈ ಸೈಕಲ್ ಬೆಲೆ 5 ಲಕ್ಷ ರೂಪಾಯಿ!

ಸೈಕಲ್ ಕಂಡು ಆನಂದ ಸಾಗರದಲ್ಲಿ ತೇಲುತ್ತಿದ್ದ ಪವಿತ್ರಾಳ ಅಮಾಯಕ ಮುಖದಲ್ಲಿ ಕನಸು ಈಡೇರಿದ ಸಾರ್ಥಕ ಮುದ್ರೆ ಕಾಣುತಿತ್ತು. ಅದನ್ನು ಸ್ವೀಕರಿಸಿದ ನಂತರ ಆಕೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ ರಾಜ್ಯಕ್ಕೆ ಖ್ಯಾತಿ ತರುವುದಾಗಿ ಭಾವಪರವಶತೆಯಿಂದ ಹೇಳಿದಳು.

ಇದನ್ನೂ ಓದಿ:  Viral Video: ಬೇಕರಿ ತಿಂಡಿ ಪ್ರಿಯರೇ ಎಚ್ಚರ; ಈ ಶಾಕಿಂಗ್ ವಿಡಿಯೋ ನೋಡಿದರೆ ರಸ್ಕ್ ಮುಟ್ಟೋಕೂ ಅಸಹ್ಯ ಪಡ್ತೀರ!