ದೀಪಿಕಾರನ್ನು ಕಾಪಿ ಮಾಡಿ ಸಿಕ್ಕಿ ಬಿದ್ರಾ ರಶ್ಮಿಕಾ ಮಂದಣ್ಣ? ಸೈಮಾದಲ್ಲಿ ಕಣ್ಣು ಕುಕ್ಕಿದ ಗೌನ್​

2018ರಲ್ಲಿ ದೀಪಿಕಾ ಧರಿಸಿದ್ದ ಗೌನ್​ ನೋಡಿ ಫ್ಯಾಷನ್​ ಪ್ರಿಯರು ಖುಷಿ ಆಗಿದ್ದರು. ಅದೇ ವಿನ್ಯಾಸವನ್ನು ಈಗ ರಶ್ಮಿಕಾ ಮಂದಣ್ಣ ಕಾಪಿ ಮಾಡಿದ್ದಾರೆ ಎಂದು ಒಂದು ವರ್ಗದ ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.

ದೀಪಿಕಾರನ್ನು ಕಾಪಿ ಮಾಡಿ ಸಿಕ್ಕಿ ಬಿದ್ರಾ ರಶ್ಮಿಕಾ ಮಂದಣ್ಣ? ಸೈಮಾದಲ್ಲಿ ಕಣ್ಣು ಕುಕ್ಕಿದ ಗೌನ್​
ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ
Follow us
TV9 Web
| Updated By: ಮದನ್​ ಕುಮಾರ್​

Updated on: Sep 24, 2021 | 12:34 PM

ನಟಿ ರಶ್ಮಿಕಾ ಮಂದಣ್ಣ ಏನೇ ಮಾಡಿದರೂ ಅದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತದೆ. ಅಷ್ಟರಮಟ್ಟಿಗೆ ಅವರು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಅವರು ಸೈಮಾ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ವೇಳೆ ಅವರು ಧರಿಸಿದ್ದ ಗೌನ್​ ಸಖತ್​ ಗಮನ ಸೆಳೆಯಿತು. ಅಭಿಮಾನಿಗಳಿಂದ ಮೆಚ್ಚುಗೆಯೂ ವ್ಯಕ್ತವಾಯಿತು. ಕೆಂಪು ಬಣ್ಣದ ಆ ಗೌನ್​ನಲ್ಲಿ ಕಂಗೊಳಿಸಿದ ರಶ್ಮಿಕಾ ಅವರು ರೆಡ್​ ಕಾರ್ಪೆಟ್​ನಲ್ಲಿ ಹೆಜ್ಜೆ ಹಾಕಿ ಸಂಭ್ರಮಿಸಿದರು. ಆದರೆ ಅದರ ಬೆನ್ನಲ್ಲೇ ಕಾಪಿ ಎಂಬ ಆರೋಪ ಕೇಳಿಬಂದಿದೆ. ಈ ಗೌನ್​ ನೋಡಿದ ಬಹುತೇಕರು ದೀಪಿಕಾ ಪಡುಕೋಣೆ ಅವರನ್ನು ನೆನಪು ಮಾಡಿಕೊಂಡಿದ್ದಾರೆ.

ದೀಪಿಕಾ ಪಡುಕೋಣೆ ಅವರು 2018ರಲ್ಲಿ ನಡೆದ ಮೆಟ್​ ಗಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಇದೇ ರೀತಿಯ ಗೌನ್​ ಧರಿಸಿದ್ದರು. ಅದು ಕೂಡ ಕೆಂಪು ಬಣ್ಣದ್ದಾಗಿತ್ತು. ಮೆಟ್​ ಗಾಲಾ ಎಂಬುದು ಪ್ರತಿ ವರ್ಷ ನ್ಯೂಯಾರ್ಕ್​ನಲ್ಲಿ ನಡೆಯುವ ಒಂದು ಫ್ಯಾಷನ್​ ಹಬ್ಬ. ಈ ಸಮಾರಂಭದಲ್ಲಿ ಜಗತ್ತಿನ ಹಲವು ಖ್ಯಾತ ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ. ಅದರಲ್ಲಿ ಪಾಲ್ಗೊಳ್ಳುವ ನಟ-ನಟಿಯರು ಧರಿಸುವ ಬಟ್ಟೆ ಸಿಕ್ಕಾಪಟ್ಟೆ ಹೈಲೈಟ್​ ಆಗುತ್ತದೆ.

2018ರಲ್ಲಿ ದೀಪಿಕಾ ಧರಿಸಿದ್ದ ಗೌನ್​ ನೋಡಿ ಫ್ಯಾಷನ್​ ಪ್ರಿಯರು ಖುಷಿ ಆಗಿದ್ದರು. ಅದೇ ವಿನ್ಯಾಸವನ್ನು ಈಗ ರಶ್ಮಿಕಾ ಕಾಪಿ ಮಾಡಿದ್ದಾರೆ ಎಂದು ಒಂದು ವರ್ಗದ ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ. ಆದರೆ ಅದರ ಬಗ್ಗೆ ರಶ್ಮಿಕಾ ಯಾವುದೇ ಪ್ರತಿಕ್ರಿಯೆ ನೀಡುವ ಗೋಜಿಗೆ ಕೈ ಹಾಕಿಲ್ಲ.

ಈ ಟೀಕೆಗಳೆಲ್ಲ ಏನೇ ಇರಲಿ, ರಶ್ಮಿಕಾ ಪಡೆದಿರುವ ಪ್ರಶಸ್ತಿಗಳ ಮುಂದೆ ಬೇರೇನೂ ಮುಖ್ಯವಾಗುತ್ತಿಲ್ಲ. ಸೈಮಾ ಸಮಾರಂಭದಲ್ಲಿ ಅವರಿಗೆ ಎರಡು ಪ್ರಶಸ್ತಿ ಸಿಕ್ಕಿವೆ. ಕನ್ನಡದಲ್ಲಿ ನಟಿಸಿದ ‘ಯಜಮಾನ’ ಹಾಗೂ ತೆಲುಗಿನಲ್ಲಿ ನಟಿಸಿದ ‘ಡಿಯರ್​ ಕಾಮ್ರೇಡ್​’ ಚಿತ್ರಗಳಿಗೆ ರಶ್ಮಿಕಾ ಪ್ರಶಸ್ತಿ ಪಡೆದಿದ್ದಾರೆ. ಅತ್ಯುತ್ತಮ ನಟಿ (ಕ್ರಿಟಿಕ್ಸ್​) ಅವಾರ್ಡ್​ ಅವರಿಗೆ ಸಿಕ್ಕಿದೆ. ಇದು ಅವರ ಅಭಿಮಾನಿಗಳಿಗೂ ಹೆಮ್ಮೆ ತಂದಿದೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದ ರಶ್ಮಿಕಾ, ಸಂತಸ ವ್ಯಕ್ತಪಡಿಸಿದ್ದರು.

‘ಕಳೆದ ರಾತ್ರಿ ಸ್ಪೆಷಲ್​ ಆಗಿತ್ತು. ಯಜಮಾನ ಮತ್ತು ಡಿಯರ್​ ಕಾಮ್ರೇಡ್​ ಚಿತ್ರಗಳಿಗಾಗಿ ಕನ್ನಡ ಹಾಗೂ ತೆಲುಗಿನಲ್ಲಿ ಪ್ರಶಸ್ತಿ ಪಡೆದಿದ್ದೇನೆ. ಮುಂದೊಂದು ದಿನ ಹಿಂದಿ, ಮಲಯಾಳಂ ಮತ್ತು ತಮಿಳಿನಲ್ಲಿಯೂ ಪಡೆಯುತ್ತೇನೆ. ಥ್ಯಾಂಕ್ಯೂ ಸೈಮಾ. ನನ್ನನ್ನು ನಟಿಯಾಗಿಸಿದ ಪ್ರೀತಿಪಾತ್ರರಿಗೆಲ್ಲ ಧನ್ಯವಾದಗಳು’ ಎಂದು ಅವರು ಪೋಸ್ಟ್​ ಮಾಡಿದ್ದರು.

ಇದನ್ನೂ ಓದಿ:

ಮಾಡೋಕೆ ಏನೂ ಕೆಲಸ ಇಲ್ಲದಿದ್ದರೆ ರಶ್ಮಿಕಾ ಮಂದಣ್ಣ ಏನು ಮಾಡ್ತಾರೆ? ಫೋಟೋ ಸಹಿತ ಸಿಕ್ತು ಉತ್ತರ

ಕನ್ನಡ ಸಿನಿಮಾ ಮಾಡೋಕೆ ಈಗ ಟೈಮ್​ ಇಲ್ಲ; ರಶ್ಮಿಕಾ ಮಂದಣ್ಣ ನೇರ ಉತ್ತರ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ