ಸುಜುಕಿಯ ಹೊಸ ಜಿಎಸ್​ಎಕ್ಸ್ ಎಸ್-1000 ಜಿಟಿ ದ್ವಿಚಕ್ರ ಮುಂದಿನ ವರ್ಷ ಭಾರತದಲ್ಲಿ ಲಾಂಚ್ ಆಗಲಿದೆಯಂತೆ!

ಸುಜುಕಿಯ ಹೊಸ ಜಿಎಸ್​ಎಕ್ಸ್ ಎಸ್-1000 ಜಿಟಿ ದ್ವಿಚಕ್ರ ಮುಂದಿನ ವರ್ಷ ಭಾರತದಲ್ಲಿ ಲಾಂಚ್ ಆಗಲಿದೆಯಂತೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 27, 2021 | 3:54 PM

ಹೊಸ ಜಿ ಎಸ್ ಎಕ್ಸ್ ಎಸ್ 1000 ಜಿಟಿ ಸೂಪರ್‌ಬೈಕ್ ಮಟ್ಟದ ಕಾರ್ಯಕ್ಷಮತೆಯನ್ನು ನೀಡುತ್ತದೆ. ಕಂಪನವನ್ನು ಕಡಿಮೆ ಮಾಡುತ್ತದೆ ಮತ್ತು ರೈಡ್ ಅನ್ನು ಹೆಚ್ಚು ರೋಮಾಂಚಕಾರಿ, ಹೆಚ್ಚು ಆರಾಮದಾಯಕ ಮತ್ತು ಕಡಿಮೆ ಶ್ರಮದಾಯಕವಾಗಿಸುತ್ತದೆ.

ಸೆಪ್ಟೆಂಬರ್ ಮಧ್ಯಭಾಗದಲ್ಲಿ ಸುಜುಕಿ ಮೋಟಾರ್ಸ್ ತನ್ನ ಹೊಸ ಜಿಎಸ್ಎಕ್ಸ್ ಎಸ್-1000 ಜಿಟಿ ದ್ವಿಚಕ್ರ ವಾಹನನದ ಗ್ಲೋಬಲ್ ಲಾಂಚ್ ಮಾಡಿದ್ದು ನಿಮಗೆ ಗೊತ್ತಿರಬಹುದು. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಕಂಪನಿಯು ಈ ಸ್ಪೋರ್ಟ್ ಬೈಕ್ ಅನ್ನು ಮುಂದಿನ ವರ್ಷ ಭಾರತದಲ್ಲಿ ಲಾಂಚ್ ಮಾಡಲಿದೆ. ಸುಜುಕಿ ದಕ್ಷಿಣ ಆಫ್ರಿಕಾ ನೀಡಿರುವ ಮಾಹಿತಿಯೇನೆಂದರೆ, ಕಂಪನಿಯ ಹಿಂದಿನ ಜಿಎಸ್ಎಕ್ಸ್ ಎಸ್ 1000 ಮಾಡೆಲ್ ಗಳಿಗೆ ಆ ದೇಶದಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಸದರಿ ಬೈಕ್ ಗಳು ಪವರ್, ವಿಶ್ವಾಸಾರ್ಹತೆ, ಮತ್ತು ಕೋಮಲತೆಯಿಂದ ಕೂಡಿವೆ ಎಂದು ಜನ ಹೇಳುತ್ತಿದ್ದಾರಂತೆ.

ಹೊಸ ಬೈಕ್ ಹೆಚ್ಚಿನ ಕಾರ್ಯಕ್ಷಮತೆಯ 999cm3 ಫೋರ್-ಸ್ಟ್ರೋಕ್ ಲಿಕ್ವಿಡ್-ಕೂಲ್ಡ್ ಇನ್ಲೈನ್-ಫೋರ್ ಎಂಜಿನ್ ಹೊಂದಿದ್ದು ಅದು ಯೂರೋ 5 ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿದೆ. ಸುಧಾರಿತ ಸಮತೋಲನ ಮತ್ತು ಉತ್ತಮ ಸರ್ವಾಂಗೀಣ ಕಾರ್ಯಕ್ಷಮತೆಯನ್ನು ಸಾಧಿಸಲು ಹೊಸ ಬೈಕ್ ಸಂಪೂರ್ಣ ಪರಿಶೀಲನೆ ಮತ್ತು ನವೀಕರಣಗಳಿಗೆ ಒಳಗಾಗಿದೆ ಎಂದು ಸುಜುಕಿ ಸಂಸ್ಥೆ ಹೇಳಿದೆ.

ಹೊಸ ಜಿ ಎಸ್ ಎಕ್ಸ್ ಎಸ್ 1000 ಜಿಟಿ ಸೂಪರ್‌ಬೈಕ್ ಮಟ್ಟದ ಕಾರ್ಯಕ್ಷಮತೆಯನ್ನು ನೀಡುತ್ತದೆ. ಕಂಪನವನ್ನು ಕಡಿಮೆ ಮಾಡುತ್ತದೆ ಮತ್ತು ರೈಡ್ ಅನ್ನು ಹೆಚ್ಚು ರೋಮಾಂಚಕಾರಿ, ಹೆಚ್ಚು ಆರಾಮದಾಯಕ ಮತ್ತು ಕಡಿಮೆ ಶ್ರಮದಾಯಕವಾಗಿಸುತ್ತದೆ.

ಹೆದ್ದಾರಿಯಲ್ಲಿ ದೂರದ ಪ್ರಯಾಣ ಮಾಡಿತ್ತಿರಿ ಅಥವಾ ಪಟ್ಟಣದ ಸುತ್ತ ಅದನ್ನು ಓಡಿಸುತ್ತಿರಿ; ಅದರ ವಿಶಾಲವಾದ, ನಯವಾದ ಟಾರ್ಕ್ ಕರ್ವ್ ಹೆಚ್ಚಿನ ಸಂಚಿತ ಟಾರ್ಕ್ ಉತ್ಪಾದನೆಯನ್ನು ಒಳಗೊಂಡಂತೆ ನಿರಂತರವಾಗಿ ಇಂಜಿನ್‌ನ ಕಾರ್ಯಾಚರಣ ಶ್ರೇಣಿಯ ಉದ್ದಕ್ಕೂ ಆಪಾರವಾದ ಶಕ್ತಿಯನ್ನು ಒದಗಿಸುತ್ತದೆ.

ಇದು ಈ ಗ್ರ್ಯಾಂಡ್ ಟೂರರ್ ಅನ್ನು ಸ್ಟ್ರೀಟ್ ರೈಡಿಂಗ್‌ನಲ್ಲಿ ಸಮಾನ ಪ್ರವೀಣರನ್ನಾಗಿ ಮಾಡುತ್ತದೆ. ಸವಾರ ಹೆಚ್ಚಿನ ಲೋಡ್ ಮತ್ತು ಪಿಲಿಯನ್ ರೈಡರ್ನೊಂದಿಗೆ ಬೈಕ್ ಓಡಿಸುತ್ತಿದ್ದರೂ ವಾಹನದ ಓಟ ಸರಾಗವಾಗಿರಲಿದೆ.

ಇದನ್ನೂ ಓದಿ:  Viral Video: ಸ್ಟೈಲ್ ಆಗಿ ಡಾನ್ಸ್ ಮಾಡೋದಕ್ಕೆ ಹೋಗಿ ವೇದಿಕೆ ಮೇಲೆ ಪಲ್ಟಿಯಾಗಿ ಬಿದ್ದ ಯುವಕನ ವಿಡಿಯೋ ವೈರಲ್